ಬೆಂಗಳೂರು: Janardhan Reddy: ರಾಜ್ಯ ರಾಜಕೀಯಕ್ಕೆ ಮತ್ತೆ ಎಂಟ್ರಿ ಕೊಡಲು ತಯಾರಿ ಮಾಡಿಕೊಳ್ಳುತ್ತಿದ್ದ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಗೆ ರಾಜಕೀಯ ಹಾದಿ ಸುಗಮವಾಗಿದೆ. ಅವರ ಮೇಲಿದ್ದ ಅಕ್ರಮ ಆಸ್ತಿ ಗಳಿಕೆಯ 4 ಪ್ರಕರಣಗಳು ರದ್ದುಗೊಂಡಿದ್ದು, ಬಿಗ್ ರಿಲೀಫ್ ಸಿಕ್ಕಂತಾಗಿದೆ. ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ 4 ಕೇಸ್ ಗಳನ್ನು ರದ್ದು ಮಾಡಿದೆ.
ಜನಾರ್ಧನ್ ರೆಡ್ಡಿ ಅವರು ಬೇನಾಮಿ ಆಸ್ತಿ ಗಳಿಕೆ ಮಾಡಿದ್ದಾರೆ ಎಂದು ಆರೋಪಿಸಿ 2009ರಲ್ಲಿ ಐಟಿ ಇಲಾಖೆಯಲ್ಲಿ 4 ಕೇಸ್ ಗಳು ದಾಖಲಾಗಿದ್ದವು.2021ರಲ್ಲಿ ಅದೇ 4 ಕೇಸ್ ಗಳು ಆದಾಯ ತೆರಿಗೆ ಇಲಾಖೆಯಲ್ಲಿ ದಾಖಲಾಗಿದ್ದವು. ಈ ಎಲ್ಲಾ ಕೇಸ್ ಗಳಲ್ಲೂ ಜನಾರ್ಧನ್ ರೆಡ್ಡಿ ಅವರು ಜಾಮೀನು ಪಡೆದಿದ್ದರು. ಜನಾರ್ದನ್ ರೆಡ್ಡಿ ಬೇನಾಮಿ ಆಸ್ತಿ ಮಾಡಿರುವುದಾಗಿ ಆರೋಪಿಸಿ 2009ರಲ್ಲಿ ಐಟಿ ಅಧಿಕಾರಿಗಳು 2016ರ ಬೇನಾಮಿ ವ್ಯವಹಾರ ನಿರ್ಬಂಧ ಕಾಯ್ದೆಯಡಿ ಕೇಸ್ ದಾಖಲಿಸಿದ್ದರು. ಆದರೆ ಸುಪ್ರೀಂಕೋರ್ಟ್ 2016ರ ಕಾಯ್ದೆಯನ್ನು 2009ರ ಕೃತ್ಯಕ್ಕೆ ಅನ್ವಯಿಸುವಂತಿಲ್ಲ ಎಂದು ತೀರ್ಪನ್ನು ನೀಡಿತ್ತು. ಈ ತೀರ್ಪನ್ನು ಆಧರಿಸಿ ಇದೀಗ ವಿಶೇಷ ಕೋರ್ಟ್ 4 ಕೇಸ್ ಗಳನ್ನು ಇತ್ಯರ್ಥಗೊಳಿಸಿದೆ.
ಇದನ್ನೂ ಓದಿ: Small saving schemes Interest Rate : ಸುಕನ್ಯಾ ಸಮೃದ್ಧಿಯಲ್ಲಿ ಹಣ ಹೂಡಿಕೆ ಮಾಡುವವರಿಗೆ ಸರಕಾರದಿಂದ ಗುಡ್ ನ್ಯೂಸ್
ಈವರೆಗೆ ಗಣಿ ಅಕ್ರಮದ ಆರೋಪದಿಂದಾಗಿ ರಾಜಕಾರಣದಿಂದ ದೂರ ಉಳಿದಿದ್ದ ಜನಾರ್ಧನ ರೆಡ್ಡಿ ಅವರಿಗೆ ಇದೀಗ ಪ್ರಕರಣದಿಂದ ರಿಲೀಫ್ ಸಿಕ್ಕಿದೆ. ಹೀಗಾಗಿ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳಲು ರೆಡಿಯಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿಯಿಂದಲೇ ರಾಜಕೀಯ ಮರಜನ್ಮ ಪಡೆಯಲು ತೀರ್ಮಾನಿಸಿರುವ ಅವರು, ಅಲ್ಲೇ ಬಿಡಾರ ಹೂಡಿದ್ದಾರೆ. ಅದೇ ಕಾರಣಕ್ಕೆ ಗಂಗಾವತಿಯಲ್ಲೇ ಭವ್ಯ ಬಂಗಲೆಯನ್ನು ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಟೆಂಪಲ್ ರನ್ ಸೇರಿದಂತೆ ರಾಜಕೀಯ ನಾಯಕರ ಮನೆಗಳಿಗೆ ಭೇಟಿ ನೀಡುವ ಮೂಲಕ ಸೆಕೆಂಡ್ ಇನ್ನಿಂಗ್ಸ್ ಗೆ ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ.
Janardhan Reddy: Janardhan Reddy’s four illegal property cases are closed by Special Court