ಬೆಂಗಳೂರು: (Ravindra Jadeja)ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಮುಂದಿನ ವರ್ಷ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಮರಳುವ ವಿಶ್ವಾಸದಲ್ಲಿದ್ದಾರೆ.ಕಳೆದ ಏಷ್ಯಾ ಕಪ್ ಟಿ20 ಟೂರ್ನಿಯ ವೇಳೆ ಪಾದದ ಗಾಯಕ್ಕೊಳಗಾಗಿದ್ದ ರವೀಂದ್ರ ಜಡೇಜಾ, ಏಷ್ಯಾ ಕಪ್ ನಂತರ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಅಲಭ್ಯರಾಗಿದ್ದ ಜಡೇಜ, ಸದ್ಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲೂ ಆಡುತ್ತಿಲ್ಲ.ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳದ ರವೀಂದ್ರ ಜಡೇಜ, ಹೊಸ ಗೆಟಪ್’ನಲ್ಲಿ ಕಾಣಿಸಿಕೊಂಡಿದ್ದಾರೆ.
(Ravindra Jadeja)ದಕ್ಷಿಣ ಭಾರತ ಶೈಲಿಯ ಪಂಚೆ-ಶಲ್ಯ ಮತ್ತು ಬಿಳಿ ಶರ್ಟ್’ನಲ್ಲಿ ಕಾಣಿಸಿಕೊಂಡಿರುವ ರವೀಂದ್ರ ಜಡೇಜಾ ಆ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲ “ಟೇಸ್ಟ್ ಆಫ್ ಸೌತ್, ತಮಿಳ್ ಲವ್” ಎಂದು ಬರೆದುಕೊಂಡಿದ್ದಾರೆ. ಜಡೇಜ ಅವರ ಹೊಸ ಗೆಟಪ್’ಗೆ ಕ್ರಿಕೆಟ್ ಪ್ರಿಯರು ಕ್ಲೀನ್ ಬೌಲ್ಡಾಗಿದ್ದಾರೆ.
Taste of South💛 #Tamillove pic.twitter.com/sTl4aWb2in
— Ravindrasinh jadeja (@imjadeja) December 13, 2022
ಇತ್ತೀಚೆಗಷ್ಟೇ ರವೀಂದ್ರ ಜಡೇಜ ಗುಜರಾತ್ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಜಡೇಜ ಅವರ ಪತ್ನಿ ರಿವಾಬ ಜಡೇಜ ಗುಜರಾತ್’ನ ಜಾಮ್’ನಗರ ಉತ್ತರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಪತ್ನಿಯ ಪರ ಪ್ರಚಾರ ನಡೆಸಿದ್ದ ರವೀಂದ್ರ ಜಡೇಜ ಜಾಮ್’ನಗರದಲ್ಲಿ ರೋಡ್ ಶೋ ಕೂಡ ನಡೆಸಿದಿದ್ದರು. ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದ ಜಡೇಜ ಪತ್ನಿ ಶಾಸಕಿಯಾಗಿ ಆಯ್ಕೆಯಾಗಿದ್ದರು.
ಇದನ್ನೂ ಓದಿ:Arjun Tendulkar Ranaji Century : ಅಪ್ಪನಂತೆ ಮಗ.. ರಣಜಿ ಪದಾರ್ಪಣೆಯಲ್ಲೇ ಅರ್ಜುನ್ ತೆಂಡೂಲ್ಕರ್ ಶತಕ
ಇದನ್ನೂ ಓದಿ:Winter And Sesame Seeds : ಚಳಿಗಾಲದಲ್ಲಿ ಎಳ್ಳನ್ನು ಬಳಸುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ…
ಕಳೆದ ಮೂರೂವರೆ ತಿಂಗಳುಗಳಿಂದ ಕ್ರಿಕೆಟ್’ನಿಂದ ದೂರವಿರುವ ರವೀಂದ್ರ ಜಡೇಜ ಮುಂದಿನ ವರ್ಷ ನಡೆಯುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೂಲಕ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಮುಂದಿನ ಐಪಿಎಲ್’ನಲ್ಲಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿರುವ 34 ವರ್ಷದ ರವೀಂದ್ರ ಜಡೇಜ, ದಿಗ್ಗಜ ನಾಯಕ ಮಹೇಂದ್ರ ಸಿಂಗ್ ಧೋನಿ ಅವರೊಂದಿಗೆ ಮತ್ತೆ ಆಡುವುದನ್ನು ಎದುರು ನೋಡುತ್ತಿದ್ದೇನೆ ಎಂದಿದ್ದರು. ಅಷ್ಟೇ ಅಲ್ಲ, CSk ತಂಡದಲ್ಲಿ ಧೋನಿ ಜೊತೆಗಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು.
Ravindra Jadeja Team India all-rounder Ravindra Jadeja shone in South India’s Panche-Shalya