Ranbir Kapoor :ಬ್ರಹ್ಮಾಸ್ತ್ರ ಗೆಲುವಿನ ಬಳಿಕ ಸೋಮನಾಥ ದೇಗುಲದ ದರ್ಶನ ಪಡೆದ ರಣಬೀರ್​ ಕಪೂರ್​ : ಅಯಾನ್​ ಮುಖರ್ಜಿ ಸಾಥ್​

Ranbir Kapoor : ನಟ ರಣಬೀರ್​ ಕಪೂರ್ ಸದ್ಯ ತಮ್ಮ ಬ್ರಹ್ಮಾಸ್ತ್ರ ಸಿನಿಮಾದ ಯಶಸ್ಸನ್ನು ಎಂಜಾಯ್​ ಮಾಡ್ತಿದ್ದಾರೆ. ಸಾಲು ಸಾಲು ಬಾಲಿವುಡ್​ ಸಿನಿಮಾಗಳು ನೆಲಕಚ್ಚುತ್ತಿದ್ದ ಈ ಸಂದರ್ಭದಲ್ಲಿ ಬ್ರಹ್ಮಾಸ್ತ್ರ ಸಿನಿಮಾ ಮಾತ್ರ ಈ ಸಾಲಿಗೆ ಸೇರದೇ ಕೋಟಿ ಕೋಟಿ ಕಲೆಕ್ಷನ್​ ಮಾಡುತ್ತಾ ಬಾಕ್ಸಾಫೀಸಿನಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಬ್ರಹ್ಮಾಸ್ತ್ರ ಸಿನಿಮಾ ತೆಲಗು ಆವೃತ್ತಿಯಲ್ಲಿ ಎಲ್ಲಕ್ಕಿಂತ ಹೆಚ್ಚು ಕಲೆಕ್ಷನ್​ ಮಾಡುತ್ತಿದ್ದು ದಕ್ಷಿಣ ಭಾರತದಿಂದಲೇ ಬ್ರಹ್ಮಾಸ್ತ್ರಕ್ಕೆ ಇನ್ನಷ್ಟು ಲಾಭ ಸಿಕ್ಕಂತಾಗಿದೆ .


ಹಿಂದಿ ಜೊತೆಯಲ್ಲಿ ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲೂ ಬ್ರಹ್ಮಾಸ್ತ್ರ ರಿಲೀಸ್​ ಆಗಿದ್ದು ದೇಶಾದ್ಯಂತ ನೂರು ಕೋಟಿಗೂ ಅಧಿಕ ಹಣವನ್ನು ಕಲೆಕ್ಟ್​ ಮಾಡಿದೆ. ಹೀಗಾಗಿ ಸದ್ಯ ದೊಡ್ಡ ಯಶಸ್ಸನ್ನು ಕಾಣುತ್ತಿರುವ ನಟ ರಣಬೀರ್​ ಕಪೂರ್​ ಸೋಮನಾಥ ದೇವಸ್ಥಾನಕ್ಕೆ ಗುರುವಾರ ಭೇಟಿ ನೀಡಿದ್ದಾರೆ. ಅಯಾನ್​ ಮುಖರ್ಜಿ ಹಾಗೂ ರಣಬೀರ್​ ಕಪೂರ್​ ಸೋಮನಾಥ ದೇವಸ್ಥಾನಕ್ಕೆ ತೆರಳಿದ್ದು ಈ ಫೋಟೋಗಳನ್ನು ಅಯಾನ್​ ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

ಫೋಟೋಗಳಲ್ಲು ಅಯಾನ್​ ಮುಖರ್ಜಿ ಹಾಗೂ ರಣಬೀರ್​ ಕಪೂರ್​ ಸಾಂಪ್ರದಾಯಿಕ ಉಡುಗೆಗಳಲ್ಲಿ ಒಂದಾದ ಕುರ್ತಾ ಪೈಜಾಮಾದಲ್ಲಿ ಕಾಣಿಸಿದ್ದಾರೆ. ರಣಬೀರ್​ ಕಪೂರ್​ ಬಿಳಿ ಬಣ್ಣದ ಕುರ್ತಾ – ಪೈಜಾಮಾ ಹಾಗೂ ನೀಲಿ ಬಣ್ಣದ ನೆಹರೂ ಜಾಕೆಟ್​ ಧರಿಸಿದ್ದಾರೆ. ಯೇ ಜವಾನಿ ಹೇ ದಿವಾನಿ ನಿರ್ದೇಶಕ ಅಯಾನ್​ ಹಳದಿ ಹಾಗೂ ಬಿಳಿ ಬಣ್ಣದ ಕುರ್ತಾ ಸೆಟ್​ನ್ನು ಧರಿಸಿದ್ದಾರೆ.


ಈ ಫೋಟೋವನ್ನು ಶೇರ್​ ಮಾಡಿರುವ ಅಯಾನ್​ ಮುಖರ್ಜಿ, ಸೋಮನಾಥ ದೇಗುಲ, ಶ್ರೀ ಸೋಮೇಶ್ವರಾಯ ಜ್ಯೋತಿರ್ಲಿಂಗಾಯ ಮಹಾರುದ್ರಾಯ ನಮಃ, ಈ ವರ್ಷ ಸೋಮನಾಥ ದೇಗುಲಕ್ಕೆ ಇದು ನನ್ನ ಮೂರನೇ ಭೇಟಿ. ಬ್ರಹ್ಮಾಸ್ತ್ರ ಬಿಡುಗಡೆಯಾದ ಬಳಿಕ ನಾನು ಸೋಮನಾಥಕ್ಕೆ ಭೇಟಿ ನೀಡುತ್ತೇನೆಂದು ಮನಸ್ಸಿನಲ್ಲೇ ಹೇಳಿಕೊಂಡಿದ್ದೆ. ಅದರಂತೆ ನಾವು ಇಲ್ಲಿದ್ದೇವೆ ಎಂದು ಬರೆದುಕೊಂಡಿದ್ದಾರೆ.


ಆಲಿಯಾ ಭಟ್​ ಸೇರಿದಂತೆ ಬ್ರಹ್ಮಾಸ್ತ್ರ ಸಿನಿಮಾ ತಂಡ ಇತ್ತೀಚಿಗೆ ಸಿನಿಮಾದ ಪ್ರಚಾರಕ್ಕಾಗಿ ಅಹಮದಾಬಾದ್​ಗೆ ಭೇಟಿ ನೀಡಿತ್ತು. ಅಯಾನ್​ ಬ್ರಹ್ಮಾಸ್ತ್ರ ಸಿನಿಮಾಗಳಲ್ಲಿ ಇನ್ನೂ ಬಿಡುಗಡೆಯಾಗದ ಹಾಡುಗಳನ್ನು ದಸರಾದಲ್ಲಿ ರಿಲೀಸ್​ ಮಾಡೋದಾಗಿ ಹೇಳಿದ್ದಾರೆ. ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಇನ್ನೂ ನಾವು ಬಿಡುಗಡೆ ಮಾಡದ ಹಲವು ಹಾಡುಗಳಿವೆ. ರಸಿಯಾ, ನಮ್ಮ ಶೀವ ಹೀಗೆ ಮುಖ್ಯ ಹಾಡುಗಳು ಇನ್ನೂ ರಿಲೀಸ್​ ಆಗಬೇಕಿದೆ. ನಮಗೆ ಸಿನಿಮಾ ಬಿಡುಗಡೆ ಕಡೆಗೆ ಹೆಚ್ಚಿನ ಗಮನ ನೀಡಬೇಕಿತ್ತು. ಹೀಗಾಗಿ ನಮಗೆ ಈ ಟ್ರ್ಯಾಕ್​ಗಳ ಲಾಂಚ್​ಗೆ ಸರಿಯಾಗಿ ನ್ಯಾಯ ನೀಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದರು.


ಮುಂದಿನ ವಾರದ ಆರಂಭದಲ್ಲಿ ರಾಸಿಯಾ ಹಾಗೂ ಇತರೆ ಟ್ರ್ಯಾಕ್​ಗಳನ್ನು ಲಾಂಚ್​ ಮಾಡಲು ಯೋಚಿಸುತ್ತಿದ್ದೇವೆ. ಅಕ್ಟೋಬರ್​ ಐದು ದಸರಾದಂದು ಸಂಪೂರ್ಣ ಬ್ರಹ್ಮಾಸ್ತ್ರ ಮ್ಯೂಸಿಕ್​ ಆಲ್ಬಂ ರಿಲೀಸ್​ ಆಗಲಿದೆ ಎಂದು ಅಯಾನ್​ ಮುಖರ್ಜಿ ಘೋಷಣೆ ಮಾಡಿದ್ದಾರೆ.

ಇದನ್ನು ಓದಿ : woman killed grandmother :ಆನ್​ಲೈನ್​ ಸಾಲದ ಆ್ಯಪ್​ಗಳಿಂದ ಕಿರುಕುಳ : ಸಾಲ ತೀರಿಸಲೆಂದು ಅಜ್ಜಿಯನ್ನೇ ಕೊಂದ ಮೊಮ್ಮಗಳು ಅಂದರ್​

ಇದನ್ನೂ ಓದಿ : Aashiki : ಕನ್ನಡದಲ್ಲೂ ‘ಆಶಿಕಿ’ ಕಿಕ್..ಇದು ಕ್ರೈಮ್ ರಿಪೋರ್ಟರ್ ಹೆಣೆದ ಮ್ಯೂಸಿಕಲ್ ಲವ್ ಸ್ಟೋರಿ

Ayan Mukerji poses with Ranbir Kapoor at Somnath Temple

Comments are closed.