Kriti who dated Prabhas : ಪ್ರಭಾಸ್ ಜೊತೆ ಡೇಟಿಂಗ್ : ವದಂತಿ ಬಗ್ಗೆ ಮೌನ ಮುರಿದ ಕೃತಿ ಸನೋನ್

ನಟಿ ಕೃತಿ ಸನೋನ್ ತನ್ನ ಸಹನಟ ಪ್ರಭಾಸ್ ಜೊತೆ ಡೇಟಿಂಗ್ (Kriti who dated Prabhas) ಮಾಡುವ ವದಂತಿಗಳಿಗೆ ಕೊನೆಗೂ ಅಂತ್ಯ ಹಾಡಿದ್ದಾರೆ. ಇಬ್ಬರೂ ತಾರೆಯರು ಆದಿಪುರುಷನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಇದರಲ್ಲಿ ಅವರು ಭಗವಾನ್ ರಾಮ ಮತ್ತು ಸೀತೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸಮಯದಲ್ಲಿ ವರುಣ್ ಧವನ್ ಕೃತಿ ಪ್ರಭಾಸ್ ಡೇಟಿಂಗ್ ಬಗ್ಗೆ ಸುಳಿವು ನೀಡಿದರು. ಡ್ಯಾನ್ಸ್ ರಿಯಾಲಿಟಿ ಶೋ ಆದ ಮೇಲೆ ಹಲವು ರೀತಿಯ ವದಂತಿಗಳು ಹರಿದಾಡಿದವು ಆದರೆ ಕೃತಿ ಸನೋನ್‌ ಸ್ಪಷ್ಟನೆ ನೀಡಿದ್ದಾರೆ. ನಟಿ ಕೃತಿ ಸನೋನ್‌ ಪ್ರಕ್ರಿಯಿಸುವ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.

“ಇದು ಪ್ರೀತಿ ಅಥವಾ ಪ್ರಚಾರದ ಗಿಮಿಕ್‌ ಕೂಡ ಅಲ್ಲ.. ನಮ್ಮ ಭೇದಿಯಾ ರಿಯಾಲಿಟಿ ಶೋನಲ್ಲಿ ಸ್ವಲ್ಪ ತಮಾಷೆ ಮಾಡಿದ್ದರು. ವರುಣ್‌ ತಮಾಷೆಗೆ ಆಡಿದ ಮಾತಿನ ಪರಿಣಾಮವಾಗಿ ಸಾಕಷ್ಟು ವದಂತಿಗಳು ಹುಟ್ಟಿಕೊಂಡಿದೆ. ಮಾಧ್ಯಮದವರು ನನ್ನ ಮದುವೆ ಡೇಟ್‌ ಅನೌನ್ಸ್‌ ಮಾಡುವ ಮೊದಲು ನಾನೇ ಆ ಭ್ರಮೆಯನ್ನು ದೂರ ಮಾಡುತ್ತೇನೆ ಎಂದಿದ್ದಾರೆ. ವದಂತಿಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ! ” ಎಂದು ಕೃತಿ ಸನೋನ್‌ ತಮ್ಮ ಇನ್‌ಸ್ಟಾಗ್ರಮ್‌ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚೆಗೆಷ್ಟೇ ರಿಯಾಲಿಟಿ ಶೋವೊಂದರಲ್ಲಿ ವರುಣ್‌ ಧವನ್‌ ಭಾಗವಹಿಸಿದ್ದರು. ಅದೇ ಕಾರ್ಯಕ್ರಮದಲ್ಲಿ ಕೃತಿ ಸನೋನ್‌ ಕೂಡ ಭಾಗವಹಿಸಿದ್ದರು. ಕರಣ್‌ ಜೋಹರ್‌ ಕೇಳಿದ ಒಂದು ಪ್ರಶ್ನೆಗೆ ಉತ್ತರಿಸುವಾಗ ನಾಯಕಿಯರ ಪಟ್ಟಿ ಮಾಡಿದ ವರುಣ್‌ ಧವನ್‌ ಕೃತಿ ಹೆಸರನ್ನು ತೆಗೆಉಕೊಳ್ಳಲಿಲ್ಲ. ಯಾಕೆ ಎಂದು ಕೇಳಿದಾಗ ವರುಣ್‌ ಧವನ್‌ ಹೊಸ ವಿಷಯವನ್ನು ಬಾಯಿಬಿಟ್ಟಿದ್ದಾರೆ.

ಇದನ್ನೂ ಓದಿ : International Film Festival : ಅಂತಾರಾಷ್ಟ್ರೀಯ ಸಿನಿಮೋತ್ಸವ : “ಕೆಜಿಎಫ್‌” ಸಿನಿಮಾ ಹಾಡಿ ಹೊಗಳಿದ ರಾಣಾ ದಗ್ಗುಬಾಟಿ

ಇದನ್ನೂ ಓದಿ : Actress Ramya Birthday : ಜಪಾನಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ರಮ್ಯಾ

ಇದನ್ನೂ ಓದಿ : Aditi Prabhudeva and Yashas: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅದಿತಿ ಪ್ರಭುದೇವ

ಈ ಪಟ್ಟಿಯಲ್ಲಿ ಕೃತಿ ಸನೋನ್‌ ಹೆಸರು ಇಲ್ಲ ಯಾಕೆಂದರೆ ಅವರು ಹೆಸರು ಬೇರೆ ವ್ಯಕ್ತಿಯ ಹೃದಯದಲ್ಲಿದೆ ಅವರು ಈಗ ಮುಂಬೈನಲ್ಲಿ ಇಲ್ಲ. ಈಗ ದೀಪಿಕಾ ಪಡುಕೋಣೆ ಜೊತೆ ಶೂಟಿಂಗ್‌ ಮಾಡುತ್ತಿದ್ದಾರೆ ಎಂದು ವರುಣ್‌ ಧವನ್‌ ಹೇಳಿದ ವಿಡಿಯೋ ವೈರಲ್‌ ಆಗಿದೆ. “ಪ್ರಾಜೆಕ್ಟ್‌ ಕೆ” ಸಿನಿಮಾಕ್ಕಾಗಿ ಪ್ರಭಾಸ್‌ ಅವರು ದೀಪಿಕಾ ಪಡುಕೋಣೆ ಶೂಟಿಂಗ್‌ನಲ್ಲಿ ತೊಡಗಿದ್ದಾರೆ. ಹಾಗಾಗಿ ವರುಣ್‌ ಧವನ್‌ ಹೇಳಿದ್ದು ಪ್ರಭಾಸ್‌ ಬಗ್ಗೆ ಎಂದು ಎಲ್ಲರೂ ಊಹಿಸುತ್ತಿದ್ದಾರೆ. ಆದರೆ ಈ ವದಂತಿ ಹೆಚ್ಚಾಗುವ ಮುನ್ನ ಕೃತಿ ಸನೋನ್‌ ಸ್ಪಷ್ಟನೆ ನೀಡುವ ಮೂಲಕ ಎಲ್ಲರ ಬಾಯಿ ಮುಚ್ಚಿಸುವ ಕೆಲಸ ಮಾಡಿದ್ದಾರೆ.

Kriti who dated Prabhas : Dating with Prabhas : Kriti Sanon broke her silence on the rumour

Comments are closed.