ಭಾನುವಾರ, ಏಪ್ರಿಲ್ 27, 2025
HomeNationalHijab Dress Code Controversy : ಹಿಜಾಬ್ ವಿವಾದಕ್ಕೊಂದು ಅಂತ್ಯ: ತೀರ್ಪು ಪ್ರಕಟಿಸಲಿರುವ ಸುಪ್ರೀಂ

Hijab Dress Code Controversy : ಹಿಜಾಬ್ ವಿವಾದಕ್ಕೊಂದು ಅಂತ್ಯ: ತೀರ್ಪು ಪ್ರಕಟಿಸಲಿರುವ ಸುಪ್ರೀಂ

- Advertisement -

ನವದೆಹಲಿ : (Hijab Dress Code Controversy) ಕರ್ನಾಟಕದಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಹಿಜಾಬ್ ವಸ್ತ್ರಸಂಹಿತೆ ವಿವಾದ ಕೊನೆಗೊಳ್ಳುವ ಲಕ್ಷಣವಿದ್ದು, ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧದ ಆದೇಶವನ್ನು ಎತ್ತಿ ಹಿಡಿದಿದ್ದ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ತೀರ್ಪು ಗುರುವಾರ ಪ್ರಕಟಗೊಳ್ಳಲಿದೆ. ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠದಲ್ಲಿ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ನಡೆದಿತ್ತು. ಜಸ್ಟೀಸ್ ಹೇಮಂತ ಗುಪ್ತಾ ಹಾಗೂ ಜಸ್ಟೀಸ್ ಸುಧಾಂಶು ಧುಲಿಯಾ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಯ ವಿಸ್ತೃತ ವಿಚಾರಣೆ ನಡೆದಿತ್ತು.

(Hijab Dress Code Controversy)10 ದಿನಗಳ ಕಾಲ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ತೀರ್ಪನ್ನು ಕಾಯ್ದಿರಿಸಿತ್ತು.‌ಗುರುವಾರ 10.30 ರ ವೇಳೆಗೆ ತೀರ್ಪು ಪ್ರಕಟಗೊಳ್ಳುವ ಸಾಧ್ಯತೆ ಇದ್ದು ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಈ ತೀರ್ಪು ಕುತೂಹಲ ಮೂಡಿಸಿದೆ. ಉಡುಪಿಯ ಸರ್ಕಾರಿ ಕಾಲೇಜಿನಿಂದ ಆರಂಭವಾದ ಈ ಹಿಜಾಬ್ ವಸ್ತ್ರಸಂಹಿತೆ ಸಂಗತಿ ಇಡಿ ರಾಜ್ಯಕ್ಕೂ ವ್ಯಾಪಿಸಿದ್ದಲ್ಲದೇ ಬಳಿಕ ರಾಜಕೀಯ ಸ್ವರೂಪವನ್ನು ಪಡೆದುಕೊಂಡಿತ್ತು.

ಕಾಲೇಜಿನ ಒಳಭಾಗದಲ್ಲಿ ಹಿಜಾಬ್ ಧರಿಸುವುದನ್ನು ಪ್ರಶ್ನಿಸಿದ್ದನ್ನು ವಿರೋಧಿಸಿ ಆರು ಮುಸ್ಲಿಂ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಶಾಲಾ ಕಾಲೇಜುಗಳ ತರಗತಿಯ ಒಳಗೆ ಧಾರ್ಮಿಕತೆಯನ್ನು ಸೂಚಿಸುವ ವಸ್ತ್ರ ಬಳಸುವಂತಿಲ್ಲ ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿದ ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ವೇಳೆ ಸರ್ಕಾರದ ಪರ ವಾದ ಮಂಡಿಸಿದ್ದ ಕರ್ನಾಟಕದ ಎಡ್ವಕೇಟ್ ಜನರಲ್ ಪ್ರಭುಲಿಂಗ್ ನಾವದಗಿ, ಶಾಲಾ ಹೊರಗಡೆಯಾಗಲಿ, ಶಾಲಾ ವಾಹನದಲ್ಲಾಗಲೀ ಹಿಜಾಬ್ ನಿಷೇಧ ಮಾಡಲಾಗಿಲ್ಲ. ಕೇವಲ ತರಗತಿಯ ಒಳಗೆ ಮಾತ್ರ ಹಿಜಾಬ್ ನಿಷೇಧ ಮಾಡಲಾಗಿದೆ ಎಂದಿದ್ದರು.

ಇದನ್ನೂ ಓದಿ : Hijab Verdict Today: ಸುಪ್ರೀಂಕೋರ್ಟ್ ನಲ್ಲಿ ಇಂದು ಹಿಜಾಬ್ ಭವಿಷ ನಿರ್ಧಾರ ಸಾಧ್ಯತೆ..?

ಇದನ್ನೂ ಓದಿ : Mallikarjun Kharge : ಬಕ್ರೀದ್ ಮೇ ಬಚೇಂಗೆ ತೋ ಮೊಹರಂ ಮೇ ನಾಚೇಂಗೆ, ಹರಕೆಯ ಕುರಿಯಾದ್ರಾ ಮಲ್ಲಿಕಾರ್ಜುನ ಖರ್ಗೆ.?

ಇದನ್ನೂ ಓದಿ : Yashasvini Yojana : ಮತ್ತೆ ಆರಂಭವಾಯ್ತು ಯಶಸ್ವಿನಿ ಯೋಜನೆ: ನೋಂದಣಿ , ಅರ್ಹತೆ ಬಗ್ಗೆ ಇಲ್ಲಿದೆ ಮಾಹಿತಿ

ಅಲ್ಲದೇ ಈ ಹೋರಾಟದ ಹಿಂದೆ ಪಿಎಫ್ ಐ ಕೈವಾಡವಿದೆ ಎಂದು ಸರ್ಕಾರದ ಪರ ವಕೀಲರು ವಾದ ಮಂಡಿಸಿದ್ದರು. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್, ಭುಗಿಲೆದ್ದ ಹಿಜಾಬ್ ವಿವಾದದ ಹಿಂದೆ ಪಿಎಫ್ಐ ಕುಮ್ಮಕ್ಕು ಇದೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಎಂದು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ಕೂಡ ನೀಡಿತ್ತು. ಇದಾದ ಬಳಿಕ ಕರ್ನಾಟಕ ಸರ್ಕಾರದ ಪರ ಅಡ್ವಕೇಟ್ ಜನರಲ್ ನಾವದಗಿ ಪಿಎಫ್ ಐ ಕೈವಾಡದ ಕುರಿತು ಹಲವು ಸಾಕ್ಷಿ ಒದಗಿಸಿದ್ದರು. ಈಗ ಸಮಗ್ರ ವಿಚಾರಣೆ ಬಳಿಕ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಲಿದ್ದು, ಸರ್ವೋಚ್ಛ ನ್ಯಾಯಾಲಯದ ತೀರ್ಪು ವಿವಾದಕ್ಕೆ ಅಂತ್ಯ ಹಾಡುವ ನೀರಿಕ್ಷೆ ಮೂಡಿದೆ.

An end to the hijab controversy: The Supreme Court will announce the verdict

RELATED ARTICLES

Most Popular