ಬುಧವಾರ, ಏಪ್ರಿಲ್ 30, 2025
HomeSportsCricketBCCI ಮುಂದೆ PCB ಜುಜುಬಿ, ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯ ಒಟ್ಟು ಮೌಲ್ಯ ಎಷ್ಟು...

BCCI ಮುಂದೆ PCB ಜುಜುಬಿ, ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯ ಒಟ್ಟು ಮೌಲ್ಯ ಎಷ್ಟು ಗೊತ್ತಾ?

- Advertisement -

ಬೆಂಗಳೂರು: (BCCI worlds richest cricket board) ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಗಳ ಜೊತೆ ಹೊಸ ಜಟಾಪಟಿ ಶುರುವಾಗಿರುವ ವಿಚಾರ ನಿಮಗೆ ಗೊತ್ತೇ ಇದೆ (BCCI Vs PCB). ಮುಂದಿನ ವರ್ಷದ ಏಷ್ಯಾ ಕಪ್ ಟೂರ್ನಿಯ ವಿಚಾರದಲ್ಲಿ ಶುರುವಾದ ಜಟಾಪಟಿ ಇದೀಗ ವಿಶ್ವಕಪ್ ಬಾಯ್ಕಾಟ್’ವರೆಗೆ ಬಂದು ನಿಂತಿದೆ. ಮುಂದಿನ ವರ್ಷದ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಆಡಬೇಕಾದರೆ ಟೂರ್ನಿ ಪಾಕಿಸ್ತಾನದಲ್ಲಿ ನಡೆಯಬಾರದು, ತಟಸ್ಥ ತಾಣದಲ್ಲಿ ನಡೆದರೆ ಮಾತ್ರ ಭಾರತ ಆಡಲಿದೆ ಎಂದು ಇತ್ತೀಚೆಗಷ್ಟೇ ಬಿಸಿಸಿಐ (BCCI) ಕಾರ್ಯದರ್ಶಿ ಜಯ್ ಶಾ ಹೇಳಿಕೆ ನೀಡಿದ್ದರು. ಭಾರತ ತಂಡ ರಾಜಕೀಯ ಕಾರಣಗಳಿಗಾಗಿ ಪಾಕಿಸ್ತಾನಕ್ಕೆ ಹೋಗುವಂತಿಲ್ಲ. ಹೀಗಾಗಿ ಏಷ್ಯಾ ಕಪ್ ಟೂರ್ನಿ ತಟಸ್ಥ ತಾಣದಲ್ಲಿ ನಡೆಯಲಿದೆ ಎಂದು ಜಯ್ ಶಾ ಹೇಳಿದ್ದರು.

ಇದಕ್ಕೆ ತಿರುಗೇಟು ನೀಡಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಭಾರತ ಮುಂದಿನ ವರ್ಷ ಪಾಕಿಸ್ತಾನದಲ್ಲಿ ಏಷ್ಯಾ ಕಪ್ ಆಡದಿದ್ದರೆ, ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನಾವು ಆಡುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ರಮೀಜ್ ರಾಜಾ ಹೇಳಿದ್ದರು. ಪಾಕಿಸ್ತಾನ ತಂಡ ವಿಶ್ವಕಪ್’ನಲ್ಲಿ ಆಡದಿದ್ದರೆ ನಷ್ಟ ಅವರಿಗೇ ಹೊರತು ಬಿಸಿಸಿಐಗಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಇದಕ್ಕೆ ಬಿಸಿಸಿಐನ ಆಸ್ತಿ ಮೌಲ್ಯವನ್ನು ಉದಾಹರಣೆಯಾಗಿ ನೀಡಲಾಗುತ್ತಿದೆ. ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ, ಪಾಕಿಸ್ತಾನದ ಈ ಗೊಡ್ಡು ಬೆದರಿಕೆಗಳಿಗೆಲ್ಲಾ ಮಣಿಯುತ್ತಾ ಎಂದು ಕ್ರಿಕೆಟ್ ಪ್ರಿಯರು ಪ್ರಶ್ನಿಸುತ್ತಿದ್ದಾರೆ. ಅಷ್ಟಕ್ಕೂ ಬಿಸಿಸಿಐನ ಒಟ್ಟು ಮೌಲ್ಯ ಎಷ್ಟು ಗೊತ್ತಾ..? ಶ್ರೀಮಂತಿಕೆಯಲ್ಲಿ ಬಿಸಿಸಿಐ ಜೊತೆ ಸಮೀಪದ ಸ್ಪರ್ಧಿ ಯಾರು ಗೊತ್ತಾ..? ಪಾಕಿಸ್ತಾನ ಕ್ರಿಕೆಟ್ ಮಂಡಳಿ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ..? ಇಲ್ಲಿದೆ ಉತ್ತರ.

BCCI worlds richest cricket board : ಕ್ರಿಕೆಟ್ ಮಂಡಳಿಗಳ ಮೌಲ್ಯ (ಟಾಪ್-5)

  1. ಬಿಸಿಸಿಐ (BCCI): 33,730 ಕೋಟಿ
  2. ಕ್ರಿಕೆಟ್ ಆಸ್ಟ್ರೇಲಿಯಾ (Cricket Australia): 2,843 ಕೋಟಿ
  3. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ (ECB): 2,135 ಕೋಟಿ
  4. ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB): 811 ಕೋಟಿ
  5. ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (BCB): 802 ಕೋಟಿ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಒಟ್ಟು ಮೌಲ್ಯ ಬರೋಬ್ಬರಿ 33,730 ಕೋಟಿ ರೂಪಾಯಿ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮೌಲ್ಯ 811 ಕೋಟಿ. ಅಂದ್ರೆ ಬಿಸಿಸಿಐನ ಮೌಲ್ಯ ಪಾಕಿಸ್ತಾನ ಕ್ರಿಕೆಟ್ ಮಂಡಳಿಗಿಂತ 400 ಪಟ್ಟು ಹೆಚ್ಚು. ಹೀಗಿರುವಾಗ ಪಿಸಿಬಿಯ ಗೊಡ್ಡು ಬೆದರಿಕೆಗೆ ಬಿಸಿಸಿಐ ಮಣಿಯುತ್ತಾ..? ನೋ ವೇ, ಚಾನ್ಸೇ ಇಲ್ಲ.

ಇದನ್ನೂ ಓದಿ : West Indies out of T20 World Cup 2022: ಎರಡು ಬಾರಿಯ ಚಾಂಪಿಯನ್ಸ್ ವೆಸ್ಟ್ ಇಂಡೀಸ್ ಅರ್ಹತಾ ಸುತ್ತಿನಲ್ಲೇ ಔಟ್

ಇದನ್ನೂ ಓದಿ : Rohit Sharma: ಲೆಫ್ಟ್-ರೈಟ್ ಥ್ರೋಡೌನ್, ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಹಿಟ್ ಮ್ಯಾನ್ ಸ್ಪೆಷಲ್ ಪ್ರಾಕ್ಟೀಸ್

BCCI worlds richest cricket board Do you know the net worth of BCCI and PCB

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular