ನವದೆಹಲಿ : ದೇಶಕ್ಕಾಗಿ ದುಡಿಯುತ್ತಿರುವವರಿಗೆ, ಕೊರೊನಾ ವಿರುದ್ದ ಹೋರಾಟ ನಡೆಸುತ್ತಿರುವವರಿಗಾಗಿ ಎಲ್ಲರೂ ಪ್ರಾರ್ಥನೆಯನ್ನು ಸಲ್ಲಿಸಿ. ಇಂದಿನ ಪರಿಸ್ಥಿತಿಯಲ್ಲಿ ಬುದ್ದನ ವಿಚಾರಗಳು ಪ್ರಸ್ತುತ. ಬುದ್ದನನ್ನು ನೆನೆದರೆ ಕಠಿಣ ಪರಿಸ್ಥಿತಿಯಿಂದ ಹೊರಗೆ ಬರಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದ ನರೇಂದ್ರ ಮೋದಿ ಅವರು, ದೇಶದ ಜನರಿಗೆ ಬುದ್ದ ಪೂರ್ಣಿಮೆಯ ಶುಭಾಶಯಗಳನ್ನು ಕೋರಿದ್ದಾರೆ. ಲುಂಬಿಲಿ, ಬೋಧಗಯಾ, ಸಾರಾನಾಥ, ಖಷಿನಗರ, ಶ್ರೀಲಂಕಾದ ಅನುರಾಧ ಸ್ತೂಪದಲ್ಲಿ ಬೌದ್ದ ಪೂರ್ಣಿಮೆ ಪೂಜೆ ನಡೆಯುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಮುಖತಃ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಆದರೆ ಈ ಹಿಂದಿನ ವರ್ಷಗಳಲ್ಲಿ ಬುದ್ದ ಪೂರ್ಣಿಮೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದನ್ನು ಮೋದಿ ಮೆಲುಕು ಹಾಕಿದ್ದಾರೆ.

ಬುದ್ದ ಭಾರತದ ಸಂಸ್ಕೃತಿ, ಪರಂಪರೆಯನ್ನು ಪಸರಿಸಿದ್ದಾರೆ. ಈ ಸಂದರ್ಭದಲ್ಲಿ ಮಾತ್ರವೇ ಸೀಮಿತವಲ್ಲ, ಬುದ್ದನ ವಿಚಾರಗಳು ಈ ಸಂದರ್ಭದಲ್ಲಿ ಪ್ರಸ್ತುತ. ಸಿದ್ದಾರ್ಥ ಗೌತಮನಾಗಿ ಬದಲಾಗಿದ್ದು ಎಲ್ಲರಿಗೂ ಮಾದರಿ. ಬುದ್ದ ಕೇವಲ ಹೆಸರಲ್ಲ ಅದು ಪವಿತ್ರತೆಯ ಸಂಕೇತ. ಎಲ್ಲರೂ ಬುದ್ದನಾಗಿ ಬದಲಾಗುವ ಸಮಯ ಬಂದಿದೆ. ವಿಶ್ವದ ಪ್ರತೀ ಮೂಲೆ ಮೂಲೆಯಲ್ಲಿಯೂ ಬುದ್ದನನ್ನು ನೆನೆಯುತ್ತಿದ್ದೇವೆ. ಬುದ್ದನನ್ನು ನೆನೆದರೆ ಕಠಿಣ ಪರಿಸ್ಥಿತಿಯಿಂದ ಹೊರಗೆ ಬರಬಹುದಾಗಿದೆ. ದುಃಖ, ನಿರಾಸೆ, ಹತಾಶೆಯ ವೇಳೆಯಲ್ಲಿ ಬುದ್ದನ ವಿಚಾರಗಳನ್ನು ನೆನೆಯಿರಿ ಎಂದಿದ್ದಾರೆ.

ಭಾರತ ನಿಸ್ವಾರ್ಥ ಭಾವದಿಂದ ಶ್ರಮಿಸುತ್ತಿದೆ. ವಿಶ್ವದ ಅನೇಕ ರಾಷ್ಟ್ರಗಳಿಗೆ ಭಾರತ ನೆರವಾಗುತ್ತಿದೆ. ಲಾಭ – ನಷ್ಟ, ಸಮರ್ಥ-ಅಸಮರ್ಥರ ಬೆನ್ನಿಗೆ ನಿಂತಿದ್ದೇವೆ. ಸಹಾಯ ಮಾಡುವ ಯಾವ ಅವಕಾಶವನ್ನು ಬಿಟ್ಟಿಲ್ಲ. ಭಾರತ ನಿರಂತರವಾಗಿ ಮಾನವೀಯತೆಗಾಗಿ ಶ್ರಮಿಸುತ್ತಿದೆ. ಕೊರೊನಾ ಹೋರಾಟದಿಂದ ಯಾರು ಕೂಡ ಹಿಂದೆ ಸರಿಯಬಾರದು. ಅನಿವಾರ್ಯವಾಗಿ ಎಲ್ಲರೂ ಹೋರಾಡಲೇ ಬೇಕಿದೆ. ಯಾರು ಎಲ್ಲಿಯೇ ಇರಿ, ಹೇಗೆಯೇ ಇರಿ ಆದರೆ ಸುರಕ್ಷಿತವಾಗಿರಿ ಎಂದಿದ್ದಾರೆ.

ನಮ್ಮ ಗುರಿ ಸಮಯದ ಜೊತೆಗೆ ಬದಲಾಗುತ್ತದೆ. ಭಾರತದ ಪ್ರಗತಿ ವಿಶ್ವದ ಪ್ರಗತಿಗೆ ನೆರವಾಗುತ್ತಿದೆ. ಆದರೆ ನಮ್ಮ ಕೆಲಸ ನಿರಂತರ ಸೇವಾ ಭಾವದಿಂದರಬೇಕು. ಸ್ವ ಜಾಗೃತಿಯಿಂದ ಮುನ್ನಡೆಯಬೇಕಿದೆ. ಅಸಹಾಯಕರಿಗೆ ಪ್ರತಿಯೊಬ್ಬರೂ ಕೂಡ ನೆರವಾಗಬೇಕಿದೆ. ನಿಮ್ಮೊಂದಿಗೆ ಮುಖಾಮುಖಿಯಾಗಿ ಮಾತನಾಡುವ ಭಾಗ್ಯ ಸಿಗುತ್ತಿಲ್ಲ. ಆದರೆ. ಕೊರೊನಾ ವಾರಿಯರ್ಸ್ ಗಾಗಿ, ದೇಶಕ್ಕಾಗಿ ದುಡಿಯುವವರಿಗಾಗಿ ಎಲ್ಲರೂ ಬುದ್ದ ಪೂರ್ಣಿಮೆಯ ದಿನದಂದು ಪ್ರಾರ್ಥನೆಯನ್ನು ಸಲ್ಲಿಸಿ ಎಂದಿದ್ದಾರೆ.