Moto E32 : ಎಂಟ್ರಿ–ಲೆವೆಲ್‌ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದ ಮೊಟೊರೊಲಾ; ಬೆಲೆ ಮತ್ತು ವಿಶೇಷತೆಗಳು ಹೀಗಿದೆ….

ಸ್ಮಾರ್ಟ್‌ಫೋನ್‌ (Smartphone) ತಯಾರಿಕಾ ಕಂಪನಿ ಮೊಟೊರೊಲಾ ಎಂಟ್ರಿ–ಲೆವಲ್‌ನ ಹೊಚ್ಚ ಹೊಸ ಸ್ಮಾರ್ಟ್‌ಫೋನ್‌ Moto E32 ಅನ್ನು ಭಾರತ (India) ದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಹೆಚ್ಚಿನ ಅಂದರೆ 90Hz ರಿಫ್ರೆಶ್‌ ದರ ಹೊಂದಿದೆ. ದೊಡ್ಡದಾದ ಬ್ಯಾಟರಿ, 50MP ಕ್ಯಾಮೆರಾ ಹೊಂದಿದ್ದು ನೋಡಲು ಆಕರ್ಷಕ ವಿನ್ಯಾಸ ಹೊಂದಿದೆ.

ಮೊಟೊರೊಲಾ ಮೊಟೊ E32 ನ ವಿಶೇಷತೆಗಳು :
ಎಂಟ್ರಿ–ಲೆವಲ್‌ ಸ್ಮಾರ್ಟ್‌ಫೋನ್‌ ಮೊಟೊ E32 6.5 ಇಂಚಿನ IPS LCD ಡಿಸ್ಪ್ಲೇ ಹೊಂದಿದ್ದು, ಪ್ಲಾಸಿಕ್‌ ಬಾಡಿಯಿಂದ ತಯಾರಿಸಲ್ಪಟ್ಟಿದೆ. ಇದು 1600X700 ಪಿಕ್ಸೆಲ್‌ಗಳ HD ಪ್ಲಸ್‌ ರೆಸಲ್ಯೂಷನ್‌ ಹೊಂದಿರುವ ಪಂಚ್‌ ಹೋಲ್‌ ಪ್ಯಾನೆಲ್‌ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಮಿಡಿಯಾ ಟೆಕ್‌ ಹೆಲಿಯೊ G37 SoC ಚಿಪ್‌ಸೆಟ್‌ನಿಂದ ಪವರ್‌ VR GE8320 GPU ನೊಂದಿಗೆ ಚಾಲಿಸುತ್ತದೆ. ಇದು 4GB RAM ಮತ್ತು 64GB ಇಂಟರ್ನಲ್‌ ಸ್ಟೋರೇಜ್‌ ಹೊಂದಿದೆ. ಮೈಕ್ರೋ SD ಕಾರ್ಡ್‌ ಬಳಸಿ 1TB ವರೆಗೆ ಫೋನ್‌ ಸಂಗ್ರಹಣೆಯನ್ನು ವಿಸ್ತರಿಸಬಹುದಾಗಿದೆ.

ಇನ್ನು ಇದರ ಚಾರ್ಜಿಂಗ್‌ ಕ್ಷಮತೆಯು 10W ಚಾರ್ಜಿಂಗ್‌ ವೇಗದೊಂದಿಗೆ 5,000mAh ಬ್ಯಾಟರಿಯನ್ನು ಪಡೆದುಕೊಂಡಿದೆ. ಸುರಕ್ಷತೆಗಾಗಿ ಸೈಡ್‌–ಫೇಸಿಂಗ್‌ ಫಿಂಗರ್‌ಪ್ರಿಂಟ್‌ ಸ್ಕ್ಯಾನರ್‌ ಮತ್ತು ಫೇಸ್‌ ಅನ್‌ಲಾಕ್‌ ಅನ್ನು ಸಹ ಬೆಂಬಲಿಸುತ್ತದೆ. ಇದು ಆಂಡ್ರಾಯ್ಡ್‌ 12 OSನಲ್ಲಿ ಬೂಟ್‌ ಆಗುವುದರಿಂದ ಕ್ಲೀನ್‌ ಸ್ಟಾಕ್‌–ಆಂಡ್ರಾಯ್ಡ್‌ ತರಹದ ಅನುಭವ ನೀಡುತ್ತದೆ.

ಇದನ್ನೂ ಓದಿ : FSSAI Recruitments : FSSAI ನಲ್ಲಿ ಉದ್ಯೋಗ ಅವಕಾಶ : ಪಿಯುಸಿ, ಪದವಿ, ಸ್ನಾತಕೋತ್ತರ ಪದವೀಧರರಿಗೆ ಅವಕಾಶ

ಮೊಟೊ E32 ಸ್ಮಾರ್ಟ್‌ಫೋನ್‌ IP52 ವಾಟರ್‌–ರಿಪೆಲೆಂಟ್‌ ವಿನ್ಯಾಸ ಹೊಂದಿದೆ. ಚಾರ್ಜಿಂಗ್‌ಗಾಗಿ ಕೆಳಭಾಗದಲ್ಲಿ USB Type-C ಪೋರ್ಟ್‌ ಮತ್ತು 3.5mm ಹೆಡ್‌ಫೋನ್‌ ಜ್ಯಾಕ್‌ ಅನ್ನು ಹೊಂದಿದೆ.

ಸೆಲ್ಫಿ ಮತ್ತು ವಿಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 8MP ಸಿಂಗಲ್ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ 30fps ನಲ್ಲಿ 1080p ವಿಡಿಯೊಗಳನ್ನು ಶೂಟ್ ಮಾಡಬಹುದಾಗಿದೆ. ಹಿಂಭಾಗದ ಮುಖ್ಯ ಕ್ಯಾಮೆರಾವು 50MP ಯದ್ದಾಗಿದ್ದು, ಡ್ಯುಯಲ್‌ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ನ ಕ್ಯಾಮೆರಾವು ಡ್ಯುಯಲ್ ಕ್ಯಾಪ್ಚರ್ ವೀಡಿಯೊ, ಟೈಮ್‌ಲ್ಯಾಪ್ಸ್, ನೈಟ್ ವಿಷನ್, ಪನೋರಮಾ, ಲೈವ್ ಫಿಲ್ಟರ್ ನಂತಹ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ.

ಇದನ್ನೂ ಓದಿ : Nokia G11 Plus : ಭಾರತದಲ್ಲಿ ಲಾಂಚ್‌ ಆದ ನೋಕಿಯಾ G11 ಪ್ಲಸ್‌ : 50 MP ಕ್ಯಾಮೆರಾ ಇದರ ವಿಶೇಷತೆ

(Moto E32 Motorola launched new entry-level smartphone in India)

Comments are closed.