ಉಡುಪಿ : neet result : ವೈದ್ಯಕೀಯ ಶಿಕ್ಷಣವನ್ನು ಪಡೆಯಬೇಕು ಅಂದರೆ ಅದಕ್ಕೂ ಮುನ್ನ ನೀಟ್ ಪರೀಕ್ಷೆಯನ್ನು ಬರೆಯವುದು ದೇಶದಲ್ಲಿ ಕಡ್ಡಾಯವಾಗಿದೆ.ಒಳ್ಳೆಯ ಕಾಲೇಜಿನಲ್ಲಿ ಪ್ರವೇಶವನ್ನು ಪಡೆಯಬೇಕು ಅಂದರೆ ನೀಟ್ನಲ್ಲಿ ಉತ್ತಮ ಪ್ರದರ್ಶನ ತೋರುವುದು ಅತ್ಯವಶ್ಯಕವಾಗಿದೆ.ಅದೇ ರೀತಿ ನಿನ್ನೆ ಕೂಡ ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ನೀಟ್ ಪರೀಕ್ಷೆಯ ಅಂಕಗಳು ಕೆಲವರಿಗೆ ಸಮಾಧಾನ ತಂದಿದ್ದರೆ ಇನ್ನೂ ಹಲವು ವಿದ್ಯಾರ್ಥಿಗಳಿಗೆ ನಿರೀಕ್ಷೆ ಮಾಡಿದಷ್ಟು ಅಂಕ ಬರಲಿಲ್ಲ ಎಂಬ ಕಾರಣಕ್ಕೆ ದುಃಖ ಕೂಡ ತಂದಿದೆ. ಇದೇ ರೀತಿ ನೀಟ್ ಪರೀಕ್ಷೆ ರ್ಯಾಂಕ್ ಕಡಿಮೆ ಬಂದಿದ್ದಕ್ಕೆ ಮನನೊಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾನೆ.
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ವಿಠಲವಾಡಿ ಎಂಬಲ್ಲಿ ಇಂತಹದ್ದೊಂದು ಘಟನೆ ಸಂಭವಿಸಿದೆ. ವೈದ್ಯಕೀಯ ಶಿಕ್ಷಣವನ್ನು ಪಡೆಯಬೇಕು ಎಂಬ ಹೆಬ್ಬಯಕೆ ಹೊಂದಿದ್ದ ಶಾಯೀಶ್ ಶೆಟ್ಟಿ (18) ನೀಟ್ ಪರೀಕ್ಷೆಯನ್ನು ಎದುರಿಸಿದ್ದ. ಆದರೆ ನಿನ್ನೆ ಬಂದ ನೀಟ್ ಫಲಿತಾಂಶವನ್ನು ಪರಿಶೀಲಿಸಿದ ಸಂದರ್ಭದಲ್ಲಿ ಈತನಿಗೆ ಕಡಿಮೆ ರ್ಯಾಂಕ್ ಬಂದಿದೆ. ತಾನು ಅಂದುಕೊಂಡ ಕಾಲೇಜಿನಲ್ಲಿ ದಾಖಲಾತಿ ಪಡೆಯಲು ಸಾಧ್ಯವಾಗೋದಿಲ್ಲ ಎಂದು ಶಾಯೀಶ್ ನೊಂದುಕೊಂಡಿದ್ದ ಎಂದು ಪೋಷಕರು ಮಾಹಿತಿ ನೀಡಿದ್ದಾರೆ.
ವೈದ್ಯಕೀಯ ಶಿಕ್ಷಣದಲ್ಲಿ ತಾನು ಅಂದುಕೊಂಡ ಸಾಧನೆಯನ್ನು ತನ್ನಿಂದ ಮಾಡಲಾಗುತ್ತಿಲ್ಲ ಎಂದು ಮನನೊಂದ ಶಾಯೀಶ್ ಶೆಟ್ಟಿ ಇಂದು ಮಧ್ಯಾಹ್ನದ ಸುಮಾರಿಗೆ ಅರಾಟೆಯ ಸೇತುವೆ ಬಳಿಗೆ ಬಂದಿದ್ದಾನೆ. ಇಲ್ಲಿಂದ ಈತ ಮೈದುಂಬಿ ಹರಿಯುತ್ತಿದ್ದ ನದಿಗೆ ಹಾರಿದ್ದಾನೆ. ಸ್ಥಳೀಯರೊಬ್ಬರು ಯುವಕ ಈ ರೀತಿ ಮಾಡಿದ್ದನ್ನು ಗಮನಿಸಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಕುಂದಾಪುರ ಠಾಣಾ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಶಾಯೀಶ್ ಶೆಟ್ಟಿಯ ಪತ್ತೆಗಾಗಿ ಹುಡುಕಾಟ ಶುರುವಿಟ್ಟಿದ್ದಾರೆ.
ಶಾಯೀಶ್ ಶೆಟ್ಟಿ ಇಂತಹ ದುಡುಕಿನ ನಿರ್ಧಾರ ಕೈಗೊಂಡಿದ್ದು ಪೋಷಕರಿಗೆ ದೊಡ್ಡ ಆಘಾತವನ್ನೇ ನೀಡಿದೆ. ಶಾಯೀಶ್ ಇಂತಹ ನಿರ್ಧಾರ ಕೈಗೊಳ್ಳುವ ಮುನ್ನ ಜೀವನದಲ್ಲಿ ಇನ್ನೂ ಬಹಳಷ್ಟು ಆಯ್ಕೆಗಳಿವೆ ಎಂದು ಯೋಚನೆ ಮಾಡಿದ್ದರೆ ಇಂದು ತಂದೆ – ತಾಯಿ ಮರುಗುವ ಸ್ಥಿತಿ ಬರುತ್ತಿರಲಿಲ್ಲ. ಸಣ್ಣ ನೋವಿಗಾಗಿ ಶಾಯೀಶ್ ಶೆಟ್ಟಿ ಬದುಕನ್ನೇ ಅಂತ್ಯಗೊಳಿಸುವ ನಿರ್ಧಾರಕ್ಕೆ ಬಂದಿದ್ದು ನಿಜಕ್ಕೂ ದುರಂತವೇ ಸರಿ .
ಇದನ್ನು ಓದಿ :Congress attack On Ministers : ಕಾಣೆಯಾಗಿದ್ದಾರೆ ಸಚಿವರು, ಬಿಜೆಪಿ ಕಾಲೆಳೆದ ‘ಕೈ’
ಇದನ್ನೂ ಓದಿ : NIA attack in Mangalore :ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು: ಮಂಗಳೂರಿನಲ್ಲಿ ಎನ್.ಐ.ಎ ದಾಳಿ
neet result boy who failed to get expected rank ends life