ಚಿಕ್ಕೋಡಿ : ಮಗುವಿನ ಕೈಯಲ್ಲಿದ್ದ 20 ರೂಪಾಯಿಯ ಆಸೆಗೆ ಯುವತಿಯೊರ್ವಳು ಮಗುವನ್ನೇ ಧಾರುಣವಾಗಿ ಕೊಲೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜಾಗನೂರು ಗ್ರಾಮದಲ್ಲಿ ನಡೆದಿದೆ.

4 ವರ್ಷ ಪ್ರಾಯದ ದಿವ್ಯಾ ವಿನೋದ ಹೆಗಡೆ ಎಂಬ ಮಗುವೆ ಕೊಲೆಯಾದ ದುರ್ದೈವಿ. ಕೊಲೆ ಆರೋಪಿಯಾಗಿರುವ ಪೂಜಾ ದತ್ತುರಾವ್ ಕಾಂಬಳೆ (25 ವರ್ಷ) ದಿವ್ಯಾಳನ್ನು ಅಂಗಡಿಗೆ ಕರೆದುಕೊಂಡು ಹೋಗಿದ್ದಾಳೆ. ದಿವ್ಯಾ ಮನೆಯವರು ಮಗುವಿಗೆ 20 ರೂಪಾಯಿ ಹಣ ನೀಡಿದ್ದಾರೆ. ದಾರಿ ಮಧ್ಯದಲ್ಲಿ ಮಗುವಿನ ಕೈಯಲ್ಲಿದ್ದ ಹಣವನ್ನ ಪೂಜಾ ಕಿತ್ತುಕೊಂಡಿದ್ದಾಳೆ.

ಕೈಯಲ್ಲಿದ್ದ ಹಣವನ್ನು ಕಿತ್ತುಕೊಳ್ಳುತ್ತಿದ್ದಂತೆಯೇ ಮಗು ಜೋರಾಗಿ ಅಳುವುದಕ್ಕೆ ಆರಂಭಿಸಿದೆ. ಇದರಿಂದ ಹೆದರಿದ ಪೂಜಾ ಮಗುವನ್ನು ಹತ್ತಿರದ ಬಾವಿಗೆ ತಳ್ಳಿ ಕೊಲೆಗೈದಿದ್ದಾಳೆ.

ಕೂಡಲೇ ಸಾರ್ವಜನಿಕರು ಚಿಕ್ಕೋಡಿ ಪೊಲೀಸರಿಗೆ ಸುದ್ದಿಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಆರೋಪಿ ಪೂಜಾಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.