ಭಾನುವಾರ, ಏಪ್ರಿಲ್ 27, 2025
HomeSportsCricketJames Anderson Rehan Ahmed : ಆ್ಯಂಡರ್ಸನ್ ಟೆಸ್ಟ್ ಡೆಬ್ಯೂ 2003, ರೆಹಾನ್ ಹುಟ್ಟಿದ್ದು 2004...

James Anderson Rehan Ahmed : ಆ್ಯಂಡರ್ಸನ್ ಟೆಸ್ಟ್ ಡೆಬ್ಯೂ 2003, ರೆಹಾನ್ ಹುಟ್ಟಿದ್ದು 2004 : ಇಂಗ್ಲೆಂಡ್ ತಂಡದಲ್ಲಿ ಅಪರೂಪದ ಜೋಡಿ

- Advertisement -

ಲಂಡನ್ : ಇಂಗ್ಲೆಂಡ್ ಟೆಸ್ಟ್ ತಂಡದಲ್ಲೊಂದು ಅಪರೂಪದ ಜೋಡಿ. (James Anderson Rehan Ahmed) ಒಬ್ಬ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡುವ ವೇಳೆ ಮತ್ತೊಬ್ಬ ಇನ್ನೂ ಹುಟ್ಟಿಯೇ ಇರ್ಲಿಲ್ಲ. ಈಗ ಆ ಇಬ್ಬರೂ ಒಟ್ಟಿಗೇ ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಇಂಗ್ಲೆಂಡ್ ತಂಡದ ದಿಗ್ಗಜ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಮತ್ತು ಯುವ ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್ ಅವರ ಇಂಟ್ರೆಸ್ಟಿಂಗ್ ಕಥೆ.

ಪಾಕಿಸ್ತಾನ ವಿರುದ್ಧ ಮುಂದಿನ ತಿಂಗಳು ಆರಂಭವಾಗಲಿರುವ ಟೆಸ್ಟ್ ಸರಣಿಗೆ 18 ವರ್ಷದ ಯುವ ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದಾನೆ (Rehan Ahmed in England test team). ಇಂಗ್ಲೆಂಡ್ ತಂಡದಲ್ಲಿ ಜೇಮ್ಸ್ ಆ್ಯಂಡರ್ಸನ್ ಕೂಡ ಇದ್ದಾರೆ. ರೆಹಾನ್ ಅಹ್ಮದ್ ಹುಟ್ಟುವ ಒಂದು ವರ್ಷ ಮೊದಲೇ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಆ್ಯಂಡರ್ಸನ್ ಟೆಸ್ಟ್ ಕ್ರಿಕೆಟ್’ನಲ್ಲಿ 667 ವಿಕೆಟ್ ಪಡೆದಿದ್ದಾರೆ. ಅತೀ ಹೆಚ್ಚು ಟೆಸ್ಟ್ ವಿಕೆಟ್ಸ್ ಪಡೆದ ವೇಗದ ಬೌಲರ್’ಗಳ ಸಾಲಿನಲ್ಲಿ ಆ್ಯಂಡರ್ಸನ್ ಮೊದಲ ಸ್ಥಾನದಲ್ಲಿದ್ದಾರೆ.

ರೆಹಾನ್ ಅಹ್ಮದ್ ಹುಟ್ಟಿದ್ದು 2004ರ ಆಗಸ್ಟ್ 13ರಂದು. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ ಇಂಗ್ಲೆಂಡ್ ತಂಡದ ದಿಗ್ಗಜ ವೇಗಿ, ಜೇಮ್ಸ್ ಆ್ಯಂಡರ್ಸನ್ ಚೊಚ್ಚಲ ಟೆಸ್ಟ್ ಪಂದ್ಯವಾಡಿದಾಗ ಈ ರೆಹಾನ್ ಅಹ್ಮದ್ ಹುಟ್ಟಿರಲಿಲ್ಲ. 40 ವರ್ಷದ ಜೇಮ್ಸ್ ಆ್ಯಂಡರ್ಸನ್ 2003ರ ಮೇ 22ರಂದು ಜಿಂಬಾಬ್ವೆ ವಿರುದ್ಧ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆದ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು.

ನಾಟಿಂಗ್’ಹ್ಯಾಮ್’ನವರಾದ ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್ ಈಗಾಗಲೇ ಅಪಾರ ಭರವಸೆ ಮೂಡಿಸಿರುವ ಪ್ರತಿಭೆ. 2022ರ ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದ ರೆಹಾನ್ ಅಹ್ಮದ್ ಟೂರ್ನಿಯಲ್ಲಿ ಇಂಗ್ಲೆಂಡ್ ಪರ 2ನೇ ಅತೀ ಹೆಚ್ಚು ವಿಕೆಟ್ಸ್ ಪಡೆದಿದ್ದರು. ಇದೀಗ ರೆಹಾನ್ ಅಹ್ಮದ್ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದಿರುವ ಸಂದರ್ಭದಲ್ಲೇ ಆಸ್ಟ್ರೇಲಿಯಾದ ದಿಗ್ಗಜ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಅವರೊಂದಿಗಿನ ವೀಡಿಯೊ ಒಂದು ಸಾಮಾಜಿಕ ತಾಲತಾಣದಲ್ಲಿ ವೈರಲ್ ಆಗಿದೆ.

ರೆಹಾನ್ ಅಹ್ಮದ್ 13 ವರ್ಷದ ಹುಡುಗನಾಗಿದ್ದಾಗ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಅವರನ್ನು ಭೇಟಿಯಾಗಿದ್ದ. ಹುಡುಗನ ಬೌಲಿಂಗ್ ಕೌಶಲ್ಯಕ್ಕೆ ವಾರ್ನ್ ಇಂಪ್ರೆಸ್ ಆಗಿದ್ದರು. “ನೀನು ಚೆನ್ನಾಗಿ ಬೌಲಿಂಗ್ ಮಾಡುತ್ತಿಯಾ. ನಿನ್ನ ಮೇಲೊಂದು ಕಣ್ಣಿಟ್ಟಿರುತ್ತೇನೆ. ನಿನ್ನ ಬಗ್ಗೆ ಕಾಮೆಂಟರಿ ಮಾಡುವ ನಿರೀಕ್ಷೆಯಲ್ಲಿದ್ದೇನೆ. 15ನೇ ವರ್ಷಕ್ಕೆ ನೀನು ಪ್ರಥಮದರ್ಜೆ ಪಂದ್ಯವಾಡಲಿರುವೆ” ಎಂದು ಶೇನ್ ವಾರ್ನ್ ಭವಿಷ್ಯ ನುಡಿದಿದ್ದರು.

ರೆಹಾನ್ ಅಹ್ಮದ್ 17ನೇ ವಯಸ್ಸಿನಲ್ಲಿ ಲೀಸೆಸ್ಟರ್’ಶೈರ್ ಪರ ಚೊಚ್ಚಲ ಪ್ರಥಮದರ್ಜೆ ಪಂದ್ಯವಾಡಿದ್ದರು. ರೆಹಾನ್ ಅಹ್ಮದ್ ಟ್ಯಾಲೆಂಟ್ ಬಗ್ಗೆ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮತ್ತು ಕೋಚ್ ಬ್ರೆಂಡನ್ ಮೆಕ್ಕಲಂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

“7 ವರ್ಷಗಳ ಹಿಂದೆ ನಾವು ಇಂಗ್ಲೆಂಡ್’ಗೆ ಟೆಸ್ಟ್ ಆಡಲು ತೆರಳಿದ್ದಾಗ ಅಲ್ಲಿ ಬೌಲಿಂಗ್ ಮಾಡುತ್ತಿದ್ದ ರೆಹಾನ್ ಅಹ್ಮದ್ ನನ್ನ ಗಮನ ಸೆಳೆದಿದ್ದ” ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕ ಮಿಸ್ಬಾ ಉಲ್ ಹಕ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : Vijay Hazare Trophy Semifinal : ನಾಳೆ ಸೆಮಿಫೈನಲ್, ಕರ್ನಾಟಕಕ್ಕೆ ಸೌರಾಷ್ಟ್ರ ಎದುರಾಳಿ

ಇದನ್ನೂ ಓದಿ : ODI World Cup final 2023: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 2023ರ ಏಕದಿನ ವಿಶ್ವಕಪ್ ಫೈನಲ್

ಇದನ್ನೂ ಓದಿ : “Pabbas” ice cream: ಹುಟ್ಟೂರಲ್ಲಿ ಬಾಲ್ಯದ ಫೇವರಿಟ್ “ಪಬ್ಬಾಸ್” ಐಸ್ ಕ್ರೀಮ್ ಸವಿದ ಕೆ.ಎಲ್ ರಾಹುಲ್

James Anderson Rehan Ahmed : Anderson Test Debut 2003, Rehan Born 2004 : A rare pair in the England team

RELATED ARTICLES

Most Popular