Chocolate Desserts:ನೀವು ಚಾಕೊಲೆಟ್ ಪ್ರಿಯರೇ ? ಸುಲಭವಾಗಿ ತಯಾರಿಸಿ ಚಾಕೋಲೆಟ್ ಡೆಸಾರ್ಟ್

(Chocolate Desserts)ಚಾಕೊಲೆಟ್‌ ಇಷ್ಟಪಡದ ವ್ಯಕ್ತಿಗಳು ತೀರಾ ಕಡಿಮೆ. ಪುಟಾಣಿ ಮಕ್ಕಳಿಂದ ಹಿಡಿದು ಹಿರಿಯವರ ವರೆಗೂ ಕೂಡ ಚಾಕೋಲೆಟ್ ತಿನ್ನಲು ಇಷ್ಟಪಡುತ್ತಾರೆ.ಇದರಿಂದ ತಯಾರಿಸಿದ ವಿಧವಿಧವಾದ ತಿನಿಸುಗಳನ್ನು ಕೂಡ ಚಾಕೊಲೆಟ್ ಪ್ರಿಯರು ಚಪ್ಪರಿಸಿಕೊಂಡು ತಿನ್ನುತ್ತಾರೆ. ಐಸ್ ಕ್ರೀಂ‌, ಚಾಕೊಲೆಟ್‌ ಶೇಕ್‌, ಡೆಸರ್ಟ್‌ ಹಲವು ಬಗೆಯ ತಿನಿಸುಗಳನ್ನು ಹೋಟೆಲ್ ಗಳಿಗೆ ಹೋಗಿ ತಿನ್ನುತ್ತಾರೆ. ಹೋಟೆಲ್‌ ಆಹಾರ ತಿನ್ನುವುದರಿಂದ ಕೆಲವರಿಗೆ ಆರೋಗ್ಯ ಕೆಡುತ್ತದೆ. ಆರೋಗ್ಯವನ್ನು ಸುರಕ್ಷಿತವಾಗಿ ಇಟ್ಟುಕೋಳ್ಳುವುದಕ್ಕೆ ಮನೆಯಲ್ಲಿಯೇ ಡೆಸರ್ಟ್‌ ಮಾಡಬಹುದು. ಇದನ್ನು ಮಾಡುವ ವಿಧಾನವನ್ನು ತಿಳಿದುಕೊಳ್ಳಿ.

(Chocolate Desserts)ಬೇಕಾಗುವ ಸಾಮಗ್ರಿಗಳು:

  • ಕಾರ್ನ್ ಪ್ಲೊರ್
  • ಕೊಕೊ ಪೌಡರ್ (cocoa powder)
  • ಸಕ್ಕರೆ
  • ಹಾಲು
  • ನೀರು
  • ಬೆಣ್ಣೆ
  • ವೆನಿಲ್ಲ

ಮಾಡುವ ವಿಧಾನ :

ಒಂದು ಬೌಲ್ ನಲ್ಲಿ ಸಕ್ಕರೆ ಒಂದು ಕಪ್ ಮತ್ತು ನೀರು ಒಂದು ಕಪ್ ಹಾಕಿಕೊಂಡು ಕಾಯಿಸಬೇಕು.ಇನ್ನೊಂದು ಬೌಲ್ ನಲ್ಲಿ ಕಾರ್ನ್ ಪ್ಲೊರ್ ಅರ್ಧ ಕಪ್, ಕೊಕೊ ಪೌಡರ್ ಎರಡು ಚಮಚ, ಬೇಕಾದಲ್ಲಿ ಅರ್ಧ ಚಮಚದಷ್ಟು ಕಾಪಿ ಪೌಡರ್ ಬೆರೆಸಿ ಕಲಸಿಕೊಳ್ಳಬೇಕು. ಕಲಸಿಕೊಂಡ ಮಿಶ್ರಣವನ್ನು ಸಕ್ಕರೆ ಮತ್ತು ನೀರನ್ನು ಕಾಯಿಸಿದ ಬೌಲ್ ಗೆ ಹಾಕಬೇಕು. ಅದಕ್ಕೆ ವೆನಿಲ್ಲ, ಹಾಲನ್ನು ಹಾಕಿ ದಪ್ಪ ಹದ ಬರುವ ವರೆಗೆ ಕಾಯಿಸಿಕೊಳ್ಳಬೆಕು. ನಂತರ ಅದಕ್ಕೆ ಒಂದು ಚಮಚ ಬೆಣ್ಣೆ ಯನ್ನು ಹಾಕಿ ಐದು ನಿಮಿಷ ಕಾಯಿಸಬೇಕು. ಆನಂತರ ಮತ್ತೆ ಎರಡು ಚಮಚ ಬೆಣ್ಣೆಯನ್ನು ಬೆರೆಸಿ ಕೊಂಡು ದಪ್ಪ ಹದ ಬರುವ ವರೆಗೆ ಕಾಯಿಸಬೇಕು. ದಪ್ಪ ಹದ ಬರುತ್ತಿದ್ದ ಹಾಗೆ ಬೆಣ್ಣೆಯನ್ನು ಸವರಿದ ಬೌಲ್ ಅಥವಾ ತಟ್ಟೆಗೆ ಹಾಕಿ ಸ್ವಲ್ಪ ಗಟ್ಟಿ ಆಗುವಂತೆ ಬಿಡಬೇಕು ಹೀಗೆ ಮಾಡಿದರೆ ಚಾಕೊಲೆಟ್ ಡೆಸರ್ಟ್ ತಿನ್ನಲು ರೆಡಿ.

ಬ್ರೌನಿ

ಬೇಕಾಗುವ ಸಾಮಾಗ್ರಿಗಳು:

  • ಮೊಟ್ಟೆ
  • ಪುಡಿಮಾಡಿದ ಸಕ್ಕರೆ
  • ಕಾರ್ನ್‌ ಪ್ಲೊರ್
  • ಕೊಕೊ ಪೌಡರ್‌
  • ಎಣ್ಣೆ
  • ವೆನಿಲ್ಲಾ

ಮಾಡುವ ವಿಧಾನ:
ಒಂದು ಬೌಲ್ ನಲ್ಲಿ ಕೊಕೊ ಪೌಡರ್‌,ಪುಡಿ ಮಾಡಿದ ಸಕ್ಕರೆ, ಕಾರ್ನ್‌ ಪ್ಲೊರ್‌, ಮೊಟ್ಟೆ, ಎಣ್ಣೆ, ವೆನಿಲ್ಲಾ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಬೇಕು. ದಪ್ಪ ಹದ ಬಂದ ನಂತರ ಒಂದು ಬಟ್ಟಲಿಗೆ ಎಣ್ಣೆಯನ್ನು ಸವರಿ ಅವನ್‌ ನಲ್ಲಿ 40 ನಿಮಿಷಗಳ ಕಾಲದ ವರೆಗೆ ಬಿಸಿಮಾಡಿಕೊಂಡರೆ ರುಚಿಯಾಗಿ ಸವಿಯಲು ಬ್ರೌನಿ ರೆಡಿ. ಅವನ್‌ ಇಲ್ಲದವರು ಇಡ್ಲಿ ಮಾಡುವ ಪಾತ್ರೆಯಲ್ಲಿ ಹಬೆಯ ಮೂಲಕ ಬ್ರೌನಿಯನ್ನು ತಯಾರಿಸಿಕೊಳ್ಳಬಹುದು.

ಇದನ್ನೂ ಓದಿ:Date Seed Coffee : ಖರ್ಜೂರ ಬೀಜದ ಕಾಫಿ : ಒಮ್ಮೆ ಕುಡಿದ್ರೆ ಮತ್ತೆ ಬೇಕನಿಸುತ್ತೆ

ಇದನ್ನೂ ಓದಿ:Home Remedies for Diabetes : ಸಕ್ಕರೆ ಕಾಯಿಲೆ ಸಮಸ್ಯೆಗೆ, ಒಣ ನೆಲ್ಲಿಕಾಯಿ ಪುಡಿಯಲ್ಲಿದೆ ಚಮತ್ಕಾರ

Are you a chocolate lover? Easy to make chocolate dessert

Comments are closed.