Bestselling Hatchback Cars : ಸೆಪ್ಟೆಂಬರ್‌ 2022 ನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್‌ 3 ಹ್ಯಾಚ್‌ಬ್ಯಾಕ್‌ ಕಾರುಗಳು

ಮನೆಗೊಂದು ಕಾರು (Car) ಈಗ ಸಾಮಾನ್ಯ. ಕಾರು ಖರೀದಿಸುವವರ ಸಂಖ್ಯೆಯು ಏರಿದೆ. ಹಾಗೆ ಕಾರುಗಳಲ್ಲಿಯೂ ಹ್ಯಾಚ್‌ಬ್ಯಾಕ್‌, ಎಸ್‌ಯುವಿ, ಸೆಡಾನ್‌ ಎಂಬ ವಿಭಾಗಳಿವೆ. ಭಾರತದಲ್ಲಿನ ಒಟ್ಟಾರೆ ಕಾರು ಮಾರಾಟಕ್ಕೆ ಹ್ಯಾಚ್‌ಬ್ಯಾಕ್‌ ವಿಭಾಗವು ಗಮನಾರ್ಹ ಕೊಡುಗೆಯನ್ನು ನೀಡಿದೆ. ಹ್ಯಾಚ್‌ಬ್ಯಾಕ್‌ ವಿಭಾದಲ್ಲಿ (Bestselling Hatchback Cars) ಮಾರುತಿ ಸುಜುಕಿ ಪ್ರಾಬಲ್ಯವನ್ನು ಹೊಂದಿದೆ. ಸೆಪ್ಟೆಂಬರ್‌ 2022 ನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್‌ 3 ಹ್ಯಾಚ್‌ಬ್ಯಾಕ್‌ ಕಾರುಗಳು ಮಾರುತಿ ಸುಜುಕಿಯದೇ ಆಗಿದೆ.

ಸೆಪ್ಟೆಂಬರ್‌ 2022 ನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್‌ 3 ಹ್ಯಾಚ್‌ಬ್ಯಾಕ್‌ ಕಾರುಗಳು :

ಮಾರುತಿ ಸುಜುಕಿ ಆಲ್ಟೊ :
ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎಂದರೆ ಮಾರುತಿ ಸುಜುಕಿ ಆಲ್ಟೊ ಕೆ10. ಹೊಸ ಆಧುನಿಕ ವೈಶಿಷ್ಟ್ಯಗಳನ್ನು ಪಡೆದುಕೊಂಡು ಈ ಬಾರಿ ಹೊಸದಾಗಿ ಬಿಡುಗಡೆಯಾದ ಆಲ್ಟೊ ಕೆ10 ಕಳೆದುಕೊಂಡಿದ್ದ ಸ್ಥಾನವನ್ನು ಮರಳಿ ಪಡೆದುಕೊಂಡಿದೆ. ಮಾರುತಿ ಸುಜುಕಿ ಆಲ್ಟೊ ಕೆ10 ಸೆಪ್ಟೆಂಬರ್ 2022 ರಲ್ಲಿ 24,844 ಯುನಿಟ್‌ ಮಾರಾಟದೊಂದಿಗೆ ಶೇಕಡಾ 105 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಿನ ಬೆಳವಣಿಗೆಯಾಗಿದೆ. ಕಂಪನಿಯು ಕಳೆದ ವರ್ಷದ ಇದೇ ಅವಧಿಯಲ್ಲಿ 12,143 ಯುನಿಟ್‌ ಮಾರಾಟ ಮಾಡಿತ್ತು.

ಇದನ್ನೂ ಓದಿ : Diwali Bank Holidays : ದೀಪಾವಳಿ, ನಾಳೆಯಿಂದ ಸತತ 6 ದಿನ ಬ್ಯಾಂಕ್‌ ರಜೆ

ಮಾರುತಿ ಸುಜುಕಿ ವ್ಯಾಗನ್ ಆರ್:
ಕಳೆದ ವರ್ಷ ಸೆಪ್ಟೆಂಬರ್‌ 2021 ರಲ್ಲಿ ಮಾರಾಟವಾದ 7,632 ಯುನಿಟ್‌ಗಳಿಗೆ ಹೋಲಿಸಿದರೆ ಈ ವರ್ಷ ಸೆಪ್ಟೆಂಬರ್‌ 2022ನಲ್ಲಿ 20,078 ಯುನಿಟ್ ಮಾರಾಟದೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಇದು ಶೇಕಡಾ 163 ರಷ್ಟು ಬೆಳಣಿಗೆಯಾಗಿದೆ. ಈ ಮಾರಾಟದಲ್ಲಿ CNG ರೂಪಾಂತರವು ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. ಈ ವರ್ಷದ ಆರಂಭದಲ್ಲಿ ನವೀಕರಣಗೊಂಡು ಬಿಡುಗಡೆಯಾದ ಹೊಸ ಆವೃತ್ತಿಯೇ ಇದಕ್ಕೆ ಕಾರಣವಾಗಿದೆ.

ಮಾರುತಿ ಸುಜುಕಿ ಬೆಲೆನೋ :
ಮಾರುತಿ ಸುಜುಕಿ ಬೆಲೆನೋ, ಇದು ಹ್ಯಾಚ್‌ಬ್ಯಾಕ್‌ ಕಾರುಗಳ ವಿಭಾಗದಲ್ಲಿ ಮೂರನೇ ಬೆಸ್ಟ್‌ ಸೆಲ್ಲರ್‌ ಸ್ಥಾನ ಪಡೆದುಕೊಂಡಿದೆ. ಇದು ಮಾರುತಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಕಾರಾಗಿದೆ. ಕಂಪನಿಯು ಸೆಪ್ಟೆಂಬರ್ 2022 ರಲ್ಲಿ 19,369 ಯುನಿಟ್‌ಗಳನ್ನು ಮಾರಾಟಮಾಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 8,077 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಇದು 140 ಪ್ರತಿಶತದಷ್ಟು ದಾಖಲೆಯ ಬೆಳವಣಿಗಯನ್ನು ಗಳಿಸಿದೆ. ಮಾರುತಿ ಸುಜುಕಿ ಬೆಲೆನೋ ಕೇಲವ 709 ಯುನಿಟ್‌ಗಳಿಂದ ಎರಡನೇ ಸ್ಥಾನವನ್ನು ಕಳೆದುಕೊಂಡಿದೆ.

ಇದನ್ನೂ ಓದಿ : Pradhan Mantri Vaya Vandana Yojana : ಒಮ್ಮೆ ಹಣ ಹೂಡಿಕೆ ಮಾಡಿ, ಪ್ರತಿ ತಿಂಗಳು 10,000 ರೂ. ಪಡೆಯಿರಿ

(Bestselling Hatchback Cars top 3 cars in India in September 2022)

Comments are closed.