ಕಿರುತೆರೆಯಲ್ಲಿ ಹೊಸ ಸಂಚಲನ ಸೃಷ್ಟಿಸಿರುವ (Hitler Kalyana)ಹಿಟ್ಲರ್ ಕಲ್ಯಾಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟಗೆ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣದ ಕಥೆಯು ವಿಭಿನ್ನ ರೀತಿಯಲ್ಲಿ ಮೂಡಿ ಬರುತ್ತಿದೆ ಎಜೆ ಪಾತ್ರಕ್ಕೆ ಈಗಾಗಲೇ ಮೂರು ಜನ ಸೊಸೆಯಂದಿರು ಇದ್ದು, ಎಜೆಯ ಸೊಸೆಯಂದಿರಿಗೆ ಅತ್ತೆಯಾಗಿ ಎಡವಟ್ಟು ರಾಣಿ ಲೀಲಾ ಕಾಣಿಸಿಕೊಳ್ಳುತ್ತಾಳೆ. ಹೆಸರಿಗೆ ತಕ್ಕಂತೆ ಪ್ರತಿದಿನವೂ ಒಂದಲ್ಲಾ ಒಂದು ಎಡವಟ್ಟು ಕೆಲಸ ಮಾಡಿಕೊಂಡು ಎಜೆ ಬಳಿ ಬೈಗುಳ ಕೇಳುತ್ತಾ ಬರುತ್ತಾಳೆ. ಲೀಲಾ ಎಜೆ ಹೆಂಡತಿಯಾಗಿ ಬರುವುದು ಈ ಮೂವರು ಸೊಸೆಯಂದಿರಿಗೆ ಮೊದಲಿನಿಂದಲೂ ಇಷ್ಟವಿರುವುದಿಲ್ಲ. ಹಾಗಾಗಿ ಸೊಸೆಯಂದಿರು ಲೀಲಾಗೆ ಒಂದಲ್ಲಾ ಒಂದು ರೀತಿಯಲ್ಲಿ ಕಷ್ಟಕೊಡುತ್ತಾ ಬರುತ್ತಾರೆ. ಲೀಲಾಳನ್ನು ಮನೆಯಿಂದ ಹೊರಗೆ ಹಾಕುವುದಕೊಸ್ಕರ ಅವಳಿಂದ ಎಡವಟ್ಟು ಸನ್ನಿವೇಶಗಳನ್ನು ಸಹ ಸೃಷ್ಟಿಸುತ್ತಾರೆ.
(Hitler Kalyana)ಲೀಲಾ ಎಜೆ ಮನೆಗೆ ಮದುವೆಯಾಗಿ ಬಂದ ದಿನದಿಂದಲೂ ಎಜೆ ತಾಯಿ ಮತ್ತು ಎಜೆ ಪಿಎ ವಿಶ್ವರೂಪ್ ಜೊತೆ ಚೆನ್ನಾಗಿ ಇರುತ್ತಾಳೆ. ಅವರು ಸಹ ಇವಳನ್ನು ತುಂಬಾ ಸಲ ಎಜೆಯಿಂದ ಬಚಾವ್ ಮಾಡುತ್ತಿರುತ್ತಾರೆ. ಕಳೆದ ವಾರ ನಡೆದ ಸಂಚಿಕೆಗಳಲ್ಲಿ ಎಜೆ ತನ್ನ ಮೂವರು ಸೊಸೆಯಂದಿರನ್ನು ಹೊರಗಡೆ ಟ್ರಿಪ್ ಗೆ ಕಳಿಸುತ್ತಾನೆ. ಆದರೆ ಎಜೆ ಪಿಎ ವಿಶ್ವರೂಪ ಎಜೆ ಹೇಳಿದ ಕಡೆ ಕಳಿಸದೆ ಅವರ ಕಣ್ಣಿಗೆ ಬಟ್ಟೆಯನ್ನು ಕಟ್ಟಿ ಕಾರಲ್ಲಿ ಕರೆದು ಕೊಂಡು ಹೋಗಿ ಲೀಲಾಳ ತವರು ಮನೆಗೆ ಬಿಟ್ಟು ಬರುತ್ತಾನೆ. ಕಾರಿಂದ ಇಳಿದು ಅವರು ಕಣ್ಣಿಗೆ ಕಟ್ಟಿದ ಪಟ್ಟಿಯನ್ನು ತೆಗೆದು ನೋಡಿದರೆ ಲೀಲಾ ತವರು ಮನೆಯ ಎದುರಿಗೆ ಇರುತ್ತಾರೆ. ಆಗ ಮೂವರು ಸೊಸೆಯಂದಿರು ಆಶ್ಚರ್ಯಗೊಳ್ಳುತ್ತಾರೆ. ಅದಕ್ಕೆ ಸರಿಯಾಗಿ ಲೀಲಾಳ ಮಲತಾಯಿ ಅವರನ್ನು ಮನೆಗೆ ಬರಮಾಡಿಕೊಂಡು ಅವರ ಕೈಯಲ್ಲಿ ಮನೆಯ ಎಲ್ಲಾ ಕೆಲಸವನ್ನು ಮಾಡಿಸಿಕೊಂಡು ಮಜಾ ತೆಗೆದುಕೊಳ್ಳುತ್ತಾರೆ. ಹಾಗೆ ಈ ಮೂವರನ್ನು ಲೀಲಾ ಮಲತಾಯಿ ರಾತ್ರಿ ಚಳಿಯಲ್ಲಿ ಮಲಗುವ ಹಾಗೆ ಮಾಡುತ್ತಾಳೆ. ಇದ್ದರಿಂದ ರೋಸಿ ಹೋದ ಮೂವರು ಸೊಸೆಯಂದಿರು ಇದಕ್ಕೆ ತಕ್ಕ ಪಾಠ ಲೀಲಾಗೆ ಮಾಡಬೇಕೆಂದು ತೀರ್ಮಾನಿಸುತ್ತಾರೆ.
ಗಣೇಶ ಹಬ್ಬವನ್ನು ಮುಗಿಸಿಕೊಂಡು ಮರಳಿ ಎಜೆ ಮನೆಗೆ ಬಂದ ದುರ್ಗಾ, ಸರಸ್ವತಿ ಮತ್ತು ಲಕ್ಷ್ಮೀ ಇದಕ್ಕಾಗಿ ಕಾಯುತ್ತಿರುತ್ತಾರೆ. ತಾವು ಲೀಲಾ ತವರು ಮನೆಯಲ್ಲಿ ಪಟ್ಟ ಕಷ್ಟಕ್ಕೆ ಹೇಗೆ ಸೇಡು ತೀರಿಸಿಕೊಳ್ಳುವುದು ಎಂದು ಮಾತನಾಡಿಕೊಳ್ಳುತ್ತಾರೆ. ಆಗ ದುರ್ಗಾ ಒಂದು ಪ್ಲಾನ್ ಮಾಡುತ್ತಾಳೆ. ಅದು ಏನೆಂದರೆ ಇವತ್ತು ರಾತ್ರಿ ಲೀಲಾಳನ್ನು ಟೇರೆಸ್ ಮೇಲೆ ಕೂಡಿ ಹಾಕಿ ಪೂರ್ತಿ ರಾತ್ರಿ ಚಳಿಯಲ್ಲಿ ಇರುವ ಹಾಗೆ ಮಾಡುವ ಎನ್ನುತ್ತಾಳೆ. ಅದಕ್ಕೆ ಸರಸ್ವತಿ ಮತ್ತು ಲಕ್ಷ್ಮೀ ಒಮ್ಮತ್ತವನ್ನು ಸೂಚಿಸುತ್ತಾರೆ. ಹಾಗೆ ರಾತ್ರಿಯಾಗುವುದನ್ನು ಕಾಯುತ್ತಿರುತ್ತಾರೆ. ರಾತ್ರಿ ಹೊತ್ತಲ್ಲಿ ಲೀಲಾ ಸರಸ್ವತಿ ಮತ್ತು ದುರ್ಗಾ ಮಾತನಾಡುವಾಗ ಆ ಕಡೆಯಿಂದ ಪಾಸ್ ಆಗುತ್ತಾಳೆ. ಆಗ ಇವರಿಬ್ಬರು ಲೀಲಾಳನ್ನು ಟೇರೆಸ್ ಕಳಿಸುವ ಕೆಲಸವನ್ನು ಕಾರ್ಯರೂಪಕ್ಕೆ ತರುತ್ತಾರೆ.
ಇದನ್ನೂ ಓದಿ : ಮಾಲ್ಡೀವ್ಸ್ ನಲ್ಲಿ ಮಾದಕ ಬೆಡಗಿ: ನಿದ್ದೆ ಕದಿಯುತ್ತಿದೆ ಸನ್ನಿ ಲಿಯೋನ್ ಪೋಟೋಸ್
ಇದನ್ನೂ ಓದಿ : ”ಕೆಜಿಎಫ್” ನಟ ಯಶ್ ಗೆಟಪ್ ಅನುಕರಣೆ ಮಾಡಿದ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್
ಲೀಲಾ ಬಾಲ್ಕನಿಯನ್ನು ಪ್ರವೇಶಿಸಿದ ಕೂಡಲೇ ಅದರ ಬಾಗಿಲನ್ನು ಮುಚ್ಚಿ ಪರದೆಯನ್ನು ಎಳೆದು ತಮ್ಮ ಪ್ಲಾನ್ ಸಕ್ಸಸ್ ಎಂದು ಖುಷಿಪಡುತ್ತಾರೆ. ಬಾಲ್ಕನಿಯಲ್ಲಿ ಸೆರೆಯಾದ ಲೀಲಾಳನ್ನು ಎಜೆ ಕಾಪಾಡುತ್ತಾ ನಾ ? ಅಥವಾ ಲೀಲಾ ಇಡೀ ರಾತ್ರಿ ಚಳಿಯಲ್ಲಿ ಇರಬೇಕಾ ? ಅನ್ನೋ ಕುತೂಹಲವಿದ್ರೆ ಇಂದಿನ ಸಂಚಿಕೆ (Hitler Kalyana)ನೋಡಬೇಕು.