Donald Trump : ಪ್ರಧಾನಿ ಮೋದಿಯನ್ನು ಹಾಡಿಹೊಗಳಿದ ಡೊನಾಲ್ಡ್​ ಟ್ರಂಪ್​ : ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆಯೂ ಸುಳಿವು

Donald Trump : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವಿನ ಬಾಂಧವ್ಯದ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಡೊನಾಲ್ಡ್​ ಟ್ರಂಪ್​ ಅಮೆರಿಕದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅನೇಕ ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ. ಡೊನಾಲ್ಡ್​ ಟ್ರಂಪ್​ ಅಧಿಕಾರಾವಧಿಯಲ್ಲೇ ಹೌಡಿ ಮೋದಿ ಎಂಬ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. ಇದೀಗ ತಮ್ಮ ಗೆಳೆತನದ ಬಗ್ಗೆ ಮತ್ತೊಮ್ಮೆ ಮಾತನಾಡಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​​ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ್ದಾರೆ. ಹಾಗೂ 2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೊಮ್ಮೆ ಕಣಕ್ಕಿಳಿಯುವ ಬಗ್ಗೆ ಸುಳಿವನ್ನು ನೀಡಿದ್ದಾರೆ.


ಮುಂಬರು ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಕುರಿತು ಮಾತನಾಡಿದ ಡೊನಾಲ್ಡ್​ ಟ್ರಂಪ್​ ಪ್ರತಿಯೊಬ್ಬರೂ ನಾನು ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಬಯಸುತ್ತಿದ್ದಾರೆ. ನಾನು ಚುನಾವಣೆಯಲ್ಲಿ ಮುನ್ನಡೆ ಸಾಧಿಸುತ್ತೇನೆಂಬ ನಂಬಿಕೆ ನನಗಿದೆ ಎಂದು ಹೇಳಿದರು.


ಇದೇ ವೇಳೆ ಪ್ರಧಾನಿ ಮೋದಿ ಕುರಿತಾಗಿಯೂ ಮಾತನಾಡಿದ ಅವರು, ಪ್ರಧಾನಿ ಮೋದಿಗೆ ಸಿಕ್ಕಿರುವುದು ಸುಲಭವಾದ ಕೆಲಸವಂತೂ ಅಲ್ಲ. ನಾನು ಭಾರತ ಹಾಗೂ ಪ್ರಧಾನಿ ಮೋದಿಯೊಂದಿಗೆ ಅತ್ಯುತ್ತಮ ಬಾಂಧವ್ಯವನ್ನು ಹೊಂದಿದ್ದೇನೆ. ನಾವು ಉತ್ತಮ ಸ್ನೇಹಿತರು. ಅಲ್ಲದೇ ಮೋದಿ ಒಬ್ಬ ಉತ್ತಮ ವ್ಯಕ್ತಿ. ಹಾಗೂ ಅವರು ಅದ್ಭುತವಾಗಿ ತಮ್ಮ ಕೆಲಸವನ್ನು ಮಾಡ್ತಿದ್ದಾರೆ. ಇವರಿಗೆ ಸಿಕ್ಕಿರುವುದು ಸುಲಭವಾದ ಕೆಲಸವಂತೂ ಅಲ್ಲ. ನಾವು ಒಬ್ಬರನ್ನೊಬ್ಬರು ಬಹಳ ಸಮಯದಿಂದ ತಿಳಿದಿದ್ದೇವೆ. ಮೋದಿ ಒಬ್ಬ ಒಳ್ಳೆಯ ಮನುಷ್ಯ ಎಂದು ಹಾಡಿ ಹೊಗಳಿದ್ದಾರೆ.

ಅಮೆರಿಕದ ಮುಂದಿನ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಸುಳಿವು ನೀಡಿದ ಡೊನಾಲ್ಡ್​ ಟ್ರಂಪ್​, ಸಧ್ಯದಲ್ಲಿಯೇ ನಾನು ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ. ನನ್ನ ನಿರ್ಧಾರವು ಖಂಡಿತವಾಗಿಯೂ ಬಹಳಷ್ಟು ಜನರಿಗೆ ಸಂತೋಷವನ್ನೇ ನೀಡುತ್ತದೆ ಎಂದು ಹೇಳಿದ್ದಾರೆ. ಕಳೆದ ವಾರ ಕೂಡ ಡೊನಾಲ್ಡ್​ ಟ್ರಂಪ್​ ತಾವು 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪರ್ಧಿಸುವ ಬಗ್ಗೆ ಸುಳಿವನ್ನು ಬಿಟ್ಟುಕೊಟ್ಟಿದ್ದರು.

ಇದನ್ನು ಓದಿ : NIA attack in Mangalore :ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ‌ ಹತ್ಯೆಗೆ ಸಂಚು: ಮಂಗಳೂರಿನಲ್ಲಿ ಎನ್.ಐ.ಎ ದಾಳಿ

ಇದನ್ನೂ ಓದಿ : neet result : ನೀಟ್​ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಮನನೊಂದ ವಿದ್ಯಾರ್ಥಿ ನೀರುಪಾಲು

Donald Trump Hints at Running for US President Again, Praises PM Modi

Comments are closed.