Puneeth Rajkumar Naa Ninna Mareyalare : ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನೆಲ್ಲ ಅಗಲಿ ಒಂದು ವರ್ಷ ಪೂರೈಸುತ್ತಾ ಬಂದಿದೆ. ಅಪ್ಪು ಅಗಲಿ ಹಲವು ತಿಂಗಳುಗಳೇ ಕಳೆದರೂ ಸಹ ಅವರ ನೆನಪು ಇನ್ನೂ ಅಜರಾಮರವಾಗಿದೆ. ಪುನೀತ್ ನಿಧನಕ್ಕೂ ಮುನ್ನ ಕೈಯಲ್ಲಿ ಅನೇಕ ಸಿನಿಮಾಗಳನ್ನು ಹೊಂದಿದ್ದರು. ಆದರೆ ಕರುನಾಡಿಗೆ ದೊಡ್ಡ ಆಘಾತ ಎಂಬಂತೆ ಅಕ್ಟೋಬರ್ 29ರಂದು ಪುನೀತ್ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದರು. ಪುನೀತ್ ನಿಧನದ ಬಳಿಕ ಅವರು ಸಿನಿಮಾ ರಂಗಕ್ಕೆ ನೀಡಬೇಕೆಂದುಕೊಂಡಿದ್ದ ಅನೇಕ ಕೊಡುಗೆಗಳ ಬಗ್ಗೆ ಸ್ನೇಹಿತರ ಬಳಿ ಹಂಚಿಕೊಂಡಿದ್ದ ಅನೇಕ ಮಾಹಿತಿಗಳು ಒಂದೊಂದಾಗಿಯೇ ಹೊರಬರುತ್ತಿದೆ. ಇದೀಗ ತಮ್ಮ ತಂದೆಯ ಸಿನಿಮಾವನ್ನು ಅವರು ರಿಕ್ರಿಯೇಟ್ ಮಾಡಲು ಹೊರಟಿದ್ದರು ಎಂಬ ವಿಚಾರವೊಂದು ಇದೀಗ ತಿಳಿದು ಬಂದಿದೆ.
ಸ್ವತಃ ಡಾರ್ಲಿಂಗ್ ಕೃಷ್ಣ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. 1976ರಲ್ಲಿ ತೆರೆ ಕಂಡ ಬ್ಲಾಕ್ಬಸ್ಟರ್ ಸಿನಿಮಾ ನಾ ನಿನ್ನ ಮರೆಯಲಾರೆ ನೆನಪಿದ್ದರಬಹುದು. ವಿಜಯ್ ನಿರ್ದೇಶನ , ಡಾ.ರಾಜ್ ಕುಮಾರ್, ಲಕ್ಷ್ಮೀ, ಬಾಲಕೃಷ್ಣ ಹಾಗೂ ಲೀಲಾವತಿ ಅಭಿನಯದ ಈ ಸಿನಿಮಾ ಬ್ಲಾಕ್ಬಸ್ಟರ್ ಯಶಸ್ಸನ್ನು ಸಾಧಿಸಿತ್ತು. ಈ ಸಿನಿಮಾ ಬರೋಬ್ಬರಿ 175 ದಿನಗಳ ಯಶಸ್ವಿ ಪ್ರದರ್ಶನವನ್ನು ಕಂಡಿತ್ತು. ಇದೇ ಸಿನಿಮಾವನ್ನು ರಿಕ್ರಿಯೇಟ್ ಮಾಡಬೇಕೆಂಬುದು ಅಪ್ಪು ಕನಸಾಗಿತ್ತಂತೆ ಲಕ್ಷ್ಮೀ ಪಾತ್ರಕ್ಕೆ ರಮ್ಯಾರನ್ನು ಆಯ್ಕೆ ಕೂಡ ಮಾಡಿದ್ದರಂತೆ. ಈ ಬಗ್ಗೆ ಸ್ವತಃ ನಟ ಡಾರ್ಲಿಂಗ್ ಕೃಷ್ಣ ಮಾಹಿತಿ ನೀಡಿದ್ದಾರೆ.
ಡಾ.ರಾಜ್ ಕುಮಾರ್ ಅಭಿನಯದ ನಾ ನಿನ್ನ ಮರೆಯಲಾರೆ ಸಿನಿಮಾವನ್ನು ರಿಕ್ರಿಯೇಟ್ ಮಾಡಲು ಪುನೀತ್ ಯೋಚಿಸಿದ್ದರು. ಈ ಪ್ರಾಜೆಕ್ಟ್ ಬಗ್ಗೆ ನಾನು ಹಾಗೂ ಪುನೀತ್ ಮಾತನಾಡಿದ್ದೆವು. ಆದರೆ ಇದೀಗ ನಾವು ಪುನೀತ್ರನ್ನು ಮಿಸ್ ಮಾಡಿಕೊಳ್ತಿದ್ದೇವೆ ಎಂದು ನಟಿ ರಮ್ಯಾ ಟ್ವೀಟ್ ಮೂಲಕ ಮಾಹಿತಿ ತಿಳಿಸಿದ್ದಾರೆ .
ಕರ್ನಾಟಕ ಅರಣ್ಯ ಲೋಕದ ಬಗ್ಗೆ ಅದ್ಭುತ ಮಾಹಿತಿಯನ್ನು ನೀಡುವ ಪುನೀತ್ ರಾಜ್ಕುಮಾರ್ರ ಕೊನೆಯ ಸಿನಿಮಾದ ಗಂಧದ ಗುಡಿ ಅಕ್ಟೋಬರ್ 28ರಂದು ತೆರೆ ಕಾಣುತ್ತಿದೆ. ಜೇಮ್ಸ್ ಸಿನಿಮಾದ ಬಳಿಕ ಅಪ್ಪುವನ್ನು ಬಿಗ್ಸ್ಕ್ರೀನ್ನಲ್ಲಿ ನೊಡೋಕೆ ಆಗೋದೇ ಇಲ್ಲವೇನೋ ಎಂದುಕೊಂಡಿದ್ದ ಅಭಿಮಾನಿಗಳಿಗೆ ಅಕ್ಟೋಬರ್ 28 ಯಾವಾಗ ಬರುತ್ತೋ ಎಂಬ ತವಕ ಶುರುವಾಗಿದೆ. ಇದೊಂದು ಸಾಕ್ಷ್ಯ ಚಿತ್ರವಾಗಿದ್ದು ಅಶ್ವಿನಿ ಪುನೀತ್ ರಾಜ್ಕುಮಾರ್ ನಿರ್ಮಾಣ ಹಾಗೂ ಅಮೋಘವರ್ಷ ನಿರ್ದೇಶನ ಈ ಚಿತ್ರಕ್ಕಿದೆ.
ಇದನ್ನು ಓದಿ : neet result : ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಮನನೊಂದ ವಿದ್ಯಾರ್ಥಿ ನೀರುಪಾಲು
Puneeth Rajkumar Wanted To Recreate His Father Dr Rajkumar S Film Naa Ninna Mareyalare