ಉಡುಪಿ : Karnataka Bank Sankranthi Sambharam : ಕರ್ಣಾಟಕ ಬ್ಯಾಂಕ್ ಮಕರ ಸಂಕ್ರಾಂತಿಯ ಹಿನ್ನೆಲೆಯಲ್ಲಿ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಹಿನ್ನೆಲೆಯಲ್ಲಿಂದು ಉಡುಪಿಯಲ್ಲಿ ಚಾಲ್ತಿ, ಉಳಿತಾಯ ಹಾಗೂ ಮೌಲ್ಯವರ್ಧಿತ ಸೇವೆಗಳ ಅಭಿಯಾನವನ್ನು ಹಮ್ಮಿಕೊಂಡಿತ್ತು.
ಉಡುಪಿ ನಗರದ ಕಿನ್ನಿಮೂಲ್ಕಿಯಲ್ಲಿನ ಕರ್ಣಾಟಕ ಬ್ಯಾಂಕ್ ಪ್ರಾದೇಶಿಕ ಕಚೇರಿಯಿಂದ ಹೊರಟ ಜಾಥಾವು ಚಿತ್ತರಂಜನ್ ಸರ್ಕಲ್ ನಲ್ಲಿ ಕೊನೆಗೊಂಡಿತು. ಜನರಿಗೆ ಜನವರಿ 6 ರಿಂದ 13 ರ ವರೆಗೆ ಸಾಲ ಸೌಲಭ್ಯಗಳ ಮೇಲೆ ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತಿದೆ. ಗೃಹ ಮತ್ತು ಕಾರುಗಳ ಸಾಲಗಳ ಬಡ್ಡಿದರಗಳ ಮೇಲೆ ಶೇಕಡಾ 0.25 ರಷ್ಟು ಹೆಚ್ಚುವರಿ ವಿನಾಯಿತಿ, ಕಾರು ಸಾಲ ಸಂಸ್ಕರಣಾ ವೆಚ್ಚದ ಮೇಲೆ ಶೇ.50ರಷ್ಟು ರಿಯಾಯಿತಿ ಹಾಗೂ ಗೃಹಸಾಲಗಳ ಮೇಲೆ ಶೇ.0 ರಷ್ಟು ಸಂಸ್ಕರಣಾ ವೆಚ್ಚದಲ್ಲಿ ರಿಯಾಯಿತಿಯನ್ನು ನೀಡಲಾಗುತ್ತಿದೆ.

ಜಾಥಾದಲ್ಲಿ ಕರ್ಣಾಟಕ ಬ್ಯಾಂಕ್ ಉಡುಪಿಯ ಪ್ರಾದೇಶಿಕ ಆಯುಕ್ತ ರಾಜಗೋಪಾಲ್ ಬಿ, ಉಡುಪಿಯ ಚೀಪ್ ಮ್ಯಾನೇಜರ್ ಚಕ್ರಪಾಣಿ ವಿವಿ, ಕರ್ನಾಟಕ ಬ್ಯಾಂಕಿನ ವಿಶ್ವನಾಥ್ ಅರುಣ್ ಕುಮಾರ್ ಪ್ರದೀಪ್ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ : EPFO Website Down : ಇಪಿಎಫ್ಒ ಚಂದಾದಾರರಿಗೆ ಇ-ಪಾಸ್ ಬುಕ್ ಸೌಲಭ್ಯದಲ್ಲಿ ವ್ಯತ್ಯಯ
ಇದನ್ನೂ ಓದಿ : ಸುಕನ್ಯಾ ಸಮೃದ್ಧಿ ಯೋಜನೆ : ವರ್ಷಕ್ಕೆ 250 ರೂ. ಹೂಡಿಕೆ, ಪಡೆಯಿರಿ 1.5 ಲಕ್ಷ ರೂ.
Karnataka Bank Sankranthi Sambharam Current Savings Account Campaign in Udupi