Lionel Messi: ಟ್ರೋಫಿಯೊಂದಿಗೆ ಮಲಗಿದ ಫುಟ್​ಬಾಲ್​ ದಿಗ್ಗಜ ಲಿಯೋನೆಲ್​ ಮೆಸ್ಸಿ : ಫೋಟೋ ವೈರಲ್​

Lionel Messi: ಫುಟ್​​ಬಾಲ್​ ಲೋಕದ ದಿಗ್ಗಜ ಲಿಯೋನೆಲ್​ ಮೆಸ್ಸಿ ನೇತೃತ್ವದ ಅರ್ಜೆಂಟೈನಾ ತಂಡವು ಫಿಫಾ ವಿಶ್ವಕಪ್​​ ಪ್ರಶಸ್ತಿಯನ್ನು ಮೂರನೇ ಬಾರಿಗೆ ಮುಡಿಗೇರಿಸಿಕೊಳ್ಳುವ ಮೂಲಕ ಫುಟ್​ಬಾಲ್​ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಫಿಫಾ ವರ್ಲ್ಡ್​ ಕಪ್​ ಪಂದ್ಯದ ಬಳಿಕ ಲಿಯೋನೆಲ್​ ಮೆಸ್ಸಿ ಫುಟ್​ಬಾಲ್​​ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ ಈ ಎಲ್ಲಾ ವದಂತಿಗಳನ್ನು ಲಿಯೋನೆಲ್​ ಮೆಸ್ಸಿ ತಳ್ಳಿ ಹಾಕಿದ್ದು ಫುಟ್​ಬಾಲ್​ ಆಟದಲ್ಲಿ ತಾನು ಮುಂದುವರಿಯುತ್ತೇನೆಂದು ಹೇಳಿದ್ದು ಅಭಿಮಾನಿಗಳಿಗೆ ಬಿಗ್​ ರಿಲೀಫ್​ ಸಿಕ್ಕಂತಾಗಿದೆ.


ಇನ್ನು ಫಿಫಾ ವಿಶ್ವಕಪ್​ ಪಂದ್ಯವನ್ನು ಗೆದ್ದ ಬಳಿಕ ಕಪ್​​ನ ಜೊತೆಗಿನ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಲಿಯೋನೆಲ್​ ಮೆಸ್ಸಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಲಿಯೋನೆಲ್​ ಮೆಸ್ಸಿ ಫಿಫಾ ವರ್ಲ್ಡ್​ ಕಪ್​ ಟ್ರೋಫಿಯ ಜೊತೆಯಲ್ಲಿ ಮಲಗಿರೋದನ್ನು ಕಾಣಬಹುದಾಗಿದೆ.


ತಾವು ಹಂಚಿಕೊಂಡಿರುವ ಫೋಟೋಗಳಿಗೆ ಲಿಯೋನೆಲ್​ ಮೆಸ್ಸಿ ಸ್ಪ್ಯಾನಿಷ್​ ಭಾಷೆಯಲ್ಲಿ ಗುಡ್​ ಮಾರ್ನಿಂಗ್​ ಎಂದು ಶೀರ್ಷಿಕೆಯನ್ನು ನೀಡಿದ್ದಾರೆ. ಒಂದು ಫೋಟೋದಲ್ಲಿ ಟ್ರೋಫಿಯ ಜೊತೆಯಲ್ಲಿ ಮೆಸ್ಸಿ ಮಲಗಿರೋದನ್ನು ಕಾಣಬಹುದಾಗಿದೆ. ಮತ್ತೊಂದು ಫೋಟೋದಲ್ಲಿ ಅವರು ಹಾಸಿಗೆಯಲ್ಲಿ ಮಲಗಿ ಟ್ರೋಫಿಯನ್ನು ತಬ್ಬಿಕೊಂಡಿದ್ದಾರೆ. ಅಂದಹಾಗೆ ಈಗಾಗಲೇ ಅವರು ಟ್ರೋಫಿಯ ಜೊತೆಗಿನ ಸಾಕಷ್ಟು ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ಫೋಸ್ಟ್​​ ಹಂಚಿಕೊಂಡ ಕೇವಲ ಒಂದು ಗಂಟೆಗಳ ಒಳಗಾಗಿ 2.6 ಮಿಲಿಯನ್​ಗೂ ಅಧಿಕ ಲೈಕ್ಸ್​ ಸಂಪಾದಿಸಿದೆ. ಇದರ ಜೊತೆಯಲ್ಲಿ ಲಕ್ಷಕ್ಕೂ ಅಧಿಕ ಮಂದಿ ಈ ಫೋಟೋಗೆ ಕಮೆಂಟ್​ನ ಸುರಿಮಳೆಯನ್ನೇ ಹರಿಸಿದ್ದಾರೆ. ಅನೇಕ ಜಗತ್ತಿನ ರಾಜ ನೀವು ಎಂದು ಹೇಳಿದ್ದರೆ ಇನ್ನೂ ಕೆಲವರು ಫುಟ್​ಬಾಲ್​ ಲೋಕದಲ್ಲಿ ನಿಮಗಿಂತ ಶ್ರೇಷ್ಠ ಆಟಗಾರ ಮತ್ತೊಬ್ಬರಿಲ್ಲ ಎಂದಿದ್ದಾರೆ.

ಇದನ್ನು ಓದಿ : Corona in China : ಚೀನಾದಲ್ಲಿ ಕೊರೊನಾ ಆರ್ಭಟ : ಶವಗಳಿಂದಾಗಿ ಸ್ಮಶಾನಗಳು ಭರ್ತಿ !

ಇದನ್ನೂ ಓದಿ : Sachin Tendulkar Fans: ವಿಮಾನವೇರಿದ ಸಚಿನ್ ತೆಂಡೂಲ್ಕರ್‌ಗೆ ಕಾದಿದ್ದು ಅಚ್ಚರಿ.. ಕಾರಣವೇನು ಗೊತ್ತೇ?

Lionel Messi sleeps embracing the World Cup trophy, shares other pics too. Instagram post goes viral

Comments are closed.