ಸೋಮವಾರ, ಜೂನ್ 16, 2025
HomeCinemaSunny Leone Photoshoots in Maldives : ಮಾಲ್ಡೀವ್ಸ್ ನಲ್ಲಿ ಮಾದಕ ಬೆಡಗಿ: ನಿದ್ದೆ ಕದಿಯುತ್ತಿದೆ...

Sunny Leone Photoshoots in Maldives : ಮಾಲ್ಡೀವ್ಸ್ ನಲ್ಲಿ ಮಾದಕ ಬೆಡಗಿ: ನಿದ್ದೆ ಕದಿಯುತ್ತಿದೆ ಸನ್ನಿ ಲಿಯೋನ್ ಪೋಟೋಸ್

- Advertisement -

Sunny Leone Photoshoots in Maldives : ಅದೇನೋ ಗೊತ್ತಿಲ್ಲ ಬಾಲಿವುಡ್ ನಿಂದ ಆರಂಭಿಸಿ ಹಾಲಿವುಡ್, ಟಾಲಿವುಡ್, ಕಾಲಿವುಡ್ ಕೊನೆಗೆ ಸ್ಯಾಂಡಲ್ ವುಡ್ ತನಕ ಎಲ್ಲ ಸೆಲೆಬ್ರೆಟಿಗಳಿಗೂ ಮಾಲ್ಡೀವ್ಸ್ ಅನ್ನೋದು ಮೋಸ್ಟ್ ಫೆವರಿಟ್ ಹಾಲಿಡೇ ಪ್ಲೇಸ್. ಬಾಲಿವುಡ್ ನ ಜಾಹ್ನವಿ ಕಪೂರ್ ನಂತಹ ಬ್ಯೂಟಿ ಸ್ಟಾರ್ ಗಳಿಂದ ಆರಂಭಿಸಿ ಸ್ಯಾಂಡಲ್ ವುಡ್ ನ ಲವ್ಲಿ ಜೋಡಿ ಡಾರ್ಲಿಂಗ್ ಕೃಷ್ಣಾ ಹಾಗೂ ಮಿಲನಾ ನಾಗರಾಜ್ ರಂತಹ ಯಂಗ್ ಮ್ಯಾರೀಡ್ ಕಪಲ್ಸ್ ಕೂಡ ಮಾಲ್ಡೀವ್ಸ್ ನ ಮೋಡಿಗೆ ಮರುಳಾಗಿದ್ದಾರೆ.

ಈಗ ಈ ಸಾಲಿಗೆ ಬಾಲಿವುಡ್ ನ ಹಾಟ್ ಹಾಟ್ ಸ್ಟಾರ್ ಸನ್ನಿ ಲಿಯೋನ್ ಹೊಸ ಸೇರ್ಪಡೆ. ಕೈತುಂಬ ಸಿನಿಮಾ ಶೂಟಿಂಗ್ ನಡುವೆಯೂ ಸನ್ನಿ ಲಿಯೋನ್ ಹಾಲಿಡೇ ಗಾಗಿ ಮಾಲ್ಡೀವ್ಸ್ ಗೆ ಹಾರಿದ್ದಾರೆ.

ತಿಳಿ ನೀರ ಸಮುದ್ರ ತೀರದಲ್ಲಿ ವಿಹರಿಸಲು ಸನ್ನಿ ಲಿಯೋನ್ ಹಾಲಿಡೇ ಪ್ಲ್ಯಾನ್ ಮಾಡಿದ್ದು, ತನ್ನ ಫ್ಯಾಮಿಲಿ ಜೊತೆ ಈ ಪ್ರವಾಸಿಗರ ಸ್ವರ್ಗ ಕ್ಕೆ ಭೇಟಿ ಕೊಟ್ಟಿದ್ದಾರೆ. ನೆಲಕಾಣುವಂತ ತಿಳಿ ನೀರ ಸಮುದ್ರದಲ್ಲಿ ಸನ್ನಿ ಲಿಯೋನ್ ಅಚ್ಚ ನೀಲಿ ಸ್ವಿಮ್ ಸೂಟ್ ನಲ್ಲಿ ತಮ್ಮ ಸೌಂದರ್ಯ ತೆರೆದಿಟ್ಟಿದ್ದಾರೆ.

ಮಾತ್ರವಲ್ಲ ಪಡ್ಡೆಗಳ ಮತ್ತೇರಿಸುವಂತ ಈ ಬಿಕನಿ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಸನ್ನಿ ಲಿಯೋನ್ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಮಾಲ್ಡೀವ್ಸ್ ಹಾಲಿಡೇ ಡೇ -1 ಎಂದು ಸನ್ನಿ ಲಿಯೋನ್ ಹೆಡ್ಡಿಂಗ್ ಕೂಡ ನೀಡಿದ್ದಾರೆ. ಸದ್ಯ ಕಾಲಿವುಡ್ ಸಿನಿಮಾಗೂ ಕಾಲಿಟ್ಟಿರೋ ಸನ್ನಿ ಲಿಯೋನ್ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಿನಿಮಾ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಇತ್ತೀಚಿಗಷ್ಟೇ ನಟಿ ಸನ್ನಿ ಲಿಯೋನ್ ಟಾಲಿವುಡ್‌ ನಲ್ಲಿ ನಟಿಸಿದ ಸಿನಿಮಾ ಜಿನ್ನಾ ಸಿನಿಮಾ ಟೀಸರ್ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ನಟಿ ಸನ್ನಿ ಲಿಯೋನ್ ಟಾಲಿವುಡ್ ನ ಉದ್ಯಮಿ ಕಮ್ ನಟ ವಿಷ್ಣು ಮಂಚು ತುಟಿಗೆ ತುಟಿ ಬೆಸೆಯೋ ಮೂಲಕ ಸುದ್ದಿಯಾಗಿದ್ದರು. ಅಲ್ಲದೇ ಈ ಸಿನಿಮಾದ ಟೀಸರ್ ಸೋಷಿಯಲ್ ಮೀಡಿಯಾದಲ್ಲೂ ಕೂಡ ಸಖತ್ ಸದ್ದು ಮಾಡಿತ್ತು.

ಇದನ್ನೂ ಓದಿ : Mahesh Babu:ವೈರಲ್‌ ಆಯ್ತು ನಟ ಮಹೇಶ್‌ ಬಾಬು ಹೊಸ ಲುಕ್‌

ಇದನ್ನೂ ಓದಿ : Salman Khan:”ಕೆಜಿಎಫ್”‌ ನಟ ಯಶ್‌ ಗೆಟಪ್‌ ಅನುಕರಣೆ ಮಾಡಿದ ಬಾಲಿವುಡ್‌ ಸ್ಟಾರ್ ಸಲ್ಮಾನ್‌ ಖಾನ್‌

Sunny Leone Photoshoots in Maldives

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular