ಸಾಮಾನ್ಯವಾಗಿ ಒಂದು ವರ್ಷದಿಂದ ಎರಡು ವರ್ಷದೊಳಗಿನ ಮಕ್ಕಳಲ್ಲಿ ಹೊಟ್ಟೆ ಹಸಿವು(Kids Hungry Tips) ತುಂಬಾ ಕಡಿಮೆ ಆಗಿರುತ್ತದೆ. ಆ ವಯಸ್ಸಿನ ಮಕ್ಕಳಿಗೆ ಊಟ ತಿಂಡಿ ಹೆಚ್ಚಾಗಿ ಸೇರುವುದಿಲ್ಲ. ಆಗ ತಾಯಂದಿರಿಗೆ ಮಕ್ಕಳಿಗೆ ತಿಂಡಿ ಊಟವನ್ನು ಮಾಡಿಸುವುದು ತುಂಬಾ ಕಷ್ಟದ ಸಂಗತಿಯಾಗಿರುತ್ತದೆ. ಮಕ್ಕಳು ಈ ವಯಸ್ಸಿನಲ್ಲಿ ಸರಿಯಾಗಿ ಊಟ ತಿಂಡಿಯನ್ನು ಮಾಡದೇ ಇದ್ದಾಗ ಅಪೌಷ್ಟಿಕಾಂಶದಿಂದ ಅವರ ಬೆಳವಣಿಗೆಯಲ್ಲಿ ಕುಂಠಿತಗೊಳ್ಳುತ್ತಾರೆ. ಹಾಗಾಗಿ ಮಕ್ಕಳಲ್ಲಿ ಹೊಟ್ಟೆ ಹಸಿವನ್ನು ತರಿಸುವ ಸುಲಭ ಉಪಾಯವನ್ನು ತಿಳಿಯೋಣ.
ಓಮದ ಕಾಳು :
ಮಕ್ಕಳಿಗೆ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಓಮದ ಕಾಳಿನಿಂದ ಮಾಡಿದ ಕಷಾಯವನ್ನು ಕುಡಿಸುವುದರಿಂದ ಹೊಟ್ಟೆ ಹಸಿವನ್ನು ಉಂಟು ಮಾಡುತ್ತದೆ. ಅಷ್ಟೇ ಅಲ್ಲದೇ ಮಕ್ಕಳಲ್ಲಿ ಉಂಟಾಗುವ ಜಂತು ಹುಳು ಹಾಗೂ ಕ್ರಿಮಿಯನ್ನು ಕಡಿಮೆಗೊಳಿಸುತ್ತದೆ. ಹಾಗೆ ಈ ಕಷಾಯವನ್ನು ಕುಡಿಸುವುದರಿಂದ ಮಕ್ಕಳು ಆಗಾಗ ಶೀತ, ಜ್ವರದಂತಹ ಕಾಯಿಲೆಗೆ ಬೀಳುವುದನ್ನು ತಪ್ಪಿಸಬಹುದಾಗಿದೆ. ಇನ್ನೂ ಚಿಕ್ಕಮಕ್ಕಳನ್ನು ಗ್ಯಾಸ್ಟ್ರಿಕ್ ಮತ್ತು ಹೊಟ್ಟೆನೋವಿನಿಂದ ಕೂಡ ದೂರವಿಡಬಹುದಾಗಿದೆ.
ಬಿಸಿನೀರು :
ಚಿಕ್ಕಮಕ್ಕಳಿಗೆ ಆಗಾಗ ಬೆಚ್ಚಗಿನ ನೀರನ್ನು ಕುಡಿಸುವುದರಿಂದ ಹೊಟ್ಟೆಹಸಿವನ್ನು ಉಂಟು ಮಾಡುತ್ತದೆ. ಹಾಗೆ ಮಕ್ಕಳಲ್ಲಿ ಆಗುವ ನಿರ್ಜಲೀಕರಣವನ್ನು ತಪ್ಪಿಸಬಹುದಾಗಿದೆ. ಹಾಗೆ ಮಕ್ಕಳಲ್ಲಿ ಚಯಾಪಚಯ ಕ್ರಿಯೆ ಕೂಡ ಸುಲಭವಾಗಿ ನಡೆಯುತ್ತದೆ. ಮಗುವಿಗೆ ಹುಟ್ಟಿನಿಂದಲೂ ಎದೆಹಾಲು ಕುಡಿಸುವ ಮೊದಲು ಎರಡು ಸ್ಪೂನ್‌ನಷ್ಟು ಬಿಸಿನೀರನ್ನು ಕುಡಿಸುವ ರೂಢಿ ಮಾಡಿಕೊಂಡರೆ ಇನ್ನೂ ಉತ್ತಮವಾಗಿರುತ್ತದೆ.
ದಾಳಿಂಬೆ ಹಣ್ಣು :
ಚಿಕ್ಕಮಕ್ಕಳಿಗೆ ಬಾಯಿ ರುಚಿ ಇಲ್ಲದೆ ಇದ್ದಾಗ ದಾಳಿಂಬೆ ಹಣ್ಣಿನ ರಸವನ್ನು ಕುಡಿಸುವುದರಿಂದ ಹೊಟ್ಟೆ ಹಸಿವನ್ನು ಉಂಟುಮಾಡುತ್ತದೆ. ಅದು ಅಲ್ಲದೇ ಮಕ್ಕಳಿಗೆ ಜ್ವರ ಬಂದಾಗ ದಾಳಿಂಬೆ ಹಣ್ಣಿನ ರಸವನ್ನು ಕೊಟ್ಟರೆ ಬಾಯಿ ರುಚಿಯ ಜೊತೆಗೆ ಜ್ವರದಿಂದಲೂ ಅದಷ್ಟು ಬೇಗನೆ ಗುಣಮುಖರಾಗುತ್ತಾರೆ. ಯಾಕೆಂದರೆ ಇದರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಂಶ ಇರುವುದರಿಂದ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.
ಇದನ್ನೂ ಓದಿ : Thyroid : ಥೈರಾಯ್ಡ್ ಅಸಮತೋಲನವನ್ನು ಸರಿದೂಗಿಸಿಕೊಳ್ಳಲು 3 ಆಹಾರಗಳ ಸಲಹೆ ಕೊಟ್ಟ ಆಯುರ್ವೇದ ಡಾಕ್ಟರ್
ಇದನ್ನೂ ಓದಿ : Drinking water:ಬೆಳಗಿನ ಜಾವ ನೀರು ಕುಡಿಯುವಾಗ ಹೀಗೆ ಮಾಡಿದ್ರೆ ಅರಳುತ್ತೆ ನಿಮ್ಮ ಮುಖದ ಕಾಂತಿ
ಇದನ್ನೂ ಓದಿ : Good Mental Health : ನಿಮ್ಮ ಮಕ್ಕಳ ಮನಸ್ಸು ಅರಿತುಕೊಳ್ಳಿ; ಮಕ್ಕಳ ಮಾನಸಿಕ ವಿಕಸನದಲ್ಲಿ ಪೋಷಕರ ಪಾತ್ರ
ನಿಂಬೆಹಣ್ಣಿನ ರಸ:
ನಿಂಬೆಹಣ್ಣಿನ ಒಂದು ಹನಿರಸವನ್ನು ಮಕ್ಕಳ ನಾಲಿಗೆ ತಾಗಿಸುವುದರಿಂದ ನಾಲಿಗೆಯಲ್ಲಿರುವ ಬ್ಯಾಕ್ಟೀರಿಯವನ್ನು ತೆಗೆದು ಹಾಕುತ್ತದೆ. ಹಾಗಾಗಿ ಮಕ್ಕಳಲ್ಲಿ ಹೊಟ್ಟೆ ಹಸಿವನ್ನು ಉಂಟು ಮಾಡುತ್ತದೆ. ಇನ್ನೂ ಚಿಕ್ಕಮಕ್ಕಳಿಗೆ ನೀರು ಕುಡಿಸುವಾಗ ನೀರಿನಲ್ಲಿ ಲಿಂಬೆರಸವನ್ನು ಬೆರೆಸಿಕೊಂಡುವುದ್ದರಿಂದ ಕೂಡ ಹೊಟ್ಟೆ ಹಸಿವನ್ನು ಉಂಟು ಮಾಡುತ್ತದೆ. ನೀರಿಗೆ ನಿಂಬೆಹಣ್ಣಿನ ರಸವನ್ನು ಮಕ್ಕಳಿಗೆ ಕುಡಿಸುವುದರಿಂದ ಮಕ್ಕಳಲ್ಲಿ ಉಂಟಾಗುವ ನಿರ್ಜಲೀಕರಣವನ್ನು ಕಡಿಮೆ ಮಾಡುತ್ತದೆ.
Kids Hungry Tips If your kids are hungry then follow these tips