ನವದೆಹಲಿ : ಬ್ರಿಟನ್ ರಾಣಿ ಎರಡನೇ ಎಲಿಜಬೆತ್ (Britain Queen Elizabeth II passes away ) ನಿಧನರಾಗಿದ್ದಾರೆ. ಅವರಿಗೆ ೯೬ ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದಲೂ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರಿಗೆ ತಜ್ಞ ವೈದ್ಯರ ತಂಡ ಚಿಕಿತ್ಸೆಯನ್ನು ನೀಡುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಅವರು ವಿಧಿವಶರಾಗಿ ದ್ದಾರೆ ಎಂದು ಬಂಕಿಂಗ್ ಹ್ಯಾಮ್ ಅರಮನೆಯ ಮೂಲಗಳು ಖಚಿತ ಪಡಿಸಿವೆ.
ಎರಡನೇ ಎಲಿಜಬೆತ್ ಅವರು ಬುಧವಾರದಂದು ಕೆಲವು ಸಭೆಗಳಲ್ಲಿ ಭಾಗಿಯಾಗಬೇಕಾಗಿತ್ತು. ಆದ್ರೆ ವೈದ್ಯರ ಸೂಚನೆಯ ಹಿನ್ನೆಲೆಯಲ್ಲಿ ಅವರು ವಿಶ್ರಾಂತಿ ಪಡೆದಿದ್ದರು. ಅದ್ರಲ್ಲೂ ಗುರುವಾರ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಬ್ರಿಟನ್‌ನ ಬುಲ್‌ಮೋರಾಲ್ ನಲ್ಲಿ ವೈದ್ಯರ ತಂಡ ಸೂಕ್ತ ಚಿಕಿತ್ಸೆಯನ್ನು ನೀಡುತ್ತಿತ್ತು. ಆದರೆ ಅವರು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ರಾಣಿಯ ನಿಧನದಿಂದಾಗಿ ಬ್ರಿಟನ್ ನಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಎಲಿಜಬೆತ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 2015 ಮತ್ತು 2018 ರಲ್ಲಿ ನನ್ನ ಯುಕೆ ಭೇಟಿಗಳ ಸಮಯದಲ್ಲಿ ನಾನು ರಾಣಿ ಎರಡನೇ ಎಲಿಜಬೆತ್ ಅವರೊಂದಿಗೆ ಸ್ಮರಣೀಯ ಸಭೆಗಳನ್ನು ನಡೆಸಿದ್ದೇನೆ. ನಾನು ಅವರ ಪ್ರೀತಿ ಮತ್ತು ದಯೆಯನ್ನು ಎಂದಿಗೂ ಮರೆಯುವುದಿಲ್ಲ. ಸಭೆಯೊಂದರಲ್ಲಿ ಅವರು ಮಹಾತ್ಮ ಗಾಂಧಿಯವರು ತಮ್ಮ ಮದುವೆಗೆ ಉಡುಗೊರೆಯಾಗಿ ನೀಡಿದ ಕರವಸ್ತ್ರವನ್ನು ನನಗೆ ತೋರಿಸಿದರು. ನಾನು ಯಾವಾಗಲೂ ಆ ಸೂಚಕವನ್ನು ಗೌರವಿಸುತ್ತೇನೆ ಎಂದು ಮೋದಿ ಅವರು ಟ್ವೀಟ್ ಮಾಡಿದ್ದಾರೆ.
I had memorable meetings with Her Majesty Queen Elizabeth II during my UK visits in 2015 and 2018. I will never forget her warmth and kindness. During one of the meetings she showed me the handkerchief Mahatma Gandhi gifted her on her wedding. I will always cherish that gesture. pic.twitter.com/3aACbxhLgC
— Narendra Modi (@narendramodi) September 8, 2022
ಎರಡನೇ ಎಲಿಜಬೆತ್ ಅವರ ತಂದೆ ನಾಲ್ಕನೇ ಕಿಂಗ್ ಜಾರ್ಜ್ ಅವರ ನಿಧನದ ನಂತರದಲ್ಲಿ ಬ್ರಿಟನ್ ರಾಣಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಸುಮಾರು ಎಪ್ಪತ್ತು ವರ್ಷಗಳ ಕಾಲ ಅವರು ಎರಡನೇ ಎಲಿಜಬೆತ್ ಬ್ರಿಟನ್ ರಾಣಿಯ ಸ್ಥಾನದಲ್ಲಿದ್ದರು.
ಇದನ್ನೂ ಓದಿ : Queen Elizabeth II Dies At 96: ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಇನ್ನಿಲ್ಲ
ಇದನ್ನೂ ಓದಿ : “Bindu Jeera” Is Not Sold: ಮುಖೇಶ್ ಅಂಬಾನಿ ಆಫರ್ ತಿರಸ್ಕರಿಸಿದ ದಕ್ಷಿಣ ಕನ್ನಡದ ಬಿಂದು ಜೀರಾ ಕಂಪೆನಿ
Britain Queen Elizabeth II passes away at the age of 96 years