Yashasvini Yojana : ಮತ್ತೆ ಆರಂಭವಾಯ್ತು ಯಶಸ್ವಿನಿ ಯೋಜನೆ: ನೋಂದಣಿ , ಅರ್ಹತೆ ಬಗ್ಗೆ ಇಲ್ಲಿದೆ ಮಾಹಿತಿ

ಗ್ರಾಮೀಣ ಪ್ರದೇಶದ ಅದರಲ್ಲೂ ರೈತನ ಪಾಲಿಗೆ ಸಂಜೀವಿನಿಯಾಗಿದ್ದ (Yashasvini Yojana)ಯಶಸ್ವಿನಿ ಯೋಜನೆಯನ್ನು ಪುನರಾರಂಭಗೊಳಿಸಿ ಸಿಎಂ ಬಸವರಾಜ್ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ. ಇದಕ್ಕಾಗಿ ಸರ್ಕಾರ 2022-23 ನೇ ಸಾಲಿನ ಬಜೆಟ್ ನಲ್ಲಿ 300 ಕೋಟಿ ಘೋಷಣೆ ಮಾಡಲಾಗಿದೆ. ರಾಜ್ಯ ಸರ್ಕಾರದ ಯಶಸ್ವಿನಿ ಯೋಜನೆಗಳಲ್ಲಿ ಒಂದಾಗಿದ್ದ ಯಶಸ್ವಿನಿ ಯೋಜನೆ ಗ್ರಾಮೀಣ ಭಾಗದ ರೈತರ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗೆ ನೆರವಾಗಿ ಸಂಜೀವಿನಿ ಎನ್ನಿಸಿತ್ತು. ಆದರೆ 2018 ರಲ್ಲಿ ಈ ಯೋಜನೆಯನ್ನು ರದ್ದುಗೊಳಿಸಿತ್ತು. ಈಗ ಮತ್ತೆ ಮರು ಜಾರಿಗೊಳಿಸಿ ಆದೇಶ ಹೊರಡಿಸಿದೆ.

ಪ್ರಸ್ತುತ ಸರ್ಕಾರ ಯೋಜನೆಯನ್ನು ಆರಂಭಿಸಿದ್ದು, ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸೆ ವೆಚ್ಚವನ್ನು 5 ಲಕ್ಷಕ್ಕೆ ನಿಗದಿ ಮಾಡಲಾಗಿದೆ. ಈ ಸೌಲಭ್ಯಕ್ಕಾಗಿ ನಾಲ್ಕು ಸದಸ್ಯರ ಕುಟುಂಬವೂ ಒಟ್ಟು 500 ರೂಪಾಯಿ ಪಾವತಿಸಬೇಕಿದ್ದು, ನವೆಂಬರ್ 1 ರಿಂದ (Yashasvini Yojana)ಯಶಸ್ವಿನಿ ಯೋಜನೆಯ ನೋಂದಣಿ ಆರಂಭವಾಗಲಿದೆ. ಇನ್ನು ಯಶಸ್ವಿನಿ ಯೋಜನೆಯ ಅವಧಿಯು 1-1-2023 ರಿಂದ 30-12-2023 ರವರೆಗೂ ಜಾರಿಯಲ್ಲಿರಲಿದೆ. ಅಲ್ಲದೇ ಈ ಯೋಜನೆ ಅನ್ವಯ 1650 ಕಾಯಿಲೆಗಳಿಗೆ ಚಿಕಿತ್ಸೆ ದೊರೆಯಲಿದೆ.

ಯಶಸ್ವಿನಿ ಗ್ರಾಮೀಣ ಸಹಕಾರಿ ಆರೋಗ್ಯ ರಕ್ಷಣಾ ಯೋಜನೆಯಾಗಿದ್ದು, ಇದು ಕರ್ನಾಟಕ ರಾಜ್ಯದ ಗ್ರಾಮೀಣ ಭಾಗದ ಸಹಕಾರಿ ಸಂಘಗಳ ಸದಸ್ಯರಿಗಾಗಿಯೇ ಸಿದ್ಧಗೊಂಡಿರುವ ಸ್ವಯಂ ನಿಧಿ ಶಸ್ತ್ರ ಚಿಕಿತ್ಸಾ ಯೋಜನೆಯಾಗಿದೆ. ಈ ಯೋಜನೆ ಅನ್ವಯ ಗ್ರಾಮೀಣ ಭಾಗದ ಸಹಕಾರ ಸಂಸ್ಥೆಗಳ ಸದಸ್ಯರು ನಿಗದಿತ ಪ್ರಮಾಣದಲ್ಲಿ ನಿಗದಿತ ಅವಧಿಯಲ್ಲಿ ಯಾವುದೇ ಶಸ್ತ್ರ ಚಿಕಿತ್ಸೆಯನ್ನು ನಿಗದಿತ ಆಸ್ಪತ್ರೆಯಲ್ಲಿ ನಗದು ರಹಿತವಾಗಿ ಪಡೆಯಲು ಅವಕಾಶವಿದೆ.

ಇದನ್ನೂ ಓದಿ : Hijab Verdict Today: ಸುಪ್ರೀಂಕೋರ್ಟ್ ನಲ್ಲಿ ಇಂದು ಹಿಜಾಬ್ ಭವಿಷ ನಿರ್ಧಾರ ಸಾಧ್ಯತೆ..?

ಇದನ್ನೂ ಓದಿ : Kerala Horror : ಕೇರಳದಲ್ಲಿ ನರಬಲಿ.. ಕೊಂದ್ರು ಬೇಯಿಸಿ ತಿಂದ್ರು

ಇದನ್ನೂ ಓದಿ : Mahakala Loka Ujjaini : ಉಜ್ಜಯಿನಿಯಲ್ಲಿ ʼಮಹಾಕಾಲ ಲೋಕʼ : ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ

ಇನ್ನು ಈ ಯೋಜನೆಯ ಫಲಾನುಭವಿಯಾಗಲು ಕನಿಷ್ಟ ಮೂರು ತಿಂಗಳ ಮೊದಲು ಅರ್ಹ ಗ್ರಾಮೀಣ ಸಹಕಾರ ಸಂಘವೊಂದರ ಸದಸ್ಯರಾಗಿರಬೇಕು. ಅಲ್ಲದೇ ಗ್ರಾಮೀಣ ಬ್ಯಾಂಕ್ ಜೊತೆ ವ್ಯವಹರಿಸುವ ಗ್ರಾಮೀಣ ಸ್ತ್ರೀ ಶಕ್ತಿ,ಸ್ವಸಹಾಯ ಗುಂಪಿನ ಸದಸ್ಯರು ಹಾಗೂ ಆ ಕುಟುಂಬದ ಸದಸ್ಯರು ಈ ಯೋಜನೆಯ ಲಾಭ ಪಡೆಯಬಹುದು. ಈ ಯೋಜನೆಯ ಸದಸ್ಯರಿಗೆ ಯುನಿಕ್ ನಂಬರ್ ಗಳಿರುವ ಬಾರ್ ಕೋಡ್ ರೀಡಿಂಗ್ ಹೊಂದಿರುವ ಕಾರ್ಡ್ ಗಳನ್ನು ನೀಡಲಾಗುತ್ತದೆ. ಇದನ್ನು ತೋರಿಸಿ ಸದಸ್ಯರು ತುರ್ತು ಪರಿಸ್ಥಿತಿ ಸೇರಿದಂತೆ ವಿವಿಧ ಅನಾರೋಗ್ಯದ ಸಂದರ್ಭದಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಆದರೆ ಈ ಯೋಜನೆಯಡಿಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ನೀಡುವ ಕಿಮೋಥೆರಪಿ ಚಿಕಿತ್ಸೆ ಸೇರಿದಂತೆ ಹಲವು ರೋಗಗಳಿಗೆ ಚಿಕಿತ್ಸೆ ನೀಡುವ ಅವಕಾಶವಿಲ್ಲ.

Yashasvini Yojana Relaunched: Registration, Eligibility Information Here

Comments are closed.