ಮಂಗಳವಾರ, ಮೇ 13, 2025
HomeBreakingAmla - Corona Virus : ನೆಲ್ಲಿಕಾಯಿ ತಿನ್ನಿ ಕೊರೊನಾದಿಂದ ದೂರವಿರಿ ! ಹಸಿರು ಹೊನ್ನಿನ...

Amla – Corona Virus : ನೆಲ್ಲಿಕಾಯಿ ತಿನ್ನಿ ಕೊರೊನಾದಿಂದ ದೂರವಿರಿ ! ಹಸಿರು ಹೊನ್ನಿನ ಮಹತ್ವ ನಿಮಗೆ ಗೊತ್ತಾ?

- Advertisement -

ಪ್ರಾಚೀನ ಕಾಲದಿಂದಲೂ ನೆಲ್ಲಿಕಾಯಿಯನ್ನು ಆಯುರ್ವೇದ ಔಷಧ ಪದ್ಧತಿಯಲ್ಲಿ ಬಳಸಲಾಗು ತ್ತಿದೆ. ನೆಲ್ಲಿಕಾಯಿಯ ( Amla ) ಬಗ್ಗೆ ಸಾಕಷ್ಟು ಅಧ್ಯಯನಗಳೂ ನಡೆಯುತ್ತಿವೆ. ಸಾಮಾನ್ಯವಾಗಿ ಹಸಿರು ಬಣ್ಣದ ನೆಲ್ಲಿಕಾಯಿ ( Amla ) ಸಣ್ಣ ಮರಗಳಲ್ಲಿ ಕಂಡುಬರುತ್ತದೆ. ಹುಳಿ, ಕಹಿ, ಸಿಹಿ ಸಮ್ಮಿಶ್ರಿತ ರುಚಿಯನ್ನು ಹೊಂದಿರುವ ನೆಲ್ಲಿಕಾಯಿಯನ್ನು ತಿನ್ನುವುದು ಖುಷಿಕೊಡುತ್ತದೆ. ಮಾತ್ರವಲ್ಲ ಆರೋಗ್ಯದ ದೃಷ್ಟಿಯಿಂದ ಚಿನ್ನದಷ್ಟೆ ಅಮೂಲ್ಯ.

ನೆಲ್ಲಿಕಾಯಿ ಹೆಚ್ಚಿನ ಪ್ರಮಾಣದಲ್ಲಿ ಆಸ್ಕೋರ್ಬಿಕ್ ಆಮ್ಲವನ್ನು (ವಿಟಮಿನ್ ಸಿ) ಹೊಂದಿರುವುದ ರಿಂದ ಕಹಿಯಾದ ರುಚಿಯನ್ನು ನೀಡುತ್ತದೆ, ಇದು ಎಲಗಿತಾನಿನ್ಗಳ ಹೆಚ್ಚಿನ ಸಾಂದ್ರತೆಯಿಂದ ಹುಟ್ಟಿಕೊಳ್ಳಬಹುದು, ಉದಾಹರಣೆಗೆ ಎಂಬ್ಲಿಕಾನಿನ್ ಎ (37%), ಎಂಬ್ಲಿಕಾನಿನ್ ಬಿ (33%), ಪುನಿಗ್ಲುಕೋನಿನ್ (12% ), ಮತ್ತು ಪೆಡುನ್‌ಕುಲಾಜಿನ್ (14%). ಆಮ್ಲಾದಲ್ಲಿ ಪ್ಯುನಿಕಾಫೊ ಲಿನ್ ಮತ್ತು ಫೈಲನೆಂಬ್ಲಿನ್ ಎ, ಫೈಲನೆಂಬ್ಲಿನ್ ಇತರ ಪಾಲಿಫಿನಾಲ್‌ಗಳಾದ ಫ್ಲೇವೊನೈಡ್ಗಳು, ಕ್ಯಾಂಪ್ಫೆರಾಲ್, ಎಲಾಜಿಕ್ ಆಮ್ಲ ಮತ್ತು ಗ್ಯಾಲಿಕ್ ಆಮ್ಲವಿದೆ.

ಜಗತ್ತಿನೆಲ್ಲೆಡೆ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇಂತಹ ಸೋಂಕು ಮನುಷ್ಯನ ದೇಹಲದಲ್ಲಿ ರೋಗನಿರೋಧಕ ಶಕ್ತಿ ಕುಂದುವುದರಿಂದ ಹೆಚ್ಚುತ್ತದೆ ಅನ್ನುವುದು ಅಧ್ಯಯನಗಳಿಂದ ಬಯಲಾಗಿದೆ. ಕೊರೊನಾ ಸೋಂಕಿಗೆ ಯಾವುದೇ ಔಷಧಗಳಿಲ್ಲ. ಆದರೆ ಕೊರೊನಾ ಸೋಂಕಿತ ವ್ಯಕ್ತಿಗಳ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುವ ನಿಟ್ಟಿನಲ್ಲಿ ಯೇ ಔಷಧಗಳನ್ನು ನೀಡಲಾಗುತ್ತಿದೆ. ಮಾನವನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸಲು ನೆಲ್ಲಿಕಾಯಿ ರಾಮಬಾಣದಂತೆ ಕೆಲಸ ಮಾಡುತ್ತದೆ.

ನೆಲ್ಲಿಕಾಯಿಯಲ್ಲಿರುವ ವಿಟಮಿಟ್ ಸಿ ಹೇರಳ ಪ್ರಮಾಣದಲ್ಲಿರುವುದರಿಂದ ಮನುಷ್ಯನ ದೇಹಕ್ಕೆ ಬೇಕಾಗುವ ರೋಗ ನಿರೋಧಕ ಶಕ್ತಿಯನ್ನು ಒದಗಿಸುವ ಕಾರ್ಯವನ್ನು ಮಾಡುತ್ತದೆ. ಹಲವು ಕಡೆಗಳಲ್ಲಿ ಕ್ವಾರಂಟೈನ್ ನಲ್ಲಿರುವವರಿಗೂ ನೆಲ್ಲಿಕಾಯಿಯನ್ನು ನೀಡುವ ಕಾರ್ಯ ನಡೆಯುತ್ತಿದೆ. ಮಾರುಕಟ್ಟೆಗಳಲ್ಲಿ ಸುಲಭವಾಗಿ ಸಿಗುವ ನೆಲ್ಲಿಕಾಯಿಯನ್ನು ತಿನ್ನುವುದರಿಂದ ಕೊರೊನಾ ಸೋಂಕು ನಮ್ಮಿಂದ ದೂರ ಉಳಿಯುವಂತೆ ಮಾಡಬಹುದಾಗಿದೆ.

ನೆಲ್ಲಿಕಾಯಿ ಕೇವಲ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ವಿಟಮಿನ್ ಸಿ ಅಂಶ ಹೇರಳವಾಗಿರುವುದರ ಜೊತೆಗೆ ಪ್ರೋಟೀನ್, ನಾರು ,ಲವಣದ ಅಂಶವನ್ನೂ ಒಳಗೊಂಡಿದೆ. ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗಿದ್ದಲ್ಲಿ ನೆಲ್ಲಿಕಾಯಿ ಒಣಗಿಸಿ ಪುಡಿ ಮಡಿ. ಸ್ವಲ್ಪ ಸಕ್ಕರೆ ಪಾಕದೊಂದಿಗೆ ಬೆರೆಸಿ ಪ್ರತಿ ದಿನ ಒಂದು ಚಮಚದಷ್ಟು ಬರೀ ಹೊಟ್ಟೆಯಲ್ಲಿ ತೆಗೆದುಕೊಂಡರೆ ಕೊಲೆಸ್ಟ್ರಾಲ್ ಸ್ಥಿಮಿತದಲ್ಲಿ ಇರುತ್ತದೆ.

ಆಯುರ್ವೇದದ ಚ್ಯವನಪ್ರಾಶಕ್ಕೆ ನೆಲ್ಲಿ ಉಪಯುಕ್ತವಾಗಿದೆ ಆಯುರ್ವೇದದ ಪ್ರಕಾರ ಮೂಲವ್ಯಾದಿ ತಲೆನೋವು ಅನೀಮಿಯಾ ಮಲಬದ್ದತೆ ಇದ್ದವರು. ದಿನಕ್ಕೆ ನಾಲ್ಕು ಚಮಚ ನೆಲ್ಲಿರಸ ಕುಡಿದರೆ ಆರೋಗ್ಯಕ್ಕೆ ಒಳ್ಳೆದಂತೆ ನೆಲ್ಲಿಕಾಯಿ ಗಿಡದ, ಎಲೆ, ಬೇರು, ಕಾಯಿ, ತೊಗಟೆ ಹೂವು ಎಲ್ಲವೂ ಉಪಯುಕ್ತ. ಆರೋಗ್ಯಕ್ಕೆ ಆಯಸ್ಸಿಗೆ ಹೃದಯ ಸಂಬಂಧಿ ಖಾಯಿಲೆ ಗಳಿಗೆ ಮಧುಮೇಹಿಗಳಿಗೆ ನೆಲ್ಲಿಕಾಯಿ ರಸ ಜೀವಾಮೃತವಾಗಿದೆ. ಮಾತ್ರವಲ್ಲ ಸೆಕೆಯನ್ನು ತಡೆಯಲು ಪ್ರತಿದಿನ ಸ್ವಲ್ಪ ಆಮ್ಲ ಜ್ಯೂಸ್ ಕುಡಿದರೆ ಇದು ದೇಹವನ್ನು ತಂಪಾಗಿಡುತ್ತದೆ.

ನೆಲ್ಲಿಕಾಯಿಯನ್ನು ಜೇನು ಜೊತೆ ತೆಗೆದುಕೊಳ್ಳುತ್ತಾ ಬಂದರೆ ಅಸ್ತಮಾ ಕಾಯಿಲೆ ಕಡಿಮೆಯಾಗುತ್ತದೆ ಉಸಿರಾಟ ತೊಂದರೆ ಅನುಭವಿಸುತ್ತಿರುವವರೆಗೆ ಇದು ಅತ್ಯತ್ತಮವಾದ ಔಷಧಿಯಾಗಿದೆ. ನಿತ್ಯವೂ ಎರಡು ಬಾರಿ ನೆಲ್ಲಿಕಾಯಿಯ ರಸವನ್ನುಕುಡಿದರೆ ಉರಿ ಮೂತ್ರದ ಸಮಸ್ಸೆ ಇರುವುದಿಲ್ಲ.

ನೆಲ್ಲಿ ಕಾಯಿಯ ಸಕ್ಕರೆ ಕಾಯಿಲೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.ರಕ್ತದಲ್ಲಿನ ಸಕ್ಕರೆ ಅಂಶವನ್ನು ಹತೋಟಿಯಲ್ಲಿ ಇಡುತ್ತದೆ. ಅಲ್ಲದೇ ಮೆದುಳಿನ ಆರೋಗ್ಯವನ್ನು ವೃದ್ಧಿಸಿ, ಮೆದುಳು ಸದಾ ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳುತ್ತದೆ. ಮಾತ್ರವಲ್ಲ ಕಣ್ಣಿನ ಆರೋಗ್ಯವನ್ನು ವೃದ್ದಿಸುವ ಗುಣವನ್ನೂ ನೆಲ್ಲಿಕಾಯಿ ಹೊಂದಿದೆ. ಸಾಮಾನ್ಯವಾಗಿ ಕಂಡು ಬರುವ ಶೀತ, ಕಫ ಹಾಗೂ ಗಂಟಲ ಸಮಸ್ಯೆಯನ್ನು ನೀಗಿಸಲು ಸಹಕಾರಿಯಾಗಿದೆ.

ಸಾಮಾನ್ಯ ಕಾಯಿಲೆಗಳಷ್ಟೇ ಅಲ್ಲ ಮಾರಕ ಕ್ಯಾನ್ಸರ್ ನಿಂದಲೂ ನಮ್ಮನ್ನು ಕಾಪಾಡುವ ಶಕ್ತಿ ನೆಲ್ಲಿಕಾಯಿಗೆ ಇದೆ. ನೆಲ್ಲಿಕಾಯಿಯನ್ನು ತಿನ್ನುವುದರಿಂದ ದೇಹದಲ್ಲಿರುವ ಕ್ಯಾನ್ಸರ್ ಕಾರಕಗಳನ್ನು ಕೊಲ್ಲುವ ಕಾರ್ಯವನ್ನು ನೆಲ್ಲಿಕಾಯಿ ಮಾಡುತ್ತದೆ. ಅಲ್ಲದೇ ಹೃದಯದ ಆರೋಗ್ಯದ ದೃಷ್ಟಿಯಿಂದಲೂ ನೆಲ್ಲಿಕಾಯಿ ಉತ್ತಮ ಲಾಭವನ್ನು ತಂದುಕೊಡುತ್ತದೆ.

ನೆಲ್ಲಿಕಾಯಿ ಮೂತ್ರ ಪಿಂಡ ಹಾಗೂ ಮೂತ್ರ ಕೋಶದ ಆರೋಗ್ಯವನ್ನು ವೃದ್ಧಿಸುವ ಜೊತೆಗೆ ಚಟುವಟಿಕೆ ಹೆಚ್ಚಿಸುತ್ತದೆ. ಪುರುಷರಲ್ಲಿ ಹೆಚ್ಚಾಗಿ ಕಾಡುವ ಸಂತಾನೋತ್ಪತ್ತಿ ಸಮಸ್ಯೆಯಿಂದ ಮುಕ್ತರಾಗಬೇಕಾದ್ರೆ ನಿರಂತರವಾಗಿ ನೆಲ್ಲಿಕಾಯಿಯನ್ನು ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳುವುದು ಸೂಕ್ತ. ಬೆಟ್ಟದ ನೆಲ್ಲಿಕಾಯಿಯನ್ನು ತಿನ್ನುವುದರಿಂದ ಆರೋಗ್ಯ ವೃದ್ದಿಸುವುದರಲ್ಲಿ ಅನುಮಾನವೇ ಇಲ್ಲ. ಇನ್ಯಾಕೆ ತಡ, ನೆಲ್ಲಿಕಾಯಿಯನ್ನು ತಿನ್ನಿ, ಕೊರೊನಾ ಮಹಾಮಾರಿಯಿಂದ ದೂರ ಇರಿ.

ಇದನ್ನೂ ಓದಿ : ದಿನಕ್ಕೆ ಎಷ್ಟು ಮೊಟ್ಟೆಗಳನ್ನು ಸೇವಿಸಬೇಕು ಗೊತ್ತಾ ?

ಇದನ್ನೂ ಓದಿ : ದಿನಕ್ಕೆರಡು ಏಲಕ್ಕಿ ತಿಂದ್ರೆ ಲಾಭವೇನು ಗೊತ್ತಾ ?

ಇದನ್ನೂ ಓದಿ : ನಿಮ್ಮ ಮಕ್ಕಳನ್ನು ಪ್ರಜ್ಞಾವಂತರಾಗಬೇಕಾ? ಹಾಗಾದ್ರೆ ಈ ಟಿಫ್ಸ್‌ ಫಾಲೋ ಮಾಡಿ

(Amla Good For Health and Support Corona Virus)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular