Rescued Girl child : ಪೊದೆಯಲ್ಲಿದ್ದ ಮಗುವನ್ನು ರಕ್ಷಿಸಿ, ಜನ ಮೆಚ್ಚುಗೆಗೆ ಪಾತ್ರರಾದ ಕುಂದಾಪುರದ ಮಹಿಳೆ

ಕುಂದಾಪುರ : ಏಳು ತಿಂಗಳ ಹಸುಗೂಸನ್ನು ದಟ್ಟ ಕಾಡಿನ ಪೊದೆಯೊಂದರಲ್ಲಿ ಎಸೆದು ಹೋಗಿರುವ ಅಮಾನವೀಯ ಘಟನೆ ಕುಂದಾಪುರ ತಾಲೂಕಿನ ಅಮಾಸೆಬೈಲು ಸಮೀಪದ ಮಚ್ಚಟ್ಟು ಬಳಿಯಲ್ಲಿ ನಡೆದಿದೆ. ಮಗುವನ್ನು ರಕ್ಷಿಸಿದ (Rescued Girl child) ಮಹಿಳೆಯ ಕಾರ್ಯಕ್ಕೆ ಇದೀಗ ಎಲ್ಲಡೆಯಿಂದಲೂ ಬಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

ಅಮಾಸೆಬೈಲು ಸಮೀಪದ ಮಚ್ಚಟ್ಟುವಿನ ಮಡುವಾಳಕಟ್ಟಿನ ನಿವಾಸಿಯಾಗಿರುವ ಗೀತಾ ಅವರು ಡೈರಿಗೆ ಹಾಲು ಕೊಡಲು ತೆರಳುತ್ತಿದ್ದರು. ಗ್ರಾಮದ ಸೇತುವೆಯ ಬಳಿಯಲ್ಲಿ ಬರುತ್ತಿದ್ದಂತೆಯೇ ರಸ್ತೆ ಬದಿಯ ಕಾಡಿನ ಪೊದೆಯಲ್ಲಿ ಮಗುವೊಂದು ಅಳುವ ಧ್ವನಿ ಕೇಳಿಬಂದಿದೆ. ಕೂಡಲೇ ಪೊದೆಯ ಬಳಿಗೆ ಬಂದು ನೋಡುವಾಗ ಹೆಣ್ಣು ಮಗವೊಂದು ಅಳುತ್ತಾ ಮಲಗಿತ್ತು. ಕೂಡಲೇ ಮಗುವನ್ನು ಎತ್ತಿಕೊಂಡು ಪೊಲೀಸ್‌ ಠಾಣೆಗೆ ತೆರಳಿದ್ದಾರೆ.

ಅಮಾಸೆಬೈಲು ಪೊಲೀಸ್‌ ಠಾಣೆಯ ಪಿಎಸ್‌ಐ ಅವರು ಕೂಡಲೇ ವೈದ್ಯರಿಂದ ಮಗುವನ್ನು ತಪಾಸಣೆ ನಡೆಸಿದ್ದಾರೆ. ಸದ್ಯ ಮಗು ಆರೋಗ್ಯವಾಗಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗುವನ್ನು ಕೊಲ್ಲುವ ಉದ್ದೇಶದಿಂದಲೇ ಕಾಡಿನ ಪೊದೆಯಲ್ಲಿ ಮಗುವನ್ನು ಎಸೆದು ಹೋಗಿರುವ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಗುವಿನ ಪೋಷಕರಿಗಾಗಿ ಹುಡುಕಾಟವನ್ನು ನಡೆಸುತ್ತಿದ್ದಾರೆ.

ಇತ್ತ ಮಗುವನ್ನು ಕಾಡಿನ ಪೊದೆಯಿಂದ ರಕ್ಷಿಸಿದ ಮಹಾತಾಯಿಯ ಕಾರ್ಯಕ್ಕೆ ಎಲ್ಲೆಡೆಯಿಂದಲೂ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೆತ್ತ ಮಗುವನ್ನು ಕಾಡಿನಲ್ಲಿ ಎಸೆದು ಹೋಗಿರುವ ಪಾಪಿಗಳ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ಪೊಲೀಸರು ಅನಾಥ ಮಗುವಿಗೆ ನ್ಯಾಯ ಒದಗಿಸಬೇಕಾಗಿದೆ.

ಇದನ್ನೂ ಓದಿ : ಗೋ ರಕ್ಷಕರ ಹತ್ಯೆ ಯತ್ನ ಪ್ರಕರಣ : ಆರೋಗ್ಯ ವಿಚಾರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ

ಇದನ್ನೂ ಓದಿ : BJP MLA ಹತ್ಯೆಗೆ ಸ್ಕೆಚ್‌ ಪ್ರಕರಣ : ಸ್ಪೋಟಕ ಸತ್ಯ ಬಿಚ್ಚಿಟ್ಟ ಶಾಸಕ ಎಸ್.ಆರ್.ವಿಶ್ವನಾಥ್‌

(A woman rescued Girl child who was in the bush in Amasebailu near Kundapur)

Comments are closed.