Queen Elizabeth II Dies At 96: ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಇನ್ನಿಲ್ಲ

ಲಂಡನ್‌ : Queen Elizabeth II Dies At 96ಬ್ರಿಟನ್ ರಾಣಿ ಎರಡನೇ ಎಲಿಜಬೆತ್  ಗುರುವಾರ ನಿಧನಹೊಂದಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು. ಕಳೆದೊಂದು ವಾರದಿಂದ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ರು. ಅವರಗೆ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗ್ತಿತ್ತು. ಆದ್ರೆ ಗುರುವಾರ ಚಿಕಿತ್ಸೆ ಫಲಿಸಿದೇ ಬಲ್ಮೋರಲ್ ನಲ್ಲಿ ಕೊನೆಯುಸಿರೆಳೆದಿದ್ದಾರೆ ಅಂತಾ ಬ್ರಿಟನ್ ಬಕಿಂಗ್ ಹ್ಯಾಮ್ ಅರಮನೆ ಮೂಲಗಳು ತಿಳಿಸಿವೆ .

ರಾಣಿ ಎರಡನೇ ಎಲಿಜಬೆತ್ ಸುದೀರ್ಘ ಕಾಲ ಬ್ರಿಟನ್ ರಾಣಿಯಾಗಿದ್ರು ಅಂತಾ ಪ್ರಖ್ಯಾತಿ ಪಡೆದಿದ್ರು. ಅಂದ್ರೆ ಎಲಿಜಬೆತ್ ಬ್ರಿಟನ್ ಅನ್ನ ಬರೋಬ್ಬರಿ 70 ವರ್ಷಗಳ ಕಾಲ ಆಳಿದ್ರು ಅನ್ನೋದು ವಿಶೇಷ. ರಾಣಿ ಎಲಿಜಬೆತ್ ಅವರು 1952ರಲ್ಲಿ ಈ ಪಟ್ಟಕ್ಕೆ ಏರಿದರು.  ತಂದೆ 6ನೇ ಕಿಂಗ್ ಜಾರ್ಜ್​ ನಿಧನದ ಬಳಿಕ ರಾಣಿ ಪಟ್ಟ ಎಲಿಜಬೆತ್ ಗೆ ಸಿಕ್ಕಿತ್ತು.

ಬ್ರಿಟನ್‌ನ ದೀರ್ಘಾವಧಿಯ ರಾಣಿ ಎಂದೇ ಪ್ರಸಿದ್ಧಿ ಹೊಂದಿದ್ದ ಎಲಿಜಬೆತ್ ಅವರು ಜಾಗತಿಕ ಮಟ್ಟದಲ್ಲಿ ಪ್ರಭಾವಿ ನಾಯಕಿ ಎಂಬ ಖ್ಯಾತಿ ಹೊಂದಿದ್ದರು. ಬುಧವಾರ ರಾಣಿ ಎರಡನೇ ಎಲಿಜಬೆತ್ ಕೆಲ ಮಹತ್ವದ ಸಭೆಗಳನ್ನು ರದ್ದುಪಡಿಸಿದ್ದರು ಅಂತಾ ವರದಿಯಾಗಿತ್ತು. ಈ ವೇಳೆ ವೈದ್ಯರು ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು. 96 ವರ್ಷ ವಯಸ್ಸಿನ ರಾಣಿ ಕೆಲ ಗೌಪ್ಯ ಮಂಡಳಿಗಳ ಮಹತ್ವದ ಸಭೆಗಳಿಗೆ ವರ್ಚ್ಯುವಲ್‌ ಆಗಿ ಭಾಗಿಯಾಗಬೇಕಿತ್ತು. ಬ್ರಿಟನ್‌ ಪ್ರಧಾನಿಯಾಗಿ ಲೀಸ್ ಟ್ರಸ್ ಅವರು ನೂತನವಾಗಿ ನೇಮಕವಾದ ಹಿನ್ನೆಲೆಯಲ್ಲಿ ಈ ಸಭೆಗಳು ಮಹತ್ವ ಪಡೆದುಕೊಂಡಿದ್ದವು.

ಆದರೆ ಇದೀಗ ಅವರು ತಮ್ಮ 96ನೇ ವಯಸ್ಸಿನಲ್ಲಿ ವೈದ್ಯರ ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾರೆ. ರಾಣಿ ಎಲಿಜಬೆತ್ ನಿಧನ ವಾರ್ತೆಯನ್ನು ಬಕಿಂಗ್ ಹ್ಯಾಮ್ ಅರಮನೆ ಪ್ರಕಟಿಸುತ್ತಿದ್ದಂತೆ ಬ್ರಿಟನ್​ನಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕ ದೇಶದ ಗಣ್ಯರು ಎಲಿಜಬೇತ್ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ : Britain Queen Elizabeth II passes away : ಬ್ರಿಟನ್‌ ರಾಣಿ ಎರಡನೇ ಎಲಿಜಬೆತ್‌ ನಿಧನ : ಮೋದಿ ಸಂತಾಪ

ಇದನ್ನೂ ಓದಿ : KL Rahul Captain : ಅಫ್ಘಾನಿಸ್ತಾನ ವಿರುದ್ಧ ರಾಹುಲ್ ನಾಯಕ; ಅದ್ವಿತೀಯ ದಾಖಲೆ ಬರೆದ ಕನ್ನಡಿಗ

 Queen Elizabeth II Dies At 96- Elizabeth became the UK’s longest-serving monarch

Comments are closed.