ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಮುನ್ನುಡಿ ಬರೆದಿದ್ದ ಆಶಿಕಿ(Aashiki) ಸಿನಿಮಾ ತಂಡ ಆಡಿಯೋ ಬಿಡುಗಡೆ ಮಾಡಿದೆ. ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಆಡಿಯೋ ಬಿಡುಗಡೆ ಕಾರ್ಯಕ್ರಮ ಜರುಗಿತು. ನಟ ಅಜಯ್ ರಾವ್(Ajay Rao), ನಿರ್ದೇಶಕ ಬಹದ್ದೂರ್ ಚೇತನ್, ಸಂಭಾಷಣೆಗಾರ ಮಾಸ್ತಿ ಸೇರಿದಂತೆ ಇಡೀ ಆಶಿಕಿ (Aashiki) ಚಿತ್ರತಂಡ ಭಾಗಿಯಾಗಿತ್ತು. ಈ ವೇಳೆ ಚಿತ್ರತಂಡ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ಅಜಯ್ ರಾವ್ (Ajay Rao), ಪ್ರಯತ್ನ ಅನ್ನುವುದು ಒಂದು ಯಶಸ್ಸು. ಪ್ರಯತ್ನ ಮಾಡದೆ ಸುಮ್ಮನೆ ಕುಳಿತುಕೊಳ್ಳುವುದು ಯಾವುದಕ್ಕೂ ಸಾರ್ಥಕತೆ ಇರುವುದಿಲ್ಲ. ಮಹಿಳಾ ನಿರ್ದೇಶಕಿಯ ಪ್ರಯತ್ನ.. ಸಂದೀಪ್ ತೆರೆಮೇಲೆ ಹೇಗೆ ಕಾಣಿಸುತ್ತಾರೆ. ನಾಯಕನಾಗಿ ಪಾತ್ರ ಹೇಗೆ ಪಾತ್ರ ನಿರ್ವಹಿಸುತ್ತಾರೆ ಅನ್ನೋದನ್ನು ನೋಡೋದಿಕ್ಕೆ ನಾನು ಕಾತುರನಾಗಿದ್ದೆ. ಸಂದೀಪ್ ಅವರ ದೊಡ್ಡ ಜರ್ನಿ ಇಲ್ಲಿಂದ ಸಾಗಲಿ. ನಿರ್ಮಾಪಕರಿಗೆ ದುಡ್ಡು ಬರಲಿ. ನನ್ನ ಸಿನಿಮಾ ಜರ್ನಿಯಲ್ಲಿ ದುಡ್ಡು ಮಾಡಿದ್ದನ್ನು ನೋಡಿದ್ದೇನೆ. ಕಳೆದುಕೊಂಡಿದ್ದನ್ನು ನೋಡಿದ್ದೇನೆ. ನಿರ್ಮಾಪಕರಿಗೆ ಒಳ್ಳೆ ದುಡ್ಡು ಬಂದರೆ ಇಡೀ ಸಿನಿಮಾ ಗೆದ್ದಂತೆ ಎಂದು ತಿಳಿಸಿದರು.
ಕನ್ನಡದಲ್ಲೂ ‘ಆಶಿಕಿ’ ಕಿಕ್..ಇದು ಕ್ರೈಮ್ ರಿಪೋರ್ಟರ್ ಹೆಣೆದ ಮ್ಯೂಸಿಕಲ್ ಲವ್ ಸ್ಟೋರಿ#ashiki #sandeepkumar #aishwaryasindoogi #guruprasad #suchendraprasad #Jchandrakalaa #gchandrashekar #tulasishivamani #pramodini #cinemasaamrajya #arasucreations pic.twitter.com/lDYfsfZZ00
— Cinema Saamrajya – ಸಿನಿಮಾ ಸಾಮ್ರಾಜ್ಯ (@CSaamrajya) September 15, 2022
ನಿರ್ದೇಶಕಿ ಜೆ.ಚಂದ್ರಕಲಾ, ಮಹಿಳಾ ನಿರ್ದೇಶಕಿರು ಬಹಳ ಅಪರೂಪ ಅಂತಾ ಎಲ್ಲರೂ ಹೇಳುತ್ತಿದ್ದರು. ಯಾಕೆ ವಿರಳ ಅಂದರೆ. ಮಹಿಳಾ ನಿರ್ದೇಶಕಿಯರನ್ನು ನಂಬಿಕೊಂಡು ಯಾವ ನಿರ್ಮಾಪಕರು ದುಡ್ಡ ಹಾಕುತ್ತಾರೆ. ನಾನು ಇಂಡಸ್ಟ್ರೀಗೆ ಬಂದು ಹದಿನಾರರಿಂದ ಹದಿನೇಳು ವರ್ಷವಾಯ್ತು. ಏನೂ ದಬಾಕೋಕೆ ಆಗಿಲ್ಲ. ನಾನು ಏನಾದರೂ ಪ್ರೋವ್ ಮಾಡಬೇಕು. ನಾವುಗಳು ಅದೇ ಪ್ರಯತ್ನದಲ್ಲಿ ಇದ್ದೇವೆ. ಆಶಿಕಿ ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ. ಲಿಯೋ ಅದ್ಭುತ ಮ್ಯೂಸಿಕ್ ಕೊಟ್ಟಿದ್ದಾರೆ. ಪ್ರತಿಯೊಬ್ಬರು ಸಿನಿಮಾಗೆ ಸಪೋರ್ಟ್ ಮಾಡಿ ಎಂದರು.
ನಿರ್ಮಾಪಕ ಜಿ ಚಂದ್ರಶೇಖರ್ ಮಾತನಾಡಿ, ಸಿನಿಮಾಗೆ ಪ್ರೋತ್ಸಾಹ ಕೊಟ್ಟ ಎಲ್ಲಾ ಟೆಕ್ನಿಷಿಯನ್ಸ್. ನನ್ನ ಸ್ನೇಹಿತರಿಗೆ ಎಲ್ಲರಿಗೂ ಧನ್ಯವಾದ. ನನ್ನ ಚಿತ್ರದ ಬಗ್ಗೆ ನಾನು ಮಾತಾಡಿದರೆ ಚೆನ್ನಾಗಿರುವುದಿಲ್ಲ. ಜನರು ನೋಡಿ ಮಾತನಾಡಬೇಕು ಎಂದು ತಿಳಿಸಿದರು.
ಜೆ ಚಂದ್ರಕಲಾ(JCK) ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಸಾಕಷ್ಟು ವರ್ಷ ಮಾಧ್ಯಮ ರಂಗದಲ್ಲಿ ಸಿನಿಮಾ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಸಂದೀಪ್ ಕುಮಾರ್, ಪ್ರದೀಪ್ ರಾಜ್ ನಾಯಕರಾಗಿ ಅಭಿನಯಿಸಿದ್ದು, ನಾಯಕಿಯಾಗಿ ಐಶ್ವರ್ಯ ಸಿಂಧೋಗಿ ಬಣ್ಣ ಹಚ್ಚಿದ್ದಾರೆ. ಗುರುಪ್ರಸಾದ್, ಸುಚೇಂದ್ರ ಪ್ರಸಾದ್, ತುಳಸಿ ಶಿವಮಣಿ, ಪ್ರಮೋದಿನಿ ಹಿರಿಯ ತಾರಾಬಳಗ ಚಿತ್ರದಲ್ಲಿದೆ.
ಇದನ್ನೂ ಓದಿ : ವಿಭಿನ್ನ ಶೀರ್ಷಿಕೆ ‘ಮಂಕು ಭಾಯ್ ಫಾಕ್ಸಿ ರಾಣಿ’ ಬಿಡುಗಡೆಗೆ ರೆಡಿ…ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಚೊಚ್ಚಲ ಸಿನಿಮಾ ಕನಸು ಇದು
ಇದನ್ನೂ ಓದಿ : ನಟ ಡಾಲಿ ಧನಂಜಯ ಅಭಿನಯದ “ಮಾನ್ಸೂನ್ ರಾಗ” ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ
ಮ್ಯೂಸಿಕಲ್ ಲವ್ ಸ್ಟೋರಿ ಜೊತೆಗೆ ತ್ರಿಕೋನ ಪ್ರೇಮಕಥೆ ಹೊತ್ತ ‘ಆಶಿಕಿ’ ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು, ಪ್ರತಿ ಹಾಡುಗಳು ಡಿಫ್ರೆಂಟ್ ಆಗಿ ಮೂಡಿಬಂದಿವೆ. ಶ್ರೀ ಲಕ್ಷ್ಮೀ ನರಸಿಂಹ ಮೂವೀಸ್ ಬ್ಯಾನರ್ ನಡಿ ಜಿ ಚಂದ್ರಶೇಖರ್ ಬಂಡವಾಳ ಹೂಡಿದ್ದು, ರಾಜರತ್ನ, ನಿತಿನ್ ಅಪ್ಪಿ ಛಾಯಾಗ್ರಾಹಣ, ಲಿಯೋ ಸಂಗೀತ ನಾಗೇಂದ್ರ ಅರಸ್ ಸಂಕಲನ ಚಿತ್ರಕ್ಕಿದೆ. ಇತ್ತೀಚೆಗಷ್ಟೇ ಸೆನ್ಸಾರ್ ಪಾಸಾಗಿರುವ ಆಶಿಕಿ ಸಿನಿಮಾ ದಸರಾಗೆ ತೆರೆಗೆ ಬರಲಿದೆ.
‘Aashiqui’ kicks in Kannada too..This is a musical love story woven by a crime reporter.