Doordarshan: ಬಹು ನಿರೀಕ್ಷಿತ “ದೂರದರ್ಶನ” ಸಿನಿಮಾದಲ್ಲಿ.. ಪೃಥ್ವಿ ಅಂಬಾರ್ ಜೊತೆ ಉಗ್ರಂ ಮಂಜು ಹೊಸ ಅವತಾರ

ದೂರದರ್ಶನ (Doordarshan)ಸಿನಿಮಾ ಸದ್ಯ ಕುತೂಹಲದ ಕೇಂದ್ರಬಿಂದುವಾಗಿದೆ. ವಿಭಿನ್ನ ಪೋಸ್ಟರ್, ಟೀಸರ್ ಝಲಕ್ ಮತ್ತು ಇಲ್ಲಿವರೆಗೂ ಮನ ಮುಟ್ಟುವ ಪ್ರಚಾರದ ಮೂಲಕ ನಿರೀಕ್ಷೆಯನ್ನು ಇಮ್ಮಡಿಗೊಳಿಸಿರುತ್ತದೆ. ಈ ಚಿತ್ರದಲ್ಲಿ ಉಗ್ರಂ ಸಿನಿಮಾ ಖ್ಯಾತಿಯ ಮಂಜು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದುವರೆಗೂ ಮಾಡಿರುವ ಸಿನಿಮಾಗಳಿಗಿಂತ ಈ ಚಿತ್ರದಲ್ಲಿ ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಕಿಟ್ಟಿ ಎಂಬ ಪಾತ್ರಕ್ಕೆ ಉಗ್ರಂ ಮಂಜು ಬಣ್ಣ ಹಚ್ಚಿದ್ದು, ಸಾಲು ಸಾಲು ಒದ್ದಾಟ ಅನುಭವಿಸುವ, ವೈಫಲ್ಯಗಳನ್ನು ಎದುರಿಸಿಕೊಂಡು ಗುರಿ ಬೆನ್ನುಟ್ಟುವ ಗಟ್ಟಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಾಯಕ ಮನು ಮತ್ತು ಕಿಟ್ಟಿ ಹೈವೋಲ್ಟೇಜ್ ಸೀಕ್ವೆನ್ಸ್ ಗಳು ಈ ಸಿನಿಮಾದಲ್ಲಿ ಕಾಣಬಹುದಾಗಿದೆ. ಮಂಜು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಕಾರ್ಯಕಾರಿ ನಿರ್ಮಾಪಕನಾಗಿ, ಕಲಾ ವಿನ್ಯಾಸಕನಾಗಿಯೂ ತಂಡದ ಜೊತೆ ಜವಾಬ್ದಾರಿಯನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಈ ಸಿನಿಮಾದ ಮೂಲಕ ಮಂಜುರವರ ಬಹುಮುಖ ಪ್ರತಿಭೆಯನ್ನು ಕಾಣಬಹುದಾಗಿದೆ.

ನೈಜ ಘಟನೆ ಹಾಗೂ ಕಾಲ್ಪನಿಕತೆ ಕಥಾಹಂದರ ಸುತ್ತ ಹೆಣೆದಿರುವ ದೂರದರ್ಶನ (Doordarshan) ಸಿನಿಮಾದಲ್ಲಿ ಪೃಥ್ವಿ ಅಂಬರ್ ನಾಯಕನಾಗಿ ನಟಿಸಿದ್ದು, ಅವರ ಜೊತೆಯಾಗಿ ಅಯಾನಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಸೇರಿದಂತೆ ಮತ್ತಿತರ ಬಹು ತಾರಾಗಣ ಸಿನಿಮಾದಲ್ಲಿದೆ.

ಇದನ್ನೂ ಓದಿ : ವಿಕ್ರಾಂತ್ ರೋಣ…ರಾ..ರಾ..ರಾ..ರಕ್ಕಮ್ಮ ಹಾಡಿಗೆ ಕುಣಿದವರಿಗೆ ಸಿಕ್ತು ಇಪ್ಪತ್ತೈದು ಸಾವಿರ ಬಹುಮಾ

ಇದನ್ನೂ ಓದಿ : ಕೆಜಿಎಫ್‌ ಖ್ಯಾತಿಯ ಕೃಷ್ಣಾಜಿ ರಾವ್‌ ರವರ ಸಿನಿಮಾ ‘ನ್ಯಾನೋ ನಾರಾಯಣಪ್ಪ’ ಮುಂದಿನ ತಿಂಗಳು ತೆರೆಗೆ

ಇದನ್ನೂ ಓದಿ : ’ಲವ್ ಲಿ’ ಚಿತ್ರದ ಸೆಕೆಂಡ್ ಶೆಡ್ಯೂಲ್ ಶೂಟಿಂಗ್‌ನಲ್ಲಿ ಬ್ಯುಸಿಯಾದ ನಟ ವಸಿಷ್ಠ ಸಿಂಹ

ಇದನ್ನೂ ಓದಿ : ‘ರಕ್ತದೋಕುಳಿ’ ಟೀಸರ್ ಲಾಂಚ್ ಮಾಡಿದ ಯುವ ನಟ ಧೀರೇನ್ ರಾಮ್ ಕುಮಾರ್

ಸುಕೇಶ್ ಶೆಟ್ಟಿ ನಿರ್ದೇಶನದಲ್ಲಿ ತಯಾರಾಗುತ್ತಿರುವ “ದೂರದರ್ಶನ” ಚಿತ್ರ ಈಗಷ್ಟೇ ಡಬ್ಬಿಂಗ್ ಮುಗಿಸಿ ಶೀಘ್ರದಲ್ಲಿ ತೆರೆಗೆ ತರಲು ಚಿತ್ರ ತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸ ಗಳಲ್ಲಿ ಬ್ಯುಸಿಯಾಗಿದೆ. ಸಿನಿಮಾವನ್ನು ವಿಎಸ್ ಮೀಡಿಯಾ ಎಂಟರ್ ಪ್ರೈಸಸ್ ಬ್ಯಾನರ್ ನಡಿ ರಾಜೇಶ್ ಭಟ್ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾಕ್ಕೆ ವಾಸುಕಿ ವೈಭವ್ ಉತ್ತಮ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. ಹಾಗೆ ಚಿತ್ರದಲ್ಲಿ ಛಾಯಗ್ರಹಣವನ್ನು ಅರುಣ್ ಸುರೇಶ್ ರವರು ಮಾಡಿದ್ದಾರೆ. ದೂರದರ್ಶನ ಸಿನಿಮಾಕ್ಕೆ ನಂದೀಶ್ ಟಿಜಿರವರು ಉತ್ತಮ ಸಂಭಾಷಣೆಯನ್ನು ನೀಡಿದ್ದಾರೆ. ಹಾಗೆಯೇ ಪ್ರದೀಪ್ ಆರ್ ರಾವ್ ರವರು ಈ ಚಿತ್ರಕ್ಕೆ ಸಂಕಲನ ನೀಡಿದ್ದಾರೆ. ದೂರದರ್ಶನ ಸಿನಿಮಾದಲ್ಲಿ ನಾಲ್ಕು ಹಾಡುಗಳು, ಎರಡು ಫೈಟ್ ಸೀನ್ಸ್ ಗಳಿದ್ದು, ಹೊಡೆದಾಟದ ದೃಶ್ಯಗಳನ್ನು ನೈಜ ರೀತಿಯಲ್ಲಿ ಚಿತ್ರೀಕರಿಸಲಾಗಿದೆ. ಶೀರ್ಘದಲ್ಲಿಯೇ ಚಿತ್ರತಂಡ ತೆರೆಗೆ ಬರಲು ಸಜ್ಜಾಗುತ್ತಿದೆ.

Ugram Manju new avatar with Prithvi Ambar in much awaited movie “Doordarshan”.

Comments are closed.