ಕೊಚ್ಚಿ: ಐಪಿಎಲ್ 2023 ಆಟಗಾರರ ಹರಾಜು ( IPL 2023 Players Auction) ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಇಂಗ್ಲೆಂಡ್’ನ ಯುವ ಆಲ್ರೌಂಡರ್ ಸ್ಯಾಮ್ ಕರನ್ (Sam Curran) ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಮೊತ್ತಕ್ಕೆ ಮಾರಾಟವಾದ ಆಟಗಾರನೆಂಬ ದಾಖಲೆ ಬರೆದಿದ್ದಾರೆ.
ಆಸ್ಟ್ರೇಲಿಯಾ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ (Cameron Green) ಐಪಿಎಎಲ್ ಇತಿಹಾಸದಲ್ಲೇ 2ನೇ ಗರಿಷ್ಠ ಮೊತ್ತಕ್ಕೆ (17.5 ಕೋಟಿ) ಮುಂಬೈ ಇಂಡಿಯನ್ಸ್ ತಂಡಕ್ಜೆ ಮಾರಾಟವಾಗಿದ್ದಾರೆ. ಇಂಗ್ಲೆಂಡ್ ಬೆನ್ ಸ್ಟೋಕ್ಸ್ (Ben Stokes) ಅವರನ್ನು 16.25 ಕೋಟಿ ಮೊತ್ತಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಖರೀದಿಸಿದೆ. ವೆಸ್ಟ್ ಇಂಡೀಸ್’ನ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ನಿಕೋಲಸ್ ಪೂರನ್ (Nicholas Pooran) 16 ಕೋಟಿ ಮೊತಕ್ಕೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಾಗಿದ್ದಾರೆ.
ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ (Mayank Agarwal) ಅವರನ್ನು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ 8.24 ಕೋಟಿ ರೂ.ಗಳ ಮೊತ್ತಕ್ಕೆ ಖರೀದಿಸಿದೆ. ಕರ್ನಾಟಕದ ಮತ್ತೊಬ್ಬ ಆಟಗಾರ ಮನೀಶ್ ಪಾಂಡೆ 2.40 ಕೋಟಿ ಮೊತ್ತಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಸೇರಿದ್ದಾರೆ.
ಐಪಿಎಲ್ ಹರಾಜು: ಯಾವ ತಂಡಗಳಿಗೆ ಯಾರ್ಯಾರು ಸೇಲ್? (IPL 2023 Players Auction)
ಚೆನ್ನೈ ಸೂಪರ್ ಕಿಂಗ್ಸ್:
ಬೆನ್ ಸ್ಟೋಕ್ಸ್: 16.25 ಕೋಟಿ
ಕೈಲ್ ಜೇಮಿಸನ್: 1 ಕೋಟಿ
ಅಜಿಂಕ್ಯ ರಹಾನೆ: 50 ಲಕ್ಷ
ನಿಶಾಂತ್ ಸಿಂಧು: 60 ಲಕ್ಷ
ಶೇಖ್ ರಶೀದ್: 20 ಲಕ್ಷ
ಡೆಲ್ಲಿ ಕ್ಯಾಪಿಟಲ್ಸ್:
ಮುಕೇಶ್ ಕುಮಾರ್: 5.50 ಕೋಟಿ
ಮನೀಶ್ ಪಾಂಡೆ: 2.40 ಕೋಟಿ
ಫಿಲ್ ಸಾಲ್ಟ್: 2 ಕೋಟಿ
ಇಶಾಂತ್ ಶರ್ಮಾ: 50 ಲಕ್ಷ
ಗುಜರಾತ್ ಟೈಟನ್ಸ್:
ಶಿವಂ ಮಾವಿ: 6 ಕೋಟಿ
ಕೇನ್ ವಿಲಿಯಮ್ಸನ್: 2 ಕೋಟಿ
ಕೆ.ಎಸ್ ಭರತ್: 1.20 ಕೋಟಿ
ಒಡೇನ್ ಸ್ಮಿತ್: 50 ಲಕ್ಷ
ಕೋಲ್ಕತಾ ನೈಟ್ ರೈಡರ್ಸ್:
ಎನ್.ಜಗದೀಶನ್: 90 ಲಕ್ಷ
ವೈಭವ್ ಅರೋಕ: 50 ಲಕ್ಷ
ಲಕ್ನೋ ಸೂಪರ್ ಜೈಂಟ್ಸ್:
ನಿಕೋಲಸ್ ಪೂರನ್: 16 ಕೋಟಿ
ಡೇನಿಯಲ್ ಸ್ಯಾಮ್ಸ್: 75 ಲಕ್ಷ
ರೊಮೊರಿಯೊ ಶೆಫರ್ಡ್: 50 ಲಕ್ಷ
ಜೈದೇವ್ ಉನಾದ್ಕಟ್: 50 ಲಕ್ಷ
ಯಶ್ ಠಾಕೂರ್: 45 ಲಕ್ಷ
ಮುಂಬೈ ಇಂಡಿಯನ್ಸ್:
ಕ್ಯಾಮರೂನ್ ಗ್ರೀನ್: 17.5 ಕೋಟಿ
ಝಾಯ್ ರಿಚರ್ಡ್ಸನ್ 1.50 ಕೋಟಿ
ಪಂಜಾಬ್ ಕಿಂಗ್ಸ್:
ಸ್ಯಾಮ್ ಕರನ್: 18.50 ಕೋಟಿ
ಸಿಕಂದರ್ ರಾಜಾ: 50 ಲಕ್ಷ
ರಾಜಸ್ಥಾನ್ ರಾಯಲ್ಸ್:
ಜೇಸನ್ ಹೋಲ್ಡರ್: 5.75 ಕೋಟಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು:
ವಿಲ್ ಜೇಕ್ಸ್: 3.20 ಕೋಟಿ
ರೀಸೀ ಟಾಪ್ಲೇ: 1.90 ಕೋಟಿ
ಹಿಮಾನ್ಶು ಶರ್ಮಾ: 20 ಲಕ್ಷ
ಸನ್ ರೈಸರ್ಸ್ ಹೈದರಾಬಾದ್:
ಹ್ಯಾರಿ ಬ್ರೂಕ್: 13.25 ಕೋಟಿ
ಮಯಾಂಕ್ ಅಗರ್ವಾಲ್: 8.25 ಕೋಟಿ
ಹೆನ್ರಿಕ್ ಕ್ಲಾಸೆನ್: 5.25 ಕೋಟಿ
ವಿವ್ರಾಂತ್ ಶರ್ಮಾ: 2.60 ಕೋಟಿ
ಆದಿಲ್ ರಶೀದ್: 2 ಕೋಟಿ
ಮಯಾಂಕ್ ಮಾರ್ಕಂಡೆ: 50 ಲಕ್ಷ
ಉಪೇಂದ್ರ ಯಾದವ್: 25 ಲಕ್ಷ
ಸನ್ವೀರ್ ಸಿಂಗ್: 20 ಲಕ್ಷ
ಸಮರ್ಥ್ ವ್ಯಾಸ್: 20 ಲಕ್ಷ
ಇದನ್ನೂ ಓದಿ : IPL Auction Mayank Agarwal: 8.25 ಕೋಟಿ ಸನ್ ರೈಸರ್ಸ್ ಹೈದರಾಬಾದ್ ಪಾಲಾದ ಮಯಾಂಕ್ ಅಗರ್ವಾಲ್
ಇದನ್ನೂ ಓದಿ : IPL Auction Sam Curran: 18.5 ಕೋಟಿಗೆ ಸ್ಯಾಮ್ ಕರನ್ ಸೇಲ್, ಗ್ರೀನ್‌ಗೆ 17.5 ಕೋಟಿ, ಸ್ಟೋಕ್ಸ್‌ಗೆ 16.25 ಕೋಟಿ
IPL 2023 Players Auction Which players are sold to which teams ? Here is the complete list