ಸೋಮವಾರ, ಏಪ್ರಿಲ್ 28, 2025
HomeWorldCorona in China : ಚೀನಾದಲ್ಲಿ ಕೊರೊನಾ ಆರ್ಭಟ : ಶವಗಳಿಂದಾಗಿ ಸ್ಮಶಾನಗಳು ಭರ್ತಿ !

Corona in China : ಚೀನಾದಲ್ಲಿ ಕೊರೊನಾ ಆರ್ಭಟ : ಶವಗಳಿಂದಾಗಿ ಸ್ಮಶಾನಗಳು ಭರ್ತಿ !

- Advertisement -

ಬೀಜಿಂಗ್‌ : ಚೀನಾದಲ್ಲಿ ಕೋವಿಡ್‌ ನಿರ್ಬಂಧಗಳನ್ನು ಸಡಿಲಿಸಿದ ನಂತರ ಕರೋನಾ ವೈರಸ್‌ (Corona in China) ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಚೀನಾದಲ್ಲಿ ಆಸ್ಪತ್ರೆಗಳು ಸಂಪೂರ್ಣವಾಗಿ ತುಂಬಿ ಹೋಗಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಆರೋಗ್ಯ ಅರ್ಥಶಾಸ್ತ್ರಜ್ಞ ಎರಿಕ್‌ ಫೀಗಲ್‌ ಡಿಂಗ್‌ ವರದಿ ಮಾಡಿದ್ದಾರೆ.

ಮುಂದಿನ 90 ದಿನಗಳಲ್ಲಿ ಶೇಕಡಾ 60 ಕ್ಕಿಂತ ಹೆಚ್ಚು ಮತ್ತು ವಿಶ್ವದ ಜನಸಂಖ್ಯೆಯ 10 ಪ್ರತಿಶತದಷ್ಟು ಜನರು ಸೋಂಕಿಗೆ ಒಳಾಗಾಗುವ ಸಾಧ್ಯತೆಯಿದೆ. ಇದರಿಂದ ಲಕ್ಷಾಂತರ ಜನರು ಸಾವನ್ನಪ್ಪಿರುತ್ತಾರೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ಚೀನಾದ ರಾಜಧಾನಿಯಲ್ಲಿ ಕರೋನಾ ವ್ಯಾಪಕವಾಗಿ ಹರಡಿದ್ದು, ಕೋವಿಡ್‌ ರೋಗಿಗಳಿಗಾಗಿ ಬೀಜಿಂಗ್‌ನಲ್ಲಿ ಗೊತ್ತುಪಡಿಸಲಾಗಿರುವ ಸ್ಮಶಾನವು ಇತ್ತೀಚಿನ ದಿನಗಳಲ್ಲಿ ಮೃತದೇಹಗಳಿಂದ ತುಂಬಿದೆ. ಇದು ದೇಶದಲ್ಲಿ ಕರೋನಾ ಸಾಂಕ್ರಾಮಿಕ ನಿರ್ಬಂಧಗಳ ಹಠಾತ್‌ ಸಡಿಲಗೊಳಿಸುವಿಕೆ ನಿರ್ಧಾರದ ಪರಿಣಾಮ ಎಂದು ವಾಲ್‌ ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿದ್ದಾರೆ.

ಬೀಜಿಂಗ್‌ನಲ್ಲಿ ಮೃತದೇಹಗಳಿಂದ ತುಂಬಿದ ಸ್ಮಶಾನಗಳು :
ನವೆಂಬರ್ 19 ಮತ್ತು 23 ರ ನಡುವೆ ಅಧಿಕಾರಿಗಳು ನಾಲ್ಕು ಸಾವುಗಳನ್ನು ಘೋಷಿಸಿದಾಗಿನಿಂದ ಚೀನಾ ಬೀಜಿಂಗ್‌ನಲ್ಲಿ ಯಾವುದೇ ಕೋವಿಡ್ ಸಾವುಗಳನ್ನು ವರದಿ ಮಾಡಿಲ್ಲ. ಚೀನಾದ ರಾಜಧಾನಿಯ ಪೂರ್ವ ಅಂಚಿನಲ್ಲಿರುವ ಬೀಜಿಂಗ್‌ ಡೊಂಗ್‌ ಜಿಯಾವೋ ಸ್ಮಶಾನವು ಶವ ಸಂಸ್ಕಾರ ಮತ್ತು ಇತರ ಅಂತ್ಯಕ್ರಿಯೆಯ ಸೇವೆಗಳಲ್ಲಿ ಹೆಚ್ಚಳವಾಗಿರುವುದನ್ನು ಕಂಡುಕೊಂಡಿದೆ. ಅಲ್ಲಿ ಕೆಲಸ ಮಾಡುವವರನ್ನು ಉಲ್ಲೇಖಿಸಿದ್ದಾರೆ. “ಕರೋನಾ ಸೋಂಕು ಪುನರಾರಂಭವಾದಾಗಿನಿಂದ, ನಮಗೆ ಕೆಲಸದಿಂದ ಬಿಡುವು ಸಿಗುತ್ತಿಲ್ಲ ದಿನದಬ 24 ಗಂಟೆಗಳು ಕೆಲಸ ಮಾಡುತ್ತಿದ್ದೇವೆ” ಎಂದು ಸ್ಮಶಾನದಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ಹೇಳಿದ್ದಾರೆ.

ಬೀಜಿಂಗ್ ಮುನ್ಸಿಪಾಲಿಟಿ ಸ್ಮಶಾನವು ಮುಂಜಾನೆಯಿಂದ ಮಧ್ಯರಾತ್ರಿಯವರೆಗೂ ಶವಸಂಸ್ಕಾರಗಳನ್ನು ನಡೆಸುತ್ತಿದೆ. ಬೀಜಿಂಗ್ ಪುರಸಭೆಯಿಂದ ನಿರ್ವಹಿಸಲ್ಪಡುವ ಮತ್ತು ಕೋವಿಡ್-ಪಾಸಿಟಿವ್ ಪ್ರಕರಣಗಳನ್ನು ನಿರ್ವಹಿಸಲು ರಾಷ್ಟ್ರೀಯ ಆರೋಗ್ಯ ಆಯೋಗವು ಗೊತ್ತುಪಡಿಸಿದ ಡೊಂಗ್ಜಿಯಾವೊ ಸ್ಮಶಾನವು ಹಲವಾರು ದೇಹಗಳನ್ನು ಬರುತ್ತಿದೆ ಅದು ಮುಂಜಾನೆ ಮತ್ತು ಮಧ್ಯರಾತ್ರಿಯಲ್ಲಿ ಕೂಡ ಅಂತ್ಯಕ್ರಿಯೆಗಳನ್ನು ನಡೆಸಲಾಗುತ್ತಿದೆ ಎಂದು ಮಹಿಳೆ ಹೇಳಿದರು.

ಇದನ್ನೂ ಓದಿ : ನೋಯ್ಡಾದಲ್ಲಿ ಐಶ್ವರ್ಯಾ ರೈ ಬಚ್ಚನ್ ನಕಲಿ ಪಾಸ್‌ಪೋರ್ಟ್ ಪತ್ತೆ: ಮೂವರ ಬಂಧನ

ಇದನ್ನೂ ಓದಿ : Toxic Spinach :ಹುಷಾರ್ : ಪಾಲಕ್ ಸೊಪ್ಪು ತಿಂದು ಆಸ್ಪತ್ರೆ ಸೇರಿದ ಸಾವಿರಾರು ಜನರು

ಇದನ್ನೂ ಓದಿ :Assault on student: ವಿದ್ಯಾರ್ಥಿನಿಗೆ ಕತ್ತರಿಯಿಂದ ಹಲ್ಲೆ ನಡೆಸಿ, ಶಾಲಾ ಮಹಡಿಯಿಂದ ಎಸೆದ ಶಿಕ್ಷಕಿ ಅರೆಸ್ಟ್

ಸ್ಮಶಾನಕ್ಕೆ ಪ್ರತಿ ದಿನ ಸುಮಾರು 200 ದೇಹಗಳು ಬರುತ್ತಿದೆ ಎಂದು ಅಂದಾಜಿಸಿದ್ದಾರೆ. ಒಂದು ಸಾಮಾನ್ಯ ದಿನದಲ್ಲಿ 30 ಅಥವಾ 40 ದೇಹಗಳು ಬರುತ್ತಿದ್ದು, ಈಗ ಇದು ಹೆಚ್ಚಾಗಿದೆ. ಇನ್ನೂ ಇಲ್ಲಿ ಕೆಲಸ ಮಾಡುವವರು ವೇಗವಾಗಿ ಹರಡುವ ಕರೋನಾಕ್ಕೆ ಭಯಪಡುತ್ತಿರುವುದನ್ನು ವ್ಯಕ್ತಪಡಿಸಿದ್ದಾರೆ. ಶವ ಸಂಸ್ಕಾರದ ಸಭಾಂಗಣದ ಜೊತೆಗೆ ಉಡುಪುಗಳು, ಹೂವುಗಳು, ಪಟ್ಟೆಗೆಗಳು, ಚಿತಾಭಸ್ಮಗಳು ಮತ್ತು ಇತರ ಅಂತ್ಯಕ್ರಿಯೆ ಸಂಬಂಧಪಟ್ಟ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳ ಸಂಖ್ಯೆಗಳು ಕೂಡ ಶವದೊಂದಿಗೆ ಏರಿಕೆ ಆಗುತ್ತಿದೆ ಎಂದು ತಿಳಿಸಿದ್ದಾರೆ.

Corona in China: Corona outbreak in China: Cemeteries are full due to corpses!

RELATED ARTICLES

Most Popular