Padavi Poorva Release Date : ಡಿಸೆಂಬರ್ 30ಕ್ಕೆ ತೆರೆಗೆ ಬರಲಿದೆ ಯೋಗರಾಜ್‌ ಭಟ್ ನಿರ್ಮಾಣದ “ಪದವಿ ಪೂರ್ವ” ಸಿನಿಮಾ

ಸ್ಯಾಂಡಲ್‌ವುಡ್‌ನಲ್ಲಿ ಯೋಗರಾಜ್‌ ಭಟ್‌ ನಿರ್ಮಾಣ ಮಾಡಿರುವ ಹೊಸ ಸಿನಿಮಾ “ಪದವಿ ಪೂರ್ವ”. (Padavi Poorva Release Date) ಈಗಾಗಲೇ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ನಮ್ಮ ಕಾಲೇಜು ದಿನಗಳನ್ನು ನೆನಪು ಮಾಡುತ್ತಿದೆ. ಡಿ.30 ಸಿನಿಮಾ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಪದವಿ ಪೂರ್ವ ನೆನಪುಗಳ ಜೊತೆ ಟೀಸರ್ ರಿಲೀಸ್ ಮಾಡಿದ ನವರಸನಾಯಕ ಜಗ್ಗೇಶ್ ಒಂದಷ್ಟು ಇಂಟ್ರಸ್ಟಿಂಗ್ ವಿಚಾರ ಹಂಚಿಕೊಂಡಿದ್ದಾರೆ. ಜಗ್ಗೇಶ್ ತಮ್ಮ ಟೀನೇಜ್ ದಿನಗಳನ್ನು ನೆನಸಿಕೊಂಡು ರಿಲೀಸ್ ಮಾಡಿದ “ಪದವಿ ಪೂರ್ವ” ಟೀಸರ್ ಇದೀಗ ಸಖತ್ ಸದ್ದು ಮಾಡುತ್ತಿದೆ.

ನಿಮ್ಮ ಪಿಯು ದಿನಗಳನ್ನು ನೆನಪಿಸೋ ಪದವಿ ಪೂರ್ವ ಸಿನಿಮಾದ ಟೀಸರ್ ರಿಲೀಸ್ ಅಗಿದೆ. ಭಟ್ರು ಬೆಲ್ ಹೊಡೆದು ಹೇಳೋಕೆ ಹೊರಟಿರೋ ಪೀಪಿ ನವೀನ ಹಾಗೂ ನಿತ್ಯಾ ಲವ್ ಸ್ಟೋರಿ ಈ ಕಾಲದಲ್ಲ 90ರ ದಶಕದ್ದು. ಈ ಸಿನಿಮಾದಲ್ಲಿ ಕಾಲೇಜು ನಾವ್ ಮಾಡಿಕೊಂಡ ಲವ್ವು, ಡವ್ವು ಅವಾಂತರಗಳನ್ನು ಫ್ಲ್ಯಾಶ್ ಬ್ಯಾಕ್‌ಗೆ ಹೋಗಿ ಹೇಳೋ ಕಥೆಯೇ ಪದವಿ ಪೂರ್ವ. ಅದರ ಟೀಸರ್‌ನಲ್ಲೇ ಒಂದು ಮಜಾ ಇದೆ. ಆ ಮಜಾ ಟೀಸರ್ ಈಗ ಲಹರಿ ಮ್ಯೂಸಿಕ್ ನ ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಆಗಿದೆ. ಡಿಜಿಟಲ್ ದುನಿಯಾದಿಂದ ವಾಪಸ್ ಹಳೆಯ ಕಾಲಕ್ಕೆ ಕರ್ಕೊಂಡು ಹೋಗ್ತಿರೋ ಸಿನಿಮಾ ಇದೇ ಡಿಸೆಂಬರ್ 30ಕ್ಕೆ ತೆರೆಗೆ ಬರಲಿದೆ.

ಪದವಿ ಪೂರ್ವ ಟೀಸರ್ ನೋಡಿ ಸಿನಿಮಾ ನೋಡಲು ಫ್ಯಾನ್ಸ್ ಕುತೂಹಲದಿಂದ ಕಾಯುತ್ತಿದ್ದಾರೆ. ಹೊಸ ಕಲಾವಿದರ ದಂಡೇ ಇರುವ ಈ ಸಿನಿಮಾಕ್ಕೆ ಹರಿಪ್ರಸಾದ್‌ ಜಯಣ್ಣ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ಯುವ ಪ್ರತಿಭೆ ಪೃಥ್ವಿ ಶಾಮನೂರು ನಾಯಕನಾದರೆ, ಅಂಜಲಿ ಅನೀಶ್‌ ಮತ್ತು ಯಶ ಶಿವಕುಮಾರ್‌ ನಾಯಕಿಯಾಗಿ ನಟಿಸಿದ್ದಾರೆ. ಯೋಗರಾಜ್ ಭಟ್ ಮೂವಿಸ್ ಹಾಗೂ ರವಿ ಶಾಮನೂರ್ ಫಿಲಮ್ಸ್ ಬ್ಯಾನರ್ ನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ.

ಇದನ್ನೂ ಓದಿ : Nepotism: ಡಾಲಿ ಧನಂಜಯ್ ವಿರುದ್ಧ ನೆಪೋಟಿಸಂ ಆರೋಪ: ಪ್ರೇಮ್ ಪುತ್ರಿಗೆ ಅವಕಾಶ ನೀಡಿದ್ದಕ್ಕೆ ನೆಟ್ಟಿಗರು ಗರಂ

ಇದನ್ನೂ ಓದಿ : Anushka Sharma Qala Look : ರೆಟ್ರೊ ಸ್ಟೈಲ್‌ನಲ್ಲಿ ಅನುಷ್ಕಾ ಶರ್ಮಾ : ಸಖತ್‌ ವೈರಲ್‌ ಆದ ಖಾಲಾ ಲುಕ್

ಇದನ್ನೂ ಓದಿ : Kantara Hindi OTT : “ಕಾಂತಾರ” ಹಿಂದಿ ಓಟಿಟಿ ರಿಲೀಸ್‌ ಡೇಟ್ಸ್‌ ಫಿಕ್ಸ್‌ : ನೆಟ್‌ಫ್ಲಿಕ್ಸ್‌ಗೆ ಲಗ್ಗೆ ಇಟ್ಟ ಕನ್ನಡದ ಮೊದಲ ಸಿನಿಮಾ

ಈ ಸಿನಿಮಾಗೆ ಹರಿಪ್ರಸಾದ್ ಜಯಣ್ಣ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪೃಥ್ವಿ ಶಾಮನೂರ್, ಅಂಜಲಿ ಅನೀಶ್, ಯಶ ಶಿವಕುಮಾರ್ ಜೊತೆಗೆ ದೊಡ್ಡ ಯಂಗೇಜ್ ಹುಡುಗರ ಗ್ಯಾಂಗ್ ತುಂಬಿರೋ ಬಹು ತಾರಾಗಣ ಈ ಸಿನಿಮಾಕ್ಕೆ ಇದೆ. ಇವರ ಜೊತೆಗೆ ಅದಿತಿ ಪ್ರಭುದೇವಾ, ದಿವ್ಯಾ ಉರುಡುಗ, ನಯನ ವಿಶೇಷ ಪಾತ್ರ ಹಾಗೂ ರಂಗಾಯಣ ರಘು, ಶರತ್ ಲೋಹಿತಾಶ್ವ ಸೇರಿದಂತೆ ದೊಡ್ಡ ಪೋಷಕ ನಟರ, ಕಾಮಿಡಿ ಕಿಲಾಡಿಗಳ ಮೇಳವೂ ಇದೆ. ಸದ್ಯ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ನಾಳೆಯಿಂದಲೇ ಸಿನಿತಂಡ ಸಿನಿಮಾ ಪ್ರಚಾರದ ಸಲುವಾಗಿ ರಾಜ್ಯದ ಮೂಲೆ ಮೂಲೆಯ ಕಾಲೇಜುಗಳಿಗೆ ತೆರಳಲಿದೆ.

Padavi Poorva Release Date: Yogaraj Bhat’s “Padavi Poorva” will hit the screens on December 30.

Comments are closed.