feeding stray dogs:‘ಬೀದಿ ನಾಯಿಗಳ ಮೇಲೆ ಪ್ರೀತಿ ಇರುವವರು ಕಂಡಕಂಡಲ್ಲಿ ಆಹಾರ ನೀಡಬೇಡಿ, ಮನೆಗೆ ತಂದು ಸಾಕಿ’ : ಶ್ವಾನಪ್ರಿಯರಿಗೆ ಹೈಕೋರ್ಟ್ ಆದೇಶ

ಮಹಾರಾಷ್ಟ್ರ : feeding stray dogs : ಬೀದಿ ನಾಯಿಗಳಿಗೆ ಆಹಾರ ನೀಡುವ ವಿಚಾರದಲ್ಲಿ ಶ್ವಾನ ಪ್ರಿಯರಿಗೆ ಬಾಂಬೆ ಹೈಕೋರ್ಟ್​ ವಿಶೇಷ ನಿರ್ದೇಶನವನ್ನು ನೀಡಿದೆ. ಬೀದಿ ನಾಯಿಗಳಿಗೆ ಆಹಾರ ನೀಡಬೇಕೆಂದು ಬಯಸುವವರು ಔಪಚಾರಿಕವಾಗಿ ಶ್ವಾನಗಳನ್ನು ದತ್ತು ತೆಗೆದುಕೊಳ್ಳಬೇಕು ಎಂದು ಸೂಚನೆಯನ್ನು ನೀಡಿದೆ. ಬೀದಿ ನಾಯಿಗಳ ಹಾವಳಿಗಳನ್ನು ತಡೆಯಲು ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಹಾಗೂ ಪೊಲೀಸರಿಗೆ ನ್ಯಾಯಾಲಯವು ಶನಿವಾರದಂದು ನಿರ್ದೇಶನ ನೀಡಿದೆ. ಬೀದಿ ನಾಯಿಗಳಿಗೆ ಆಹಾರವನ್ನು ನೀಡಬೇಕೆಂದು ಬಯಸುವವರು ಅವುಗಳನ್ನು ಔಪಚಾರಿಕವಾಗಿ ದತ್ತು ಪಡೆಯಬೇಕು ಹಾಗೂ ಅವುಗಳನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಮನೆಯಲ್ಲಿ ಮಾತ್ರ ಆಹಾರ ನೀಡುವಂತೆ ಕೋರ್ಟ್ ಆದೇಶ ನೀಡಿದೆ.


ಇದಕ್ಕೂ ಮುನ್ನ ಶುಕ್ರವಾರದಂದು ದೆಹಲಿ ಹೈಕೋರ್ಟ್​ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಅಡಿಯಲ್ಲಿ ಕೇಂದ್ರ ಹಾಗೂ ಎಂಸಿಡಿ ಮೇಲೆ ನೋಟಿಸ್​ ಜಾರಿ ಮಾಡಿದ್ದು, ದೆಹಲಿ ಮುನ್ಸಿಪಲ್​ ಕಾಯ್ದೆ 1957ರ ಸೆಕ್ಷನ್​ಗಳನ್ನು ಪ್ರಶ್ನಿಸಿ ನಾಗರಿಕ ಸಂಸ್ಥಗೆ ನೋಂದಾವಣೆ ಮಾಡದೇ ಬೀದಿ ನಾಯಿಗಳನ್ನು ನಾಶ ಮಾಡುವ ಅಧಿಕಾರವನ್ನು ನೀಡಿದೆ. ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಸಮಸ್ಯೆಗೆ ಸಂಬಂಧಿಸಿದಂತೆ ದೇಶಾದ್ಯಂತ ಹಲವಾರು ದೂರುಗಳು ಕೇಳಿ ಬರ್ತಿವೆ. ಸೋಮವಾರ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ನೋಯ್ಡಾ ಪ್ರದೇಶದಲ್ಲಿ ಬೀದಿ ನಾಯಿಯೊಂದು ಹೊಡೆದು ಒಂದು ವರ್ಷದ ಮಗು ಸಾವನ್ನಪ್ಪಿತ್ತು. ಇದರಿಂದ ಭಾರೀ ಪ್ರತಿಭಟನೆಗಳು ಉಂಟಾಗಿದ್ದವು.


ಬೀದಿ ನಾಯಿಯ ದಾಳಿಗೆ ಒಳಗಾಗಿದ್ದ ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಮಗುವಿಗೆ ಚಿಕಿತ್ಸೆ ಕೂಡ ನೀಡಲಾಗಿತ್ತು. ಆದರೆ ಮಗುವು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ನೋಯ್ಡಾದ ಸೆಕ್ಟರ್ 100 ರಲ್ಲಿ ಹೌಸಿಂಗ್ ಸೊಸೈಟಿಯ ನಿವಾಸಿಗಳು ಬುಧವಾರ ರಾತ್ರಿ ಕ್ಯಾಂಡಲ್ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು, ಬೀದಿ ನಾಯಿಗಳಿಗೆ ಆಶ್ರಯ ನೀಡಲು ವಿಫಲವಾದ ಪ್ರಾಧಿಕಾರದ ವಿರುದ್ಧ ಪ್ರತಿಭಟಿಸಿದರು .

ಇದನ್ನು ಓದಿ : Special Gift for King Kohli : ತ್ರಿವರ್ಣ ಧ್ವಜ + ವಿರಾಟ್ ಕೊಹ್ಲಿ = ರಂಗೋಲಿ, ಕಿಂಗ್ ಕೊಹ್ಲಿಗೆ ಅಭಿಯಾನಿಯ ವಿಶೇಷ ಗೌರವ

ಇದನ್ನೂ ಓದಿ : Dhoni and Kohli : “ಧೋನಿ ಆ ಕೆಲಸ ಮಾಡಿರದಿದ್ದರೆ ನಾನು ಇಲ್ಲಿ ಇರುತ್ತಲೇ ಇರಲಿಲ್ಲ”, ವಿರಾಟ್ ಕೊಹ್ಲಿ ಹೀಗಂದಿದ್ದೇಕೆ?

Those interested in feeding stray dogs should formally adopt them, says Bombay High Court

Comments are closed.