ಸೋಮವಾರ, ಏಪ್ರಿಲ್ 28, 2025
HomeElectionGujarat Election: ಗುಜರಾತ್ ಚುನಾವಣೆ ದಿನಾಂಕ ಘೋಷಣೆ; 2 ಹಂತದಲ್ಲಿ ಮತದಾನ: ಡಿ.8ರಂದು ಫಲಿತಾಂಶ ಪ್ರಕಟ

Gujarat Election: ಗುಜರಾತ್ ಚುನಾವಣೆ ದಿನಾಂಕ ಘೋಷಣೆ; 2 ಹಂತದಲ್ಲಿ ಮತದಾನ: ಡಿ.8ರಂದು ಫಲಿತಾಂಶ ಪ್ರಕಟ

- Advertisement -

ಗುಜರಾತ್ :Gujarat Election: ಗುಜರಾತ್ ವಿಧಾನಸಭೆ ಚುನಾವಣೆ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗವು ಇಂದು ಪ್ರಕಟಿಸಿದೆ. ಚುನಾವಣೆಯು ಎರಡು ಹಂತಗಳಲ್ಲಿ ನಡೆಯಲಿದೆ. ಡಿಸೆಂಬರ್ 1ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ಡಿಸೆಂಬರ್ 5ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಡಿಸೆಂಬರ್ 8ರಂದು ಎರಡೂ ಹಂತಗಳ ಮತದಾನ ಫಲಿತಾಂಶ ಪ್ರಕಟಗೊಳ್ಳಲಿದೆ. ನವೆಂಬರ್ 5 ಮತ್ತು 10ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ.

ಇದನ್ನೂ ಓದಿ: Date Seed Coffee : ಖರ್ಜೂರ ಬೀಜದ ಕಾಫಿ : ಒಮ್ಮೆ ಕುಡಿದ್ರೆ ಮತ್ತೆ ಬೇಕನಿಸುತ್ತೆ

ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಮಹಿಳೆಯರಿಗೆ, ವಿಶೇಷಚೇತನರಿಗೆ ವಿಶೇಷ ಪೋಲಿಂಗ್ ಬೂತ್ ಗಳನ್ನು ಸ್ಥಾಪಿಸಲಾಗುತ್ತಿದೆ. ಹೊಸ ಮತದಾರರಿಗೆ ನೆರವು ನೀಡುವ ಹಿನ್ನೆಲೆ ಪೋಲಿಂಗ್ ಬೂತ್ ನಲ್ಲಿ ಕಡಿಮೆ ವಯಸ್ಸಿನ ಅಧಿಕಾರಿಗಳನ್ನೇ ನಿಯೋಜಿಸಲಾಗುತ್ತದೆ, ಯುವಕರನ್ನು ಉತ್ತೇಜಿಸಲು ಈ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲಾ ಪೋಲಿಂಗ್ ಬೂತ್ ಗಳು ನೆಲ ಮಹಡಿಯಲ್ಲೇ ಇರಲಿವೆ. ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗುತ್ತಿದ್ದ, ಇದಕ್ಕಾಗಿ ವಿಶೇಷ ಅಧಿಕಾರಿಯನ್ನು ನೇಮಿಸಲಾಗುತ್ತದೆ ಎಂದರು.

ಗುಜರಾತ್ ನಲ್ಲಿ ಈ ಬಾರಿ ಒಟ್ಟು 4.9 ಕೋಟಿ ಮತದಾರರು ಮತದಾನ ಮಾಡಲಿದ್ದಾರೆ. ಬೂತ್ ಗಳಿಗೆ ಬರಲು ಸಾಧ್ಯವಾಗದ 80 ವರ್ಷ ಮೇಲ್ಪಟ್ಟ ವೃದ್ಧರ ಮನೆಗೆ ಬೂತ್ ಗಳನ್ನು ಒಯ್ಯಲಾಗುವುದು. ಕೋವಿಡ್ ಸೋಂಕಿತರ ಮನೆಗೂ ಅಧಿಕಾರಿಗಳೇ ತೆರಳಿ ಮತ ಪಡೆಯಲಿದ್ದಾರೆ. ಎಲ್ಲವೂ ಪಾರದರ್ಶಕ ರೀತಿಯಲ್ಲೇ ನಡೆಯಲಿದೆ ಎಂದು ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದರು.

ಇದನ್ನೂ ಓದಿ: KSCA Election 2022 : ನವೆಂಬರ್ 20ಕ್ಕೆ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆ, ನಾಮಪತ್ರ ಸಲ್ಲಿಕೆ ಬುಧವಾರ ಶುರು

ಗುಜರಾತ್ ವಿಧಾನಸಭೆ ಚುನಾವಣೆ ವೇಳಾಪಟ್ಟಿ

ಗೆಜೆಟ್ ಅಧಿಸೂಚನೆ ಅಧಿಸೂಚನೆ ಹೊರಡಿಸಿದ ದಿನಾಂಕ- ನವೆಂಬರ್ 5 (1ನೇ ಹಂತ), ನವೆಂಬರ್ 10(2ನೇ ಹಂತ)
ನಾಮನಿರ್ದೇಶನಗಳಿಗೆ ಕೊನೆಯ ದಿನಾಂಕ- ನವೆಂಬರ್ 14 (1ನೇ ಹಂತ), ನವೆಂಬರ್ 17 (2ನೇ ಹಂತ)
ನಾಮನಿರ್ದೇಶನಗಳ ಪರಿಶೀಲನೆಯ ದಿನಾಂಕ (ನವೆಂಬರ್ 15 (1ನೇ ಹಂತ), ನವೆಂಬರ್ 18(2ನೇ ಹಂತ)
ನಾಮಪತ್ರ ಹಿಂಪಡೆಯಲು ಕೊನೆಯ ದಿನ- ನವೆಂಬರ್ 15 (1ನೇ ಹಂತ), ನವೆಂಬರ್ 18(2ನೇ ಹಂತ)
ಮತದಾನದ ದಿನಾಂಕ- ಡಿಸೆಂಬರ್ 1- (1ನೇ ಹಂತ) ಡಿಸೆಂಬರ್ 5 (2ನೇ ಹಂತ)
ಮತ ಎಣಿಕೆಯ ದಿನಾಂಕ – ಡಿಸೆಂಬರ್ 8 ಎರಡೂ ಹಂತಗಳು

ಕೇಂದ್ರ ಸರ್ಕಾರವು ಚುನಾವಣೆಗೂ ಮುನ್ನ ಕೇಂದ್ರೀಯ ಸಶಸ್ತ್ತ ಪೊಲೀಸ್ ಪಡೆಗಳನ್ನು ಗುಜರಾತ್ ಗೆ ಕಳುಹಿಸಿದೆ. ಸಿಬ್ಬಂದಿಯ ಅನುಕೂಲಕ್ಕಾಗಿ ವಿಶೇಷ ರೈಲುಗಳನ್ನು ಕಾದಿರಿಸಲಾಗಿದೆ.

Gujarat Election: Gujarat elections in two phases, counting on December 8th

RELATED ARTICLES

Most Popular