ವಿಜಯಪುರ: (Siddeshwara swamiji health) ಕಳೆದ 10ದಿನಗಳಿಂದ ನಡೆದಾಡುವ ದೇವರು ಎಂದು ಪ್ರಸಿದ್ದರಾದ ಜ್ಞನ ಯೋಗಾಶ್ರಮ ಶ್ರೀ ಸಿದ್ದೇಶ್ವರ ಶ್ರೀಗಳ ಆರೋಗ್ಯ ಕುರಿತು ಹಲವು ವದಂತಿಗಳು ಸಾಮಾಜಿಕ ತಾಣ, ಸಾರ್ವಜನಿಕರಲ್ಲಿ ಹರಿದಾಡುತ್ತಿತ್ತು. ಈ ಹಿನ್ನಲೆಯಲ್ಲಿ ಶ್ರೀಗಳ ಆರೋಗ್ಯದ ಬಗ್ಗೆ ನಾಲ್ಕು ಗಂಟೆಗಳಿಗೊಮ್ಮೆ ವರದಿಗಳನ್ನೊಪ್ಪಿಸುತ್ತಿದ್ದು, ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಅವರನ್ನು ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ.
ಇದೀಗ ಶ್ರೀಗಳನ್ನು ಪರೀಕ್ಷಿಸಿದ ಡಾ. ಮಲ್ಲಣ ಮೂಲಮನಿ ಅವರು, ” ಶ್ರೀಗಳ ಆರೋಗ್ಯ(Siddeshwara swamiji health)ದ ಬಗ್ಗೆ ಆತಂಕ ಬೇಡ. ಶ್ರೀಗಳು ಎರಡು ಬಾರಿ ಗಂಜಿ ಕುಡಿದಿದ್ದಾರೆ. ಹೆಚ್ಚಾಗಿ ಆಹಾರ ಸೇವನೆ ಮಾಡಲು ಒಪ್ಪುತ್ತಿಲ್ಲ. ಅವರ ಆರೋಗ್ಯದಲ್ಲಿ ಚೇತರಿಕೆಯಾಗಿದೆ. ಯಾಊ ಕೂಡ ಆತಂಕ ಪಡುವ ಅಗತ್ಯವಿಲ್ಲ.” ಎಂದಿದ್ದಾರೆ.
ಶ್ರೀಗಳ ಆರೋಗ್ಯದ ಕುರಿತು ವದಂತಿಗಳು ಹರಿದಾಡಿದ ಹಿನ್ನಲೆಯಲ್ಲಿ ಜಿಲ್ಲೆ ಹಾಗೂ ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತರು ತಂಡೋಪತಂಡವಾಗಿ ಜ್ಞಾನ ಯೋಗಾಶ್ರಮಕ್ಕೆ ಆಗಮಿಸಿದ್ದರು. ಶ್ರೀಗಳಿಗೆ ವಿಶ್ರಾಂತಿಯ ಅಗತ್ಯವಿದ್ದು, ನಿಗದಿತ ಸಮಯದಲ್ಲಿ ದಿನಕ್ಕೆ ಎರಡು ಬಾರಿ ಫೇಸ್ ಬುಕ್, ಯೂಟ್ಯೂಬ್ ಲೈವ್ನಲ್ಲಿ ಶ್ರೀಗಳ ದರ್ಶನ ಪ್ರಸಾರ ಮಾಡುತ್ತೇವೆ. ಯಾರು ಅವರನ್ನು ನೇರವಾಗಿ ನೋಡಬೇಕೆಂದು ಆಶ್ರಮದ ಬಳಿ ಬರಬೇಡಿ ಎಂದು ಮನವಿ ಮಾಡಿದ್ದರೂ ಕೂಡ ಜನರು ಆಶ್ರಮದತ್ತ ಬರುತ್ತಿದ್ದಾರೆ.
ಸರಳತೆ, ಉತ್ತಮ ನಡವಳಿಕೆ ಮೂಲಕವೇ ಭಕ್ತರ ಮನದಲ್ಲಿ ನೆಲೆಸಿರುವ ಸಿದ್ದೇಶ್ವರ ಶ್ರೀಗಳು ನಡೆದಾಡುವ ದೇವರು ಎಂತಲೇ ಕರೆಯಿಸಿಕೊಳ್ಳುತ್ತಾರೆ. ಅಪರೂಪದ ತತ್ವಜ್ಞಾನಿಯಾದ ಇವರು ಬದುಕಿನ ಸೂಕ್ಷ್ಮತೆಯನ್ನು ನಿಖರವಾಗಿ, ಸ್ಪಷ್ಟವಾಗಿ ತಿಳಿದುಕೊಂಡಿದ್ದಾರೆ. ಸಾಮಾನ್ಯ ಮನುಷ್ಯನ ಸಮಸ್ಯೆಗಳಿಗೆ ಸರಳವಾಗಿ ಪರಿಹಾರ ಕೊಟ್ಟವರು. ಪ್ರತಿಯೊಬ್ಬರನ್ನು ಪ್ರೀತಿ ವಿಶ್ವಾಸದಿಂದ ಕಂಡ ಒಂದು ಅದ್ಭುತ ಶಕ್ತಿ ಅವರು.
ಇದನ್ನೂ ಓದಿ : Break for New year: ಹೊಸ ವರ್ಷಾಚರಣೆಗೆ ಬ್ರೇಕ್: ನಂದಿಗಿರಿಧಾಮಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ
ಇದನ್ನೂ ಓದಿ : Pancharatna Yatra: ಎರಡು ಹೊಸ ದಾಖಲೆ ಬರೆದ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಪಂಚರತ್ನ ಯಾತ್ರೆ
The doctor who examined him said that he has been giving reports about his health every four hours and that there has been a recovery in his health.