ವಿಜಯಪುರ :Yatnal :ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ತಲೆದಂಡ ತೆತ್ತಿದ್ದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಇದೀಗ ಈ ಪ್ರಕರಣದಲ್ಲಿ ಕ್ಲೀನ್ ಚಿಟ್ ಪಡೆದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಪ್ರಕರಣದಲ್ಲಿ ಕ್ಲೀನ್ಚಿಟ್ ಪಡೆದ ಬಳಿಕ ಶತಾಯಗತಾಯ ಸಂಪುಟಕ್ಕೆ ವಾಪಸ್ ಮರಳಬೇಕು ಅಂತಾ ಈಶ್ವರಪ್ಪ ಯತ್ನಿಸುತ್ತಲೇ ಇದ್ದಾರೆ. ಈಗಾಗಲೇ ಅನೇಕ ಬಾರಿ ಈ ಸಂಬಂಧ ಹಲವು ಹೇಳಿಕೆಗಳನ್ನೂ ನೀಡಿದ್ದಾರೆ. ಇದೀಗ ಈ ವಿಚಾರವಾಗಿ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದ್ದು ಈಶ್ವರಪ್ಪರನ್ನು ಆದಷ್ಟು ಬೇಗ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಆದಷ್ಟು ಬೇಗ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡಬೇಕು. ಖಾಲಿ ಇರುವ ಸಚಿವ ಸ್ಥಾನಗಳನ್ನು ತಾವೇ ಇಟ್ಟುಕೊಂಡು ಕೂಡಬಾರದು. ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಪ್ರಕ್ರಿಯೆ ಮಾಡಬೇಕು. ಪ್ರಧಾನಿ ಮೋದಿ ಗುಜರಾತ್ ಸಿಎಂ ಆಗಿದ್ದ ಸಂದರ್ಭದಲ್ಲಿ ಎಲ್ಲಾ ಸಚಿವ ಸ್ಥಾನಗಳನ್ನು ಇತರರಿಗೆ ನೀಡಿದ್ದರು. ಪ್ರಧಾನಿಯಾದಾಗಲೂ ಸಹ ಇದೇ ಪದ್ಧತಿಯನ್ನು ಅನುಸರಿಸಿದ್ದಾರೆ ಎಂದು ಹೇಳಿದ್ದಾರೆ.
ಮೋದಿ ವ್ಯವಸ್ಥೆಯ ಮಾದರಿಯ ಅಡಿಯಲ್ಲಿ ಸಿಎಂ ಬೊಮ್ಮಾಯಿ ಕೂಡ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡಬೇಕು. ಸುಳ್ಳು ಆರೋಪದ ಕಾರಣದಿಂದಾಗಿ ಕೆ.ಎಸ್ ಈಶ್ವರಪ್ಪ ರಾಜೀನಾಮೆ ನೀಡಿದ್ದರು. ಆರೋಪ ಮುಕ್ತವಾದ ಕೂಡಲೇ ಈಶ್ವರಪ್ಪರಿಗೆ ಮರಳಿ ಸಚಿವ ಸ್ಥಾನ ನೀಡುವ ಬಗ್ಗೆ ಆಶ್ವಾಸನೆ ನೀಡಿದ್ದರು. ಆದರೆ ಈಗ ಅದನ್ನು ಈಡೇರಿಸಬೇಕಾದ ಸಂದರ್ಭ ಎದುರಾಗಿದೆ . ಈಶ್ವರಪ್ಪ ಮಾತ್ರವಲ್ಲ ಬಿಜೆಪಿ ಸೇರ್ಪಡೆ ಸಂದರ್ಭದಲ್ಲಿ ಬಸವರಾಜ ಹೊರಟ್ಟಿಗೂ ಸಭಾಪತಿ ಸ್ಥಾನವನ್ನು ನೀಡುವ ಬಗ್ಗೆ ಆಶ್ವಾಸನೆ ನೀಡಿದ್ದರು. ಮಾತು ಕೊಟ್ಟ ಹಾಗೆ ಪಕ್ಷ ನಡೆದುಕೊಳ್ಳಬೇಕು. ಹೊರಟ್ಟಿಯನ್ನು ಸಭಾಪತಿ ಮಾಡಲು ಇಷ್ಟೊಂದು ವಿಳಂಬ ಮಾಡೋದು ಒಳ್ಳೆಯದಲ್ಲ. ಇದರಿಂದ ಪಕ್ಷದ ಮೇಲೆ ಯಾರೂ ವಿಶ್ವಾಸ ಇಡೋದಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಎಂ ಬೊಮ್ಮಾಯಿ ಹಾಗೂ ಜಗದೀಶ್ ಶೆಟ್ಟರ್ ಹೀಗೆ ಎಲ್ಲರೂ ಮಾತು ಕೊಟ್ಟಂಗೆ ನಡೆದುಕೊಳ್ಳಬೇಕು. ಚುನಾವಣೆಗೆ ಇನ್ನೇನು ಆರು ತಿಂಗಳು ಮಾತ್ರ ಬಾಕಿ ಉಳಿದಿದೆ. ಹೊರಟ್ಟಿ ಅವರನ್ನು ಕೂಡಲೇ ಸಭಾಪತಿ ಮಾಡಬೇಕು. ಈಶ್ವರಪ್ಪರಿಗೆ ಸಚಿವ ಸ್ಥಾನ ನೀಡಬೇಕು. ಜೊತೆಗೆ ಉಳಿದ ಸಚಿವ ಸ್ಥಾನಗಳನ್ನು ಭರ್ತಿ ಮಾಡಬೇಕು. ಎಲ್ಲವನ್ನು ಸಿಎಂ ಬೊಮ್ಮಾಯಿ ಸರಿ ಪಡಿಸುತ್ತಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : Women’s Asia Cup 2022 : ಮಹಿಳಾ ಏಷ್ಯಾ ಕಪ್ ಟಿ20: ಪಾಕಿಸ್ತಾನ ವಿರುದ್ಧ ಆಘಾತಕಾರಿ ಸೋಲು ಕಂಡ ಭಾರತದ ವನಿತೆಯರು
ಇದನ್ನೂ ಓದಿ : Anna Rajan : ಸಿಮ್ ಖರೀದಿಸಲು ಹೋದ ನಟಿಯನ್ನು ಶೋ ರೂಮ್ನಲ್ಲಿ ಕೂಡಿ ಹಾಕಿದ ಸಿಬ್ಬಂದಿ
Let the BJP keep faith by giving Horatti the post of sabhapathi and Eshwarappa as a minister: Yatnal Agraha