ಮಧ್ಯ ಪ್ರದೇಶ : Hospital In JCB : ರಸ್ತೆ ಅಪಘಾತಗಳು ನಡೆದಂತಹ ಸಂದರ್ಭದಲ್ಲಿ ಆಗುವ ದೊಡ್ಡ ಸಮಸ್ಯೆ ಅಂದರೆ ಆಸ್ಪತ್ರೆಗೆಳಿಗೆ ರೋಗಿಗಳನ್ನು ದಾಖಲು ಮಾಡುವುದು. ಕೆಲವೊಂದು ಸಂದರ್ಭಗಳಲ್ಲಿ ಸಾರ್ವಜನಿಕರು ನಮಗ್ಯಾಕೆ ತೊಂದರೆ ಎಂದು ಗಾಯಾಳುಗಳ ಗೋಜಿಗೆ ಹೋಗೋದಿಲ್ಲ. ಇನ್ನೂ ಕೆಲವು ಸಂದರ್ಭಗಳಲ್ಲಿ ಆ್ಯಂಬುಲೆನ್ಸ್ ಬರಲು ವಿಳಂಬವಾಗಿ ಗಾಯಾಳುಗಳು ಸಾವನ್ನಪ್ಪಿದ್ದೂ ಸಹ ಇದೆ. ಅದೇ ರೀತಿ ಮಧ್ಯ ಪ್ರದೇಶದಲ್ಲಿ ರಸ್ತೆ ಅಪಘಾತ ನಡೆದ ಸ್ಥಳಕ್ಕೆ ಆ್ಯಂಬುಲೆನ್ಸ್ ಸರಿಯಾದ ಸಮಯಕ್ಕೆ ತಲುಪದ ಹಿನ್ನೆಲೆಯಲ್ಲಿ ಗಾಯಾಳುವನ್ನು ಜೆಸಿಬಿ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದ್ದು ವಿಡಿಯೋ ವೈರಲ್ ಆಗಿದೆ.
ಕಟ್ನಿ ಜಿಲ್ಲೆಯ ಬರ್ಹಿ ಎಂಬಲ್ಲಿ ವ್ಯಕ್ತಿಯೊಬ್ಬ ಬೈಕ್ ಆ್ಯಕ್ಸಿಡೆಂಟ್ಗೆ ಒಳಗಾಗಿದ್ದ. ಕೂಡಲೇ ಅಲ್ಲಿದ್ದ ಸಾರ್ವಜನಿಕರು ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದಾರೆ. ಆದರೆ ಆ ಆ್ಯಂಬುಲೆನ್ಸ್ ಸಿಗದ ಕಾರಣ ಹತ್ತಿರದ ಪಟ್ಟಣದಲ್ಲಿದ್ದ ಆ್ಯಂಬುಲೆನ್ಸ್ ಒಂದು ಅಪಘಾತ ನಡೆದ ಸ್ಥಳಕ್ಕೆ ಆಗಮಿಸುತ್ತಿತ್ತು. ಆದರೆ ಸರಿಯಾದ ಸಮಯಕ್ಕೆ ಅಪಘಾತ ಸ್ಥಳ ತಲುಪಲು ಈ ಆಂಬುಲೆನ್ಸ್ಗೂ ಸಾಧ್ಯವಾಗಿರಲಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿ ಪ್ರದೀಪ್ ಮಧಿಯಾ ಹೇಳಿದ್ದಾರೆ.
#Watch: A man, sustained injuries in a road accident, was taken to hospital in a JCB after failing to get an ambulance in Barhi town, Katni district of #MadhyaPradesh #MP #Viral #Video #India #Breaking #Accident pic.twitter.com/lI958T51Pc
— Free Press Journal (@fpjindia) September 13, 2022
ಈ ವ್ಯಕ್ತಿಯು ಬಹ್ರಿ ಎಂಬಲ್ಲಿ ರಸ್ತೆ ಅಪಘಾತಕ್ಕೆ ಒಳಗಾಗಿದ್ದ. ಆದರೆ ಆ ಸಮಯದಲ್ಲಿ ಆಂಬುಲೆನ್ಸ್ ಸೇವೆ ಆ ಪ್ರದೇಶಕ್ಕೆ ಕಾರಣಾಂತರಗಳಿಂದ ಲಭ್ಯವಿರಲಿಲ್ಲ. ಹೀಗಾಗಿ ಹತ್ತಿರದ ಪಟ್ಟಣದಿಂದ ಆಂಬುಲೆನ್ಸ್ ಅಪಘಾತ ನಡೆದ ಸ್ಥಳಕ್ಕೆ ಬರುವುದರಲ್ಲಿತ್ತು. ಆದರೆ ಈ ಆ್ಯಂಬುಲೆನ್ಸ್ ಬರುವುದೂ ಕೂಡ ವಿಳಂಬವಾದ ಹಿನ್ನೆಲೆಯಲ್ಲಿ ಗಾಯಾಳುವನ್ನು ಬುಲ್ಡೋಜರ್ನಲ್ಲಿ ಮಲಗಿಸಿಕೊಂಡು ಆಸ್ಪತ್ರೆಗೆ ಕರೆತರಲಾಗಿದೆ ಎಂದು ಪ್ರದೀಪ್ ಮಧಿಯಾ ಹೇಳಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿದ ಸ್ಥಳೀಯ ಪಂಚಾಯತ್ ಸದಸ್ಯ ಹಾಗೂ ಜೆಸಿಬಿ ಮಾಲೀಕ ಪುಷ್ಪೇಂದ್ರ ವಿಶ್ವಕರ್ಮ, ಖಿತೌಲಿ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ವ್ಯಕ್ತಿಯ ಕಾಲು ಮುರಿದು ಹೋಗಿತ್ತು. ಆದರೆ ಸರಿಯಾದ ಸಮಯಕ್ಕೆ ಸ್ಥಳಕ್ಕೆ ತಲುಪುವಲ್ಲಿ ಆ್ಯಂಬುಲೆನ್ಸ್ಗೆ ಸಾಧ್ಯವಾಗಿರಲಿಲ್ಲ. ಆಟೋ ರಿಕ್ಷಾ ಚಾಲಕರು ಗಾಯಾಳುವಿಗೆ ಸಹಾಯ ಮಾಡಲು ತಯಾರಿರಲಿಲ್ಲ. ಹೀಗಾಗಿ ನನ್ನ ಜೆಸಿಬಿ ಯಂತ್ರದಲ್ಲಿಯೇ ಮಲಗಿಸಿ ಗಾಯಾಳುವನ್ನು ಆಸ್ಪತ್ರೆಗೆ ಕೊಂಡೊಯ್ಯಬೇಕಾಯ್ತು ಎಂದು ಹೇಳಿದ್ದಾರೆ.
ಇದನ್ನು ಓದಿ : Virat Kohli: ಲಂಡನ್‌ನಲ್ಲಿ ವಿರಾಟ್; ಪತ್ನಿ ಅನುಷ್ಕಾ ಜೊತೆ ಸೂರ್ಯರಶ್ಮಿಯನ್ನು ಚುಂಬಿಸಿದ ಕಿಂಗ್ ಕೊಹ್ಲಿ
ಇದನ್ನೂ ಓದಿ : New jersey for Team India : ಟಿ-20 ವಿಶ್ವಕಪ್ ಗೆ ಟೀಂ ಇಂಡಿಯಾದ ನ್ಯೂ ಲುಕ್
Viral: Man Carried To Hospital In JCB After Ambulance Got Late In Madhya Pradesh