ಸೋಮವಾರ, ಜೂನ್ 16, 2025
HomebusinessPAN - Aadhaar Link : ಪಾನ್‌ - ಆಧಾರ್‌ ಲಿಂಕ್‌ ಮಾಡದಿದ್ರೆ 10 ಸಾವಿರ...

PAN – Aadhaar Link : ಪಾನ್‌ – ಆಧಾರ್‌ ಲಿಂಕ್‌ ಮಾಡದಿದ್ರೆ 10 ಸಾವಿರ ರೂ. ದಂಡ : UIDAI ಹೊಸ ಆದೇಶ

- Advertisement -

ನವದೆಹಲಿ : ದೇಶದ ನಾಗರಿಕರಿಗೆ ಸರಕಾರದಿಂದ ಹೊಸ ಆದೇಶ ಹೊರಬಿದ್ದಿದೆ. ಸರಕಾರದ ಈ ಆದೇಶವನ್ನು ಪಾಲಿಸದಿದ್ದಲ್ಲಿ ಭಾರೀ ನಷ್ಟವನ್ನು ಅನುಭವಿಸಬೇಕಾಗುತ್ತದೆ. (PAN – Aadhaar Link) ದೇಶದ ನಾಗರಿಕರು ತಮ್ಮ ಆಧಾರ್ ಅಪ್ಡೇಟ್ ಮಾಡಲು ನಿಮ್ಮಿಂದ ಯಾರಾದರೂ ಯಾವುದೇ ರೀತಿಯ ಶುಲ್ಕವನ್ನು ಕೇಳಿದರೆ, ಇದಕ್ಕಾಗಿ ಸಹಾಯವಾಣಿ ನಂಬರ್‌ನ್ನು ಜಾರಿ ಮಾಡಲಾಗಿದೆ.

ಟ್ವೀಟ್‌ನಲ್ಲಿ ಮಾಹಿತಿ ನೀಡಿದ UIDAI :
ಯಾವುದೇ ಏಜೆನ್ಸಿ ಆಧಾರ್ ಅಪ್‌ಡೇಟ್ ಮಾಡಲು ಹೆಚ್ಚುವರಿ ಶುಲ್ಕ ವಿಧಿಸಿದರೆ, ಅದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI)ಟ್ವೀಟ್ ಮೂಲಕ ತಿಳಿಸಿದೆ. ಇದಕ್ಕಾಗಿ ಆಧಾರ್ ಬಳಕೆದಾರರು 1947 ಗೆ ಕರೆ ಮಾಡಿ ಸಹಾಯ ಅಥವಾ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

ಯಾವುದೇ ಕೆಲಸ ಅಥವಾ ಸರಕಾರಿ ಯೋಜನೆಗಳಿಗೆ ಈಗ ಆಧಾರ್ ಪ್ರಮುಖವಾಗಿ ಬೇಕಾಗಿರುವ ದಾಖಲೆಯಾಗಿದೆ. ಹೀಗಾಗಿ ಎಲ್ಲಾ ದಾಖಲೆಗಳು ಮತ್ತು ಬ್ಯಾಂಕ್ ಖಾತೆಗಳಿಗೂ ಆಧಾರ್‌ನ್ನು ಕಡ್ಡಾಯವಾಗಿ ಲಿಂಕ್ ಮಾಡಬೇಕಾಗುತ್ತದೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಕೂಡಾ ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಇದೀಗ ಮಾರ್ಚ್ 31,2023 ರೊಳಗೆ ಪಾನ್ ಕಾರ್ಡ್ ಮತ್ತು ಆಧಾರ್ ಲಿಂಕ್ ಮಾಡಲು ಕೊನೆಯ ದಿನಾಂಕವಾಗಿದೆ. ಈ ದಿನಾಂಕದೊಳಗೆ ಪ್ಯಾನ್ ಆಧಾರ್‌ ಲಿಂಕ್ ಮಾಡದೆ ಹೋದರೆ ಪಾನ್ ನಿಷ್ಕ್ರಿಯವಾಗುತ್ತದೆ.

ಇದನ್ನೂ ಓದಿ : 7th Pay Commission Update : ಸರಕಾರಿ ನೌಕರರಿಗೆ ಗುಡ್ ನ್ಯೂಸ್‌ : . 2 ಲಕ್ಷ ರೂ. ಬಾಕಿ ಡಿಎ ಬಿಡುಗಡೆಗೆ ಡೇಟ್ ಫಿಕ್ಸ್‌

ಇದನ್ನೂ ಓದಿ : Post Office New Offer : ಇಂಡಿಯನ್ ಪೋಸ್ಟ್ ನಿಂದ ಭರ್ಜರಿ ಆಫರ್ : ವಿವಾಹಿತರ ಖಾತೆಗೆ 59,400 ರೂ.ಜಮಾ

ಇದನ್ನೂ ಓದಿ : Children’s Mutual Funds : ಚೈಲ್ಡ್‌ ಮ್ಯೂಚುವಲ್‌ ಫಂಡ್‌ ಬಗ್ಗೆ ನಿಮಗೆ ಗೊತ್ತಾ; ನಿಮ್ಮ ಮಕ್ಕಳ ಭವಿಷ್ಯವನ್ನು ಹೀಗೆ ಸುರಕ್ಷಿತಗೊಳಿಸಿ

ಪಾನ್‌ಗೆ ಆಧಾರ್‌ ಲಿಂಕ್‌ ಮಾಡದಿದ್ದಲ್ಲಿ 10,000 ರೂಪಾಯಿ ದಂಡ :
ದೇಶದ ನಾಗರಿಕರು ತಮ್ಮ ಪಾನ್ ಮತ್ತು ಆಧಾರ್ ಲಿಂಕ್‌ನ್ನು ಮಾರ್ಚ್ 31, 2023 ರವರೆಗೆ ಮಾಡಬಹುದು. ಈ ಎರಡು ದಾಖಲೆಗಳನ್ನು ಲಿಂಕ್ ಮಾಡದೆ ಹೋದರೆ ಪಾನ್ ನಿಷ್ಕ್ರಿಯವಾಗುತ್ತದೆ. ಒಮ್ಮೆ ಪಾನ್ ಕಾರ್ಡ್ ನಿಷ್ಕ್ರಿಯವಾದರೆ ನಂತರ ಬ್ಯಾಂಕ್‌ನಲ್ಲಿ ಖಾತೆ ತೆರೆಯುವುದರಿಂದ ಹಿಡಿದು ಯಾವುದೇ ರೀತಿಯ ಹಣಕಾಸಿನ ವಹಿವಾಟು ನಡೆಸುವುದು ಸಾಧ್ಯವಾಗುವುದಿಲ್ಲ. ಒಂದು ವೇಳೆ ನಿಷ್ಕ್ರಿಯವಾದ ಪಾನ್ ಕಾರ್ಡ್ ಅನ್ನು ಬಳಸಿದರೆ ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 272B ಅಡಿಯಲ್ಲಿ 10,000 ರೂ.ವರೆಗೆ ದಂಡ ವಿಧಿಸಬಹುದು.

PAN – Aadhaar Link : If PAN – Aadhaar is not linked, Rs. 10 thousand. Penalty : UIDAI New Order

RELATED ARTICLES

Most Popular