Kohinoor :‘ಕೊಹಿನೂರ್​ ವಜ್ರ ಪುರಿ ಜಗನ್ನಾಥ ದೇಗುಲಕ್ಕೆ ಸೇರಿದ್ದು ’ : ಸಾಮಾಜಿಕ ಸಂಘಟನೆಯಿಂದ ರಾಷ್ಟ್ರಪತಿಗೆ ಪತ್ರ

ಒಡಿಶಾ : Kohinoor : ಬ್ರಿಟನ್​​ನ ರಾಣಿ ಎರಡನೇ ಎಲೆಜಬೆತ್​ ಅಂದಾಕ್ಷಣ ಭಾರತೀಯರಿಗೆ ಮೊದಲು ನೆನಪಾಗುವುದೇ ಕೊಹಿನೂರ್​ ವಜ್ರ. ಬ್ರಿಟೀಷರ ಕಾಲದಲ್ಲಿ ಭಾರತದ ಈ ಅತ್ಯಂತ ಬೆಲೆಬಾಳುವ ವಜ್ರವೊಂದು ಎರಡನೇ ಎಲೆಜಬೆತ್​ ಪಾಲಾಗಿತ್ತು. ಭಾರತವು ಇದು ನಮಗೆ ಸೇರಿದ ವಜ್ರ ಎಂದು ಹೇಳಿದ್ದರೂ ಸಹ ಅದು ಬ್ರಿಟನ್​​ ರಾಣಿಯ ಕಿರೀಟದಲ್ಲಿ ಭದ್ರವಾಗಿದೆ. ಕೊಹಿನೂರ್ ವಜ್ರವು ಕರ್ನಾಟಕಕ್ಕೆ ಸೇರಿದೆ ಎಂದು ಈಗಾಗಲೇ ಸಾಕಷ್ಟು ವರದಿಗಳು ಹೇಳಿವೆ. ಈ ನಡುವೆ ಇದೀಗ ಒಡಿಶಾ ಮೂಲದ ಸಂಘಟನೆಯೊಂದು ಕೊಹಿನೂರ್​ ವಜ್ರವು ಪುರಿ ಜಗನ್ನಾಥನಿಗೆ ಸೇರಿದ್ದು ಎಂದು ವಾದಿಸಿದೆ.


ಒಡಿಶಾ ಮೂಲದ ಸಂಘಟನೆಯೊಂದು ಇಂತದ್ದೊಂದು ವಾದವನ್ನು ಮಾಡಿದೆ. ಹಿಂದೂ ದೇವರಾದ ಪುರಿ ಜಗನ್ನಾಥನಿಗೆ ಸೇರಿದ ಈ ಕೊಹಿನೂರು ವಜ್ರವನ್ನು ಬ್ರಿಟೀಷರು ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಬ್ರಿಟನ್​ಗೆ ಲೂಟಿ ಮಾಡಿ ತೆಗೆದುಕೊಂಡು ಹೋಗಿದ್ದಾರೆ. ಅಂದಿನಿಂದ ಅದು ಬ್ರಿಟನ್​ ರಾಣಿಯ ಕಿರೀಟದಲ್ಲಿದೆ ಎಂದು ಹೇಳಿದೆ.


ಕಳೆದ ವಾರ ಬ್ರಿಟನ್​ನ ರಾಣಿ ಎರಡನೇ ಎಲೆಜಬೆತ್​​ ನಿಧನರಾಗಿದ್ದಾರೆ. ಎರಡನೇ ಎಲೆಜಬೆತ್​ ನಿಧನದ ಬಳಿಕ ಟ್ವಿಟರ್​ನಲ್ಲಿ ಕೊಹಿನೂರ್​​ ಟ್ರೆಂಡ್​​ ಕೂಡ ಜೋರಾಗಿದೆ. ಈ ಅಮೂಲ್ಯವಾದ ವಜ್ರವನ್ನು ಬ್ರಿಟೀಷರು ಭಾರತಕ್ಕೆ ಹಿಂದಿರುಗಿಸುವ ಸಂದರ್ಭ ಬಂದಿದೆ ಎಂದು ಅನೇಕರು ಆಗ್ರಹಿಸಿದ್ದರು. ಇದೀಗ ಮತ್ತೊಂದು ಹೊಸ ವಾದ ಸೃಷ್ಟಿಯಾಗಿದ್ದು , ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಯಾದ ಶ್ರೀ ಜಗನ್ನಾಥ ಸೇನೆಯು ವಜ್ರವನ್ನು ಮರಳಿ ತರಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮಧ್ಯಸ್ಥಿಕೆಯನ್ನು ಬಯಸಿದೆ.


ಬ್ರಿಟನ್​​ನ ರಾಣಿ ಎರಡನೆ ಎಲೆಜಬೆತ್​​ ಕಳೆದ ವಾರ ಸ್ಕಾಟಿಷ್ ಹೈಲ್ಯಾಂಡ್ಸ್‌ನಲ್ಲಿರುವ ಬಾಲ್ಮೋರಲ್‌ನಲ್ಲಿರುವ ತನ್ನ ವೆಕೇಷನ್​ ಹೋಮ್​ನಲ್ಲಿ ನಿಧನರಾಗಿದ್ದಾರೆ. ಇದಾದ ಬಳಿಕ ಎಲೆಜಬೆತ್​ ಪುತ್ರ ಪ್ರಿನ್ಸ್​ ಚಾರ್ಲ್ಸ್​​ ಸಿಂಹಾಸನವನ್ನು ಅಲಂಕರಿಸಿದ್ದಾರೆ. ನಿಯಮಗಳ ಪ್ರಕಾರ ರಾಣಿ ಎಲೆಜಬೆತ್​ ನಿಧನದ ಬಳಿಕ ಈ ಕಿರೀಟವು ಪ್ರಿನ್ಸ್​ ಚಾರ್ಲ್ಸ್​​ ಪತ್ನಿ ಕ್ಯಾಮಿಲ್ಲಾಗೆ ಸೇರುತ್ತದೆ. ಏಕೆಂದರೆ ಈಗ ಅವರು ರಾಣಿ ಪತ್ನಿಯಾಗಿದ್ದಾರೆ.
ಪುರಿ ಮೂಲದ ಸಂಸ್ಥೆಯು ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ಪತ್ರದಲ್ಲಿ 12ನೆ ಶತಮಾನದ ಪ್ರಸಿದ್ಧ ಪುರಿ ದೇವಸ್ಥಾನಕ್ಕೆ ಕೊಹಿನೂರ್​ ವಜ್ರವನ್ನು ಮರಳಿ ತರುವ ಪ್ರಕ್ರಿಯೆಯನ್ನು ಸುಲಭಗೊಳಿಸಲು ನೀವು ಸಹಕರಿಸಿಬೇಕೆಂದು ಕೋರಲಾಗಿದೆ.

ಇದನ್ನು ಓದಿ : ICC T20 World Cup India Team: ಭಾರತ ಟಿ20 ವಿಶ್ವಕಪ್ ತಂಡದಲ್ಲೊಬ್ಬ “ಕೋಟಾ” ಪ್ಲೇಯರ್

ಇದನ್ನೂ ಓದಿ : Dinesh Karthik: 12 ವರ್ಷಗಳ ನಂತರ ಮತ್ತೊಮ್ಮೆ ವಿಶ್ವಕಪ್ ಆಡಲಿದ್ದಾರೆ ಡಿಕೆ ; ನಾಲ್ಕೇ ಶಬ್ದಗಳಲ್ಲಿ ಖುಷಿ ಹಂಚಿಕೊಂಡ ಕಾರ್ತಿಕ್

Kohinoor belonged to Lord Jagannath’: Odisha organisation after Queen’s death

Comments are closed.