ಬುಧವಾರ, ಏಪ್ರಿಲ್ 30, 2025
HomekarnatakaNamma Metro 12 years : 5 ರಿಂದ 8 ಲಕ್ಷಕ್ಕೆ ಪ್ರಯಾಣಿಕರ ಸಂಖ್ಯೆ ಏರಿಕೆ:...

Namma Metro 12 years : 5 ರಿಂದ 8 ಲಕ್ಷಕ್ಕೆ ಪ್ರಯಾಣಿಕರ ಸಂಖ್ಯೆ ಏರಿಕೆ: 12 ವರ್ಷಕ್ಕೆ ನಮ್ಮ ಮೆಟ್ರೋ ಗುರಿ

- Advertisement -

ಬೆಂಗಳೂರು : Namma Metro 12 years: ನಮ್ಮ ಮೆಟ್ರೋಗೆ ಬೆಂಗಳೂರಿಗೆ ಕಾಲಿಟ್ಟು 11 ವರ್ಷಗಳಾಗಿದ್ದು 20 ಸಾವಿರ ಪ್ರಯಾಣಿಕರಿಂದ ಆರಂಭವಾದ ಮೆಟ್ರೋ ಪ್ರಯಾಣ ಈಗ ಸದ್ಯ 5 ಲಕ್ಷ ಪ್ರಯಾಣಿಕರ ಹಂತಕ್ಕೆ ಬಂದು ತಲುಪಿದೆ. ಸದ್ಯ ಲಾಭದ ಹಾದಿಯಲ್ಲಿರೋ ನಮ್ಮ ಮೆಟ್ರೋ ವೆಚ್ಚ ರಹಿತ ಆದಾಯದ ನೀರಿಕ್ಷೆಯಲ್ಲಿದೆ ಎಂದು ಹೇಳಿಕೊಂಡಿದೆ. ಎಂ.ಜಿ.ರಸ್ತೆಯಿಂದ ಬೈಯಪ್ಪನಹಳ್ಳಿಗೆ ಮೊದಲು ಸಂಚಾರ ಆರಂಭಿಸಿದ ನಮ್ಮ‌ಮೆಟ್ರೋ 11 ವರ್ಷಗಳನ್ನು ಪೊರೈಸಿ 12 ವರ್ಷಕ್ಕೆ ಕಾಲಿಟ್ಟಿದೆ. ಸದ್ಯ ನಮ್ಮ‌ಮೆಟ್ರೋ ದಲ್ಲಿ ದಿನವೊಂದಕ್ಕೆ 5 ಲಕ್ಷ ಜನರು ಸಂಚರಿಸುತ್ತಿದ್ದು, ತಿಂಗಳಿಗೆ ಮೆಟ್ರೋ ಆದಾಯ 36 ಕೋಟಿ ಗಡಿ ದಾಟಿದೆ.

ಕೊರೋನಾ ಕಾಲದಲ್ಲಿ ಮೆಟ್ರೋ ನಷ್ಟದತ್ತ ಮುಖಮಾಡಿತ್ತು. ಆದರೆ ಈಗ ಮತ್ತೆ ಜನಜೀವನ ಸಹಜ ಸ್ಥಿತಿಗೆ ಮರಳಿದ್ದು, ಜನರು ಮತ್ತೆ ಟ್ರಾಫಿಕ್ ಕಿರಿ ಕಿರಿ ತಪ್ಪಿಸಿಕೊಳ್ಳಲು ಮೆಟ್ರೋ ಮೊರೆ ಹೋಗ್ತಿದ್ದಾರೆ. ಮೆಟ್ರೋ ಸ್ಟೇಶನ್ ಗಳಲ್ಲಿರೋ ಶಾಪಿಂಗ್ ಕಾಂಪ್ಲೆಕ್ಸ್, ಅಂಗಡಿ ಮಳಿಗೆಗಳು, ಟೆಲಿಕಾಂ‌ ಟವರ್ ಗಳು ಆದಾಯವನ್ನು ತರುತ್ತಿದೆ. ಸದ್ಯ ಹಲವು ಯೋಜನೆಗಳಿಗಾಗಿ ನಮ್ಮ ಮೆಟ್ರೋ ಧನವ್ಯಯಮಾಡುತ್ತಿದೆ. ಸದ್ಯದಲ್ಲೇ ವೆಚ್ಚ ರಹಿತ ಆದಾಯ ಗಳಿಕೆಗೆ ಪ್ಲ್ಯಾನ್ ಮಾಡಿದ್ದೇವೆ ಎಂದು ಮೆಟ್ರೋ ಗೆ 11 ವರ್ಷ ತುಂಬಿದ ಹೊತ್ತಿನಲ್ಲಿ ಮೆಟ್ರೋ ಎಂಡಿ ಅಂಜುಮ್ ಪರ್ವೇಜ್ ಹೇಳಿದ್ದಾರೆ.

ಅಲ್ಲದೇ ನಮ್ಮ ಮೆಟ್ರೋ ಮಾಲಿನ್ಯ ರಹಿತವಾಗಿದ್ದು, ಪರಿಸರ ಸ್ನೇಹಿಯಾಗಿದೆ. ಅಲ್ಲದೇ ಸ್ವಚ್ಛವಾಗಿರುವ ನಮ್ಮ‌ಮೆಟ್ರೋ ವನ್ನು ಓಡಾಟಕ್ಕೆ ಬಳಸಿ ಎಂದು ಅಂಜುಂ ಪರ್ವೇಜ್ ಮನವಿ ಮಾಡಿದ್ದಾರೆ. ಸದ್ಯ ನಗರದಲ್ಲಿ ಸುರಿಯುತ್ತಿರೋ ಭಾರಿ‌ಮಳೆಯಿಂದ ಮೆಟ್ರೋ ಹೊಸ ಕಾಮಗಾರಿಗಳಲ್ಲಿ ವಿಳಂಬವಾಗ್ತಿದ್ದು, ಡ್ರಿಲ್ಲಿಂಗ್ ಸೇರಿದಂತೆ ಹಲವು ಕಾರ್ಯಗಳಿಗೆ ಮಳೆ ಅಡ್ಡಿ ಉಂಟುಮಾಡಿದೆ.ಇನ್ನು ಹಲವು ಹೊಸ ಯೋಜನೆಗಳ ಮೂಲಕವೂ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಆಪ್ತವಾಗಲಿದ್ದು, ಡಿಸೆಂಬರ್ 1 ರಿಂದ ಬೈಯಪ್ಪನಹಳ್ಳಿ, ಬನಶಂಕರಿ,ನಾಗಸಂದ್ರ ಮತ್ತು ನಾಡಪ್ರಭು ಕೆಂಪೇಗೌಡ ಮೇಟ್ರೋ ನಿಲ್ದಾಣಗಳ ಪ್ರೀ ಪೇಯ್ಡ್ ಅಟೋ ವ್ಯವಸ್ಥೆ ಆರಂಭವಾಗಲಿದೆ.

ಅಲ್ಲದೇ ಪ್ರಯಾಣಿಕರ ಸಮಯವನ್ನು ಉಳಿಸುವ ನಿಟ್ಟಿನಲ್ಲಿ ಕ್ಯೂ ಅರ್ ಆಧಾರಿತ ಟಿಕೇಟ್ ವ್ಯವಸ್ಥೆಯನ್ನು ಸದ್ಯದಲ್ಲೇ ಆರಂಭಿಸಲಿದ್ದು, ಇದರಿಂದ ಈ ಟಿಕೇಟ್ ಗಳನ್ನು ಮೆಟ್ರೋ ದ ಮೊಬೈಲ್ ಅಪ್ಲಿಕೇಶನ್ ನಲ್ಲಿ ಪಡೆಯಬಹುದಾಗಿದೆ. ಅಲ್ಲದೇ ಈ ವರ್ಷಾಂತ್ಯಕ್ಕೆ ಹಾಗೂ ಹೊಸ ವರ್ಷಕ್ಕೆ ಹಲವು ನೂತನ ಮಾರ್ಗ ಆರಂಭಿಸುತ್ತಿರುವ ನಮ್ಮ ಮೆಟ್ರೋ ಅಂದಾಜು 8 ಲಕ್ಷ ಪ್ರಯಾಣಿಕರನ್ನು ತಲುಪುವ ಗುರಿ ಹೊಂದಿದೆ. ಒಟ್ಟಿನಲ್ಲಿ ನಮ್ಮ ಮೆಟ್ರೋ 11 ವರ್ಷದಲ್ಲಿ ಹಲವು ಸಾಧನೆಯೊಂದಿಗೆ 12 ವರ್ಷಕ್ಕೆ ಪಾದಾರ್ಪಣೆ ಮಾಡಿದೆ.

ಇದನ್ನೂ ಓದಿ : Bangalore Heavy Rain: ರಾತ್ರಿಯಿಡಿ ರಣಭೀಕರ ಮಳೆ.. ಮುಳುಗಿದ ಬೆಂಗಳೂರು.. ಇನ್ನೂ ಇದೇ ಮಳೆ ಅನಾಹುತ

ಇದನ್ನೂ ಓದಿ : Idli ATM : ಎಟಿಎಂ ನಲ್ಲಿ ದುಡ್ಡಿನ ಬದಲು ಇಡ್ಲಿ, ವಡೆ : ಬೆಂಗಳೂರಲ್ಲಿ ಹೊಸ ತಂತ್ರಜ್ಞಾನ

Increase in Passengers from 5 to 8 lakh Namma Metro target for 12 years

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular