sandblasting: ದ.ಕನ್ನಡ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಮರಳುಗಾರಿಕೆಗೆ ಅನುಮತಿ: ಜಿಲ್ಲಾಧಿಕಾರಿ ರವಿಕುಮಾರ್‌ ಆದೇಶ

ಮಂಗಳೂರು: (sandblasting) ದ.ಕನ್ನಡ ಜಿಲ್ಲೆಯಲ್ಲಿ ಸಿಆರ್ ಝೆಡ್‌ ಹಾಗೂ ಸಿಆರ್‌ಝೆಡೇತರ ವಲಯದಲ್ಲಿ ಕಾನೂನುಬದ್ಧವಾಗಿ ಮರಳುಗಾರಿಕೆಗೆ ನಡೆಸುವುದಕ್ಕಾಗಿ ಅರ್ಹ ಗುತ್ತಿಗೆದಾರರಿಗೆ ಅನುಮತಿ ಆದೇಶ ನೀಡಲಾಗುವುದು ಎಂದು ದ.ಕ ಜಿಲ್ಲಾಧಿಕಾರಿ ರವಿಕುಮಾರ್‌ ತಿಳಿಸಿದ್ದರು. ಇದೀಗ ದ.ಕ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಮರಳುಗಾರಿಕೆಗೆ ಅನುಮತಿ ಸಿಕ್ಕಿದ್ದು, ಜಿಲ್ಲಾಧಿಕಾರಿ ರವಿಕುಮಾರ್‌ ಆದೇಶ ಹೊರಡಿಸಿದ್ದಾರೆ.

ಸಿಆರ್‌ಜೆಡ್‌ ವಲಯದಲ್ಲಿ ನೇತ್ರಾವತಿ ಮತ್ತು ಫಲ್ಗುಣಿ ನದಿಗಳಲ್ಲಿ ಮರಳು ದಿಬ್ಬ ತೆರವುಗೊಳಿಸಲು ಜಿಲ್ಲಾಡಳಿತವು 14 ಕಡೆ ಸ್ಥಳಗಳನ್ನು ಗುರುತಿಸಿತ್ತು. ಅಲ್ಲಿ ಸಾಂಪ್ರದಾಯಿಕವಾಗಿ ಮರಳುಗಾರಿಕೆಗೆ (sandblasting) ಅನುಮತಿ ನೀಡಲು ಜಿಲ್ಲಾಡಳಿತವು ಮೇ ತಿಂಗಳಲ್ಲಿ ಟೆಂಡರ್‌ ಅನ್ನು ಕರೆದಿತ್ತು. ಒಟ್ಟು 287 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ 200 ಅರ್ಜಿಗಳನ್ನು ಗುರುತಿಸಲಾಗಿದ್ದು, 148 ಮಂದಿಗೆ ಪರವಾನಗಿಯನ್ನೂ ನೀಡಲಾಗಿತ್ತು. ಸಿಆರ್‌ಜೆಡ್‌ ವಲಯದಲ್ಲಿ ತೆಗೆಯುವ ಮರಳನ್ನು ಮಾರಾಟ ಮಾಡುವಂತಿಲ್ಲ. ನದಿ ದಂಡೆಯ ತಗ್ಗುಪ್ರದೇಶಗಳನ್ನು ಭರ್ತಿ ಮಾಡುವುದಕ್ಕೆ ಹಾಗೂ ಕಿನಾರೆಗಳಲ್ಲಿ ಮರಳು ಪೋಷಣೆಗೆ ಮಾತ್ರ ಆ ಮರಳನ್ನು ಬಳಸಬಹುದು ಎಂದು ಹಸಿರು ನ್ಯಾಯ ಮಂಡಳಿಯ ಚೆನ್ನೈ ಪೀಠವು ಮೇ 18ರಂದು ಆದೇಶ ಮಾಡಿತ್ತು. ಇದರ ಅನ್ವಯ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸಿಆರ್‌ಜೆಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆಯನ್ನು ನಿರ್ಬಂಧಿಸಿ ಆಗಿನ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಆದೇಶ ಮಾಡಿದ್ದರು.

ಮರಳುಗಾರಿಕೆಗೆ ಜಿಲ್ಲಾಡಳಿತದ ನಿರ್ಬಂಧ ಹೇರಿದ್ದನ್ನು ಕೆಲವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಜಿಲ್ಲಾಡಳಿತ ವಿಧಿಸಿದ್ದ ನಿರ್ಬಂಧವನ್ನು ಹೈಕೋರ್ಟ್‌ ವಜಾಗೊಳಿಸಿದೆ. ಹೈಕೋರ್ಟ್‌ ತೀರ್ಪಿನ ಪ್ರಕಾರ ಸಿಆರ್‌ಜೆಡ್‌ ವ್ಯಾಪ್ತಿಯಲ್ಲೂ ಸಾಂಪ್ರದಾಯಿಕ ಮರಳುಗಾರಿಕೆಗೆ ಅವಕಾಶ ಕಲ್ಪಿಸಲು ಏಳು ಮಂದಿ ಸದಸ್ಯರ ಸಮಿತಿಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ಹಿಂದೆ ಸಿಆರ್‌ಜೆಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಗುರುತಿಸಿದ್ದ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ಮುಂದುವರಿಸುವುದಕ್ಕೆ ಅವಕಾಶ ಕಲ್ಪಿಸಲು ಸಮಿತಿ ಅನುಮತಿ ನೀಡಿದೆ. ನೇತ್ರಾವತಿ ಹಾಗೂ ಫಲ್ಗುಣಿ ನದಿಗಳಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ನಡೆಸಲು ಅನುಮತಿ ಸಿಕ್ಕಿದ್ದು, ಮುಂದಿನ ವಾರದಿಂದಲೇ ಅಧಿಕೃತ ಮರಳು ಪೂರೈಕೆ ಆರಂಭವಾಗಲಿದೆ ಎಂದು ದ.ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್‌ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ : VastuDosha for congress office: ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ವಾಸ್ತು ದೋಷ : ಪರಿಹಾರಕ್ಕೆ ಮೊರೆ ಹೋದ ನಾಯಕರು

ಇದನ್ನೂ ಓದಿ : ಕೋಟ: ಹೃದಯಾಘಾತದಿಂದ 30 ವರ್ಷದ ಮಹಿಳೆ ಸಾವು

ಮರಳುಗಾರಿಕೆಗೆ ಯಂತ್ರಗಳನ್ನು ಬಳಕೆ ಮಾಡುವಂತಿಲ್ಲ. ಸಾಂಪ್ರದಾಯಿಕವಾಗಿ ನಡೆಸಲು ಮಾತ್ರ ಅವಕಾಶ ನೀಡಲಾಗುವುದು ಹಾಗೂ ಪಾರಂಪರಿಕ ಕಾರ್ಮಿಕರಿಗೆ ಮಾತ್ರ ಅವಕಾಶಗಳನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

(sandblasting) In Kannada District, District Collector Ravikumar said that permission will be given to qualified contractors for carrying out sandblasting legally in CRZ and non-CRZ zones. Now permission has been given for traditional sandblasting in D.K. District, Collector Ravikumar has issued an order.

Comments are closed.