ಮಂಗಳವಾರ, ಜೂನ್ 17, 2025
HomeSportsCricketRohit Sharma gets emotional: 90 ಸಾವಿರ ಪ್ರೇಕ್ಷಕರ ಮುಂದೆ ರಾಷ್ಟ್ರಗೀತೆ ಹಾಡುವಾಗ ಕಣ್ಣೀರಿಟ್ಟ ರೋಹಿತ್...

Rohit Sharma gets emotional: 90 ಸಾವಿರ ಪ್ರೇಕ್ಷಕರ ಮುಂದೆ ರಾಷ್ಟ್ರಗೀತೆ ಹಾಡುವಾಗ ಕಣ್ಣೀರಿಟ್ಟ ರೋಹಿತ್ ಶರ್ಮಾ

- Advertisement -

ಮೆಲ್ಬೋರ್ನ್: ( Rohit Sharma emotional) ದೇಶವನ್ನು ಪ್ರತಿನಿಧಿಸುವುದು ಕ್ರೀಡಾಪಟುಗಳ ಪಾಲಿಗೆ ದೊಡ್ಡ ಗೌರವ. ಅದರಲ್ಲೂ ರಾಷ್ಟ್ರಗೀತೆಯನ್ನು ಹಾಡುವುದು ವಿಶೇಷ ಅನುಭವ ನೀಡುತ್ತದೆ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ (T20 World Cup 2022 India Vs Pakistan match) ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಭಾವುಕರಾಗಿದ್ದಾರೆ (Rohit Sharma gets emotional while singing national anthem). ಆ ಭಾವುಕ ಕ್ಷಣಗಳು ಕ್ಯಾಮರಾ ಕಣ್ಮಿನಲ್ಲಿ ಸೆರೆಯಾಗಿದ್ದು, ರೋಹಿತ್ ಭಾವುಕ ಕ್ಷಣಗಳ ವಿಡಿಯೊವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪ್ರಕಟಿಸಲಾಗಿದೆ.

ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ2 ವಿಶ್ವಕಪ್ ಪಂದ್ಯಕ್ಕೆ 93,000 ಮಂದಿ ಪ್ರೇಕ್ಷಕರು ಸಾಕ್ಷಿಯಾಗಿದ್ದರು. ಪಂದ್ಯಕ್ಕೂ ಮುನ್ನ ಭಾರತದ ರಾಷ್ಟ್ರಗೀತೆ ಆರಂಭವಾಗುತ್ತಿದ್ದಂತೆ, ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ 65 ಸಾವಿರಕ್ಕೂ ಹೆಚ್ಚು ಭಾರತೀಯರು ಏಕಕಾಲದಲ್ಲಿ ರಾಷ್ಟ್ರಗೀತೆ ಹಾಡಲು ಆರಂಭಿಸಿದರು. ಇದು ಸಹಜವಾಗಿಯೇ ಭಾರತ ತಂಡದ ಆಟಗಾರರು ಭಾವುಕರಾಗುವಂತೆ ಮಾಡಿತು. ಅದರಲ್ಲೂ ರಾಷ್ಟ್ರಗೀತೆ ಹಾಡುತ್ತಾ ಹಾಡುತ್ತಾ ನಾಯಕ ರೋಹಿತ್ ಶರ್ಮಾ ಅವರ ಕಣ್ಣುಗಳಲ್ಲಿ ಕಣ್ಣೀರು ಜಿನುಗಿತು.

ಪಾಕಿಸ್ತಾನ ವಿರುದ್ಧದ ರೋಚಕ ಪಂದ್ಯವನ್ನು 4 ವಿಕೆಟ್’ಗಳಿಂದ ಗೆದ್ದುಕೊಂಡ ಭಾರತ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನೊಂದಿಗೆ ತನ್ನ ಅಭಿಯಾನ ಆರಂಭಿಸಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 20 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್’ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ನಂತರ ಗುರಿ ಬೆನ್ನಟ್ಟಿಗ ಭಾರತ ಒಂದು ಹಂತದಲ್ಲಿ ಮೊದಲ 10 ಓವರ್’ಗಳಲ್ಲಿ ಕೇವಲ 45 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ನಂತರದ 10 ಓವರ್’ಗಳಲ್ಲಿ 115 ರನ್ ಕಲೆ ಹಾಕಿದ ಭಾರತದ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿತ್ತು.

ಕೊನೆಯ 2 ಓವರ್’ನಲ್ಲಿ ಗೆಲ್ಲಲು 31 ರನ್’ಗಳ ಅವಶ್ಯಕತೆಯಿದ್ದಾಗ ಹ್ಯಾರಿಸ್ ರೌಫ್ ಎಸೆದ 19ನೇ ಓವರ್’ನ ಕೊನೆಯ ಎರಡೂ ಎಸೆತಗಳನ್ನು ಸಿಕ್ಸರ್’ಗಟ್ಟಿದ ವಿರಾಟ್ ಕೊಹ್ಲಿ (Virat Kohli), ಮೊಹಮ್ಮದ್ ನವಾಜ್ ಎಸೆದ ಅಂತಿಮ ಓವರ್’ನಲ್ಲಿ ಮತ್ತೊಂದು ಸಿಕ್ಸರ್ ಸಿಡಿಸಿದ್ದರು. ಅಂತಿಮವಾಗಿ 53 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್’ಗಳೊಂದಿಗೆ ಅಬ್ಬರಿಸಿದ್ದ ಕಿಂಗ್ ಕೊಹ್ಲಿ, ಅಜೇಯ 82 ರನ್ ಬಾರಿಸಿ ಭಾರತದ ವಿಜಯಶಿಲ್ಪಿಯಾಗಿ ಮೂಡಿ ಬಂದಿದ್ದರು.

ಇದನ್ನೂ ಓದಿ : Virat Kohli Vs Pakistan : ರಣಬೇಟೆಗಾರನ ಮತ್ತೊಂದು ಮಹಾಬೇಟೆ, ಪಾಕಿಸ್ತಾನ ವಿರುದ್ಧ ವಿಶ್ವಕಪ್’ನಲ್ಲಿ ವಿರಾಟ್ ದಾಖಲೆ ನೋಡಿದ್ರೆ ದಂಗಾಗಿ ಹೋಗ್ತೀರಿ

ಇದನ್ನೂ ಓದಿ : Anushka Sharma Virat Kohli : ಪಾಕ್ ವಿರುದ್ದ ಗೆಲುವು ತಂದುಕೊಟ್ಟ ವಿರಾಟ್ ಕೊಹ್ಲಿಗೆ ಪತ್ನಿ ಅನುಷ್ಕಾ ಶರ್ಮಾ ಭಾವುಕ ಮೆಸೇಜ್

T20 World Cup 2022 India Vs Pakistan match Rohit Sharma gets emotional while singing national anthem

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular