WhatsApp Outage: ಮೆಟಾ ಒಡೆತನದ ಅತ್ಯಂತ ಜನಪ್ರಿಯ ತ್ವರಿತ ಸಂವಹನ ಅಪ್ಲಿಕೇಶನ್ ಆಗಿರುವ ವಾಟ್ಸಾಪ್ನ್ನು ಬಳಕೆ ಮಾಡದಿರುವವರ ಸಂಖ್ಯೆ ಅತ್ಯಂತ ವಿರಳವಾಗಿದೆ. ವಾಟ್ಸಾಪ್ ಮಾದರಿಯಲ್ಲಿಯೇ ಸಾಕಷ್ಟು ಅಪ್ಲಿಕೇಶನ್ಗಳು ಬಂದಿದ್ದರೂ ಸಹ ಈ ಅಪ್ಲಿಕೇಶನ್ಗೆ ಇರುವ ಬಳಕೆದಾರರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಆದರೆ ಪ್ರಸ್ತುತ ವಾಟ್ಸಾಪ್ ಬಳಕೆದಾರರಿಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸಲು ಹಾಗೂ ಸ್ವೀಕರಿಸಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ವಾಟ್ಸಾಪ್ನ ವೈಯಕ್ತಿಕ ಚಾಟ್ಗಳು ಹಾಗೂ ಗ್ರೂಪ್ ಮೆಸೇಜ್ಗಳನ್ನು ಕಳುಹಿಸಲು ಹಾಗೂ ಸ್ವೀಕರಿಸಲು ತೊಡಕು ಉಂಟಾಗಿದೆ ಎಂಬ ಧೃಡ ಮಾಹಿತಿ ಲಭ್ಯವಾಗಿದೆ. ಭಾರತದಲ್ಲಿ ವಾಟ್ಸಾಪ್ ಬಳಕೆ ಮಾಡುತ್ತಿರುವ ಪ್ರತಿಯೊಬ್ಬರೂ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಡೌನ್ಡಿಟೆಕ್ಟರ್ ವೆಬ್ಸೈಟ್ ನೀಡಿರುವ ಮಾಹಿತಿಯ ಪ್ರಕಾರ ಸಾವಿರಾರು ವಾಟ್ಸಾಪ್ ಬಳಕೆದಾರರು ತಮಗೆ ವಾಟ್ಸಾಪ್ ಸೇವೆಯನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ ಎಂಬ ಮಾಹಿತಿಯನ್ನು ಖಚಿತಪಡಿಸಿದೆ. ವೆಬ್ಸೈಟ್ನ ಹೀಟ್ ಮ್ಯಾಪ್ ಆಧರಿಸಿ ಮುಂಬೈ, ದೆಹಲಿ, ಕೋಲ್ಕತ್ತಾ, ಲಕ್ನೋ ಹಾಗೂ ಬೆಂಗಳೂರಿನಂತಹ ಪ್ರಮುಖ ನಗರಗಳಲ್ಲಿಯೇ ಈ ಸಮಸ್ಯೆ ಎದುರಾಗಿದೆ. ವಾಟ್ಸಾಪ್ ಡೌನ್ ಸಮಸ್ಯೆಯು ಎಲ್ಲೆಡೆ ವಾಟ್ಸಾಪ್ ಬಳಕೆದಾರರ ಮೇಲೆ ಪರಿಣಾಮ ಬೀರಿದೆ.
ವಾಟ್ಸಾಪ್ ವೆಬ್ ಬಳೆಕದಾರರೂ ಕೂಡ ಈ ಸಮಸ್ಯೆಯನ್ನು ಎದುರಿಸಿದ್ದಾರೆ. ವಾಟ್ಸಾಪ್ ಮೊಬೈಲ್ಗಳಲ್ಲಿ ಬಳಕೆಯಾಗದ ಹಿನ್ನೆಲೆಯಲ್ಲಿ ಅನೇಕರು ವಾಟ್ಸಾಪ್ ವೆಬ್ ಬಳಕೆ ಮಾಡಲು ಮುಂದಾಗಿದ್ದಾರೆ. ಆದರೆ ಇಲ್ಲಿ ಕೂಡ ವಾಟ್ಸಾಪ್ ಡೌನ್ ಸಮಸ್ಯೆ ಬಳಕೆದಾರರನ್ನು ಕಾಡುತ್ತಿದೆ.
ಪ್ರತಿಷ್ಠಿತ ಸುದ್ದಿ ಸಂಸ್ಥೆ ನೀಡಿರುವ ಮಾಹಿತಿಯ ಪ್ರಕಾರ ವಾಟ್ಸಾಪ್ ಮಾಲೀಕ ಕಂಪನಿ ಮೆಟಾ ವಾಟ್ಸಾಪ್ ಡೌನ್ ಆಗಿರುವ ವಿಚಾರವನ್ನು ಒಪ್ಪಿಕೊಂಡಿದೆ. ಹಾಗೂ ಈ ದೋಷವನ್ನು ಸರಿಪಡಿಸುವ ಕಾರ್ಯದಲ್ಲಿ ನಿರತವಾಗಿದೆ. ಕೆಲವರು ವಾಟ್ಸಾಪ್ ಸಂದೇಶವನ್ನು ಸ್ವೀಕರಿಸಲು ಹಾಗೂ ಕಳುಹಿಸಲು ಕಷ್ಟಪಡುತ್ತಿದ್ದಾರೆ ಎಂಬುದು ನಮಗೆ ತಿಳಿದಿದೆ. ಸಾಧ್ಯವಾದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಮೆಟಾ ವಕ್ತಾರರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ : Healthy Stomach : ಔಷಧಗಳ ಬಳಕೆ ಕಡಿಮೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಲು ಮಾಡಬೇಕಾದದ್ದು ಏನು ಗೊತ್ತಾ…
ಇದನ್ನೂ ಓದಿ : Special Gift for King Kohli : ತ್ರಿವರ್ಣ ಧ್ವಜ + ವಿರಾಟ್ ಕೊಹ್ಲಿ = ರಂಗೋಲಿ, ಕಿಂಗ್ ಕೊಹ್ಲಿಗೆ ಅಭಿಯಾನಿಯ ವಿಶೇಷ ಗೌರವ
WhatsApp Outage: WhatsApp, WhatsApp Web down for thousands of users