ಸಿಡ್ನಿ: ಕೇವಲ ಒಂದು ವರ್ಷದ ಹಿಂದೆ ಒಂದು ಜೊತೆ ‘ಶೂ’ಗಾಗಿ ಸಾಮಾಜಿಕ ಜಾಲತಾಣದಲ್ಲಿ ಬೇಡಿಕೆಯಿಟ್ಟಿದ್ದ ಜಿಂಬಾಂಬ್ವೆ ತಂಡದ ಆಟಗಾರನೊಬ್ಬ ಆಸ್ಟ್ರೇಲಿಯಾ ದಲ್ಲಿ 5 ವಿಕೆಟ್ ಪಡೆದು ಜಿಂಬಾಬ್ವೆಯನ್ನು ಗೆಲ್ಲಿಸಿದ್ದಾನೆ. ಈ ಅದ್ಭುತ ಯಶೋಗಾಥೆಗೆ ಸಾಕ್ಷಿಯಾದ ಆಟಗಾರನ ಹೆಸರು ರಯಾನ್ ಬರ್ಲ್ (Ryan Burl ).
ಆಸ್ಟ್ರೇಲಿಯಾ ವಿರುದ್ಧ ಟೌನ್’ಹಿಲ್’ನಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ 3 ವಿಕೆಟ್’ಗಳ ರೋಚಕ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದೆ. ಇತಿಹಾಸ ಯಾಕಂದ್ರೆ ಇದು ಆಸ್ಟ್ರೇಲಿಯಾ ನೆಲದಲ್ಲಿ ಜಿಂಬಾಬ್ವೆಯ ಮೊದಲ ಗೆಲುವು. ಈ ಗೆಲುವಿನ ರೂವಾರಿ ರಯಾನ್ ಬರ್ಲ್. ಆಸ್ಟ್ರೇಲಿಯಾ ವಿರುದ್ಧ ಕೇವಲ 10 ರನ್ನಿಗೆ 5 ವಿಕೆಟ್ ಪಡೆದಿದ್ದ ರಯಾನ್ ಬರ್ಲ್ ಕಾಂಗರೂಗಳನ್ನು 141 ರನ್ನಿಗೆ ಕಟ್ಟಿ ಹಾಕಿದ್ದರು.
ಆಸ್ಟ್ರೇಲಿಯಾ ವಿರುದ್ಧ ರಯಾನ್ ಬರ್ಲ್ 5 ವಿಕೆಟ್ ಪಡೆದು ಜಿಂಬಾಬ್ವೆಯನ್ನು ಗೆಲ್ಲಿಸುತ್ತಿದ್ದಂತೆ ಎಂದು ವರ್ಷದ ಹಿಂದೆ ಬುರ್ಲ್ ಮಾಡಿದ್ದ ಟ್ವೀಟ್ ಒಂದು ವೈರಲ್ ಆಗಿದೆ. ಆ ಟ್ವೀಟ್’ ನಲ್ಲಿ ರಯಾನ್ ಬರ್ಲ್ ಜಿಂಬಾಬ್ವೆ ತಂಡಕ್ಕೆ ಯಾರಾದರೂ ದಯವಿಟ್ಟು ಶೂಗಳನ್ನು ಸ್ಪಾನ್ಸರ್ ಮಾಡಿ ಎಂದು ಮನವಿ ಮಾಡಿ ಮಾಡಿದ್ದರು.
ಜಿಂಬಾಬ್ವೆ ಆಟಗಾರ ರಯಾನ್ ಬರ್ಲ್ಟ್ವೀಟ್ ಮೂಲಕ ಮಾಡಿದ್ದ ಮನವಿಗೆ ಸ್ಪಂದಿಸಿದ್ದ Puma ಕಂಪನಿ ಶೂ ಸ್ಪಾನ್ಸರ್ ಮಾಡಿತ್ತು.
ಜಿಂಬಾಬ್ವೆ ಕ್ರಿಕೆಟ್ ಸಂಸ್ಥೆ ತೀವ್ರ ಆರ್ಥಿಕ ಸಂಕಷ್ಟ ಎದುರಿಸಿದ್ದ ಕಾರಣ ಆಟಗಾರರಿಗೆ ಶೂ ಕೊಡಿಸಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ಜಿಂಬಾಬ್ವೆ ಆಟಗಾರರು ಸಾಮಾಜಿಕ ಜಾಲತಾಣದ ಮೂಲಕ ಪ್ರಾಯೋಜಕತ್ವಕ್ಕೆ ಮನವಿ ಮಾಡಿದ್ದರು. ಹಾಗೆ ಟ್ವೀಟ್ ಮಾಡಿದ್ದವರಲ್ಲಿ ರಯಾನ್ ಬರ್ಲ್ ಕೂಡ ಒಬ್ಬರು. ಈಗ ಅದೇ ಆಟಗಾರ ಆಸ್ಟ್ರೇಲಿಯಾ ನೆಲದಲ್ಲಿ 5 ವಿಕೆಟ್ ಪಡೆಯುವ ಮೂಲಕ ಜಿಂಬಾಬ್ವೆಗೆ ಐತಿಹಾಸಿಕ ಗೆಲುವು ತಂದು ಕೊಟ್ಟಿದ್ದಾರೆ.
ಇದನ್ನೂ ಓದಿ : IPL MS Dhoni goodbye : ಮುಂದಿನ ವರ್ಷ ಐಪಿಎಲ್’ಗ್ ಧೋನಿ ಗುಡ್ ಬೈ, ಕೊನೆಯ ಬಾರಿ ಚೆನ್ನೈ ತಂಡವನ್ನು ಮುನ್ನಡೆಸಲಿದ್ದಾರೆ ಎಂಎಸ್
Ryan Burl He took 5 wickets against the Aussies who demanded a pair of shoes