ಬುಧವಾರ, ಏಪ್ರಿಲ್ 30, 2025
HomeCinemasonam kapoor :ತಮ್ಮ ಮಗುವಿನ ಹೆಸರಿನ ಅರ್ಥ ತಿಳಿಸಿದ ನಟಿ ಸೋನಂ ಕಪೂರ್​ ಅಹುಜಾ

sonam kapoor :ತಮ್ಮ ಮಗುವಿನ ಹೆಸರಿನ ಅರ್ಥ ತಿಳಿಸಿದ ನಟಿ ಸೋನಂ ಕಪೂರ್​ ಅಹುಜಾ

- Advertisement -

sonam kapoor son vaayu : ಬಾಲಿವುಡ್​ ನಟಿ ಸೋನಂ ಕಪೂರ್​ ಕಳೆದ ತಿಂಗಳು 20ರಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಾತೃತ್ವದ ಕ್ಷಣಗಳನ್ನು ಅನುಭವಿಸುತ್ತಿರುವ ನಟಿ ಸೋನಂ ಕಪೂರ್​ ಇನ್​ಸ್ಟಾಗ್ರಾಂನಲ್ಲಿ ಕೆಲವು ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ ಇಲ್ಲಿಯವರೆಗೆ ನಟಿ ಸೋನಂ ಕಪೂರ್​ ಎಲ್ಲಿ ಕೂಡ ತಮ್ಮ ಪುತ್ರನ ಹೆಸರನ್ನು ಹೇಳಿರಲಿಲ್ಲ. ಆದರೆ ಇದೀಗ ನಟಿ ಸೋನಂ ಕಪೂರ್​ ತಮ್ಮ ಪುತ್ರನ ಹೆಸರನ್ನು ಘೋಷಿಸಿದ್ದಾರೆ. ಪತಿ ಹಾಗೂ ಮಗುವಿನ ಜೊತೆಯಲ್ಲಿ ಸುಂದರವಾದ ಫೋಟೋವನ್ನು ಹಂಚಿಕೊಂಡಿರುವ ಸೋನಂ ಕಪೂರ್​ ಮಗುವಿನ ಹೆಸರನ್ನು ರಿವೀಲ್​ ಮಾಡಿದ್ದಾರೆ.

ಹಳದಿ ಬಣ್ಣದ ಧಿರಿಸಿನಲ್ಲಿ ಸೋನಂ ಕಪೂರ್, ಆನಂದ್​ ಅಹುಜಾ ಹಾಗೂ ಮಗು ಫೋಟೋಗೆ ಪೋಸ್​ ನೀಡಿದ್ದಾರೆ. ನಟಿ ಸೋನಂ ಕಪೂರ್​ ತಮ್ಮ ಮಗುವಿಗೆ ವಾಯು ಕಪೂರ್​ ಅಹುಜಾ ಎಂದು ಹೆಸರಿಟ್ಟಿದ್ದಾರೆ. ಸೋನಂ ಕಪೂರ್​ ಫೋಟೋದ ಶೀರ್ಷಿಕೆಯಲ್ಲಿ ವಾಯುವಿನ ಪೂರ್ಣ ಅರ್ಥವನ್ನೂ ತಿಳಿಸಿದ್ದಾರೆ. ನಮ್ಮ ಜೀವನಕ್ಕೆ ಹೊಸ ಅರ್ಥ ಬಂದಿದೆ. ಹನುಮಂತ ಹಾಗೂ ಭೀಮನ ಧೈರ್ಯ ಹಾಗೂ ಶಕ್ತಿಯನ್ನು ನಮಗೆ ನೀಡಿದ್ದಾರೆ. ನಮ್ಮ ಮಗನನ್ನು ನಾವು ಆರ್ಶೀವರ್ದಿಸುತ್ತೇವೆ. ನಾವೆಲ್ಲರೂ ಒಟ್ಟಾಗಿ ನಮ್ಮ ಮಗುವಿಗೆ ವಾಯು ಕಪೂರ್​ ಅಹುಜಾ ಎಂದು ಹೆಸರಿಟ್ಟಿದ್ದೇವೆ ಎಂದು ಹೇಳಿದ್ದಾರೆ.


ನಟಿ ಸೋನಂ ಕಪೂರ್​ ಗಾಢ ಹಳದಿ ಬಣ್ಣ ಅನಾರ್ಕಲಿ ಸೂಟ್​ ಧರಿಸಿದ್ದಾರೆ. ತೋಳು ಹಾಗೂ ಕುತ್ತಿಗೆ ಭಾಗದಲ್ಲಿ ಚಿನ್ನದ ಬಣ್ಣದ ದಾರದಿಂದ ಕಸೂತಿ ಮಾಡಲಾಗಿದೆ. ಮ್ಯಾಚಿಂಗ್​ ದುಪ್ಪಟ್ಟಾದಲ್ಲಿಯೂ ಚಿನ್ನದ ಬಣ್ಣದ ಕಸೂತಿಯಿದೆ. ತುರುಬು ಹಾಕಿಕೊಂಡು ಅದಕ್ಕೆ ಮಲ್ಲಿಗೆ ಹೂವನ್ನು ಮುಡಿದಿದ್ದಾರೆ. ದೊಡ್ಡ ಕಿವಿಯೋಲೆ, ಬಂಗಾರ ಬಣ್ಣದ ಬಿಂದಿ ಹಾಗೂ ಕೆಂಪು ಬಣ್ಣದ ನೇಲ್​ ಪಾಲಿಶ್​ ಹಾಕಿದ್ದಾರೆ. ಇತ್ತ ಆನಂದ್​ ಅಹುಜಾ ಬಿಳಿ ದಾರದ ಕಸೂತಿ ಹೊಂದಿರುವ ಹಳದಿ ಬಣ್ಣದ ಕುರ್ತಾ ಪೈಜಾಮಾ ಧರಿಸಿದ್ದಾರೆ. ವಾಯು ಕಪೂರ್ ಅಹುಜಾನನ್ನು ಹಳದಿ ಬಣ್ಣದ ಮಸ್ಲಿನ್​ ಬಟ್ಟೆಯಲ್ಲಿ ಇರಿಸಲಾಗಿದೆ.

ಇದನ್ನು ಓದಿ : Bigg boss Kannada season 9: ಸೆಪ್ಟೆಂಬರ್‌ 24 ರಿಂದ ಬಿಗ್‌ಬಾಸ್‌ ಸೀಸನ್ 9 ಆರಂಭ : ವಾಹಿನಿ ಮುಂದೆ ಬೇಡಿಕೆ ಇಟ್ಟ ವೀಕ್ಷಕರು

ಇದನ್ನೂ ಓದಿ : Vikrant Rona : ವಿಕ್ರಾಂತ್ ರೋಣ…ರಾ..ರಾ..ರಾ..ರಕ್ಕಮ್ಮ ಹಾಡಿಗೆ ಕುಣಿದವರಿಗೆ ಸಿಕ್ತು ಇಪ್ಪತ್ತೈದು ಸಾವಿರ ಬಹುಮಾನ

sonam kapoor baby boy name vayu kapoor ahuja shares photo of son vaayu instagram

RELATED ARTICLES

Most Popular