Rahul Dravid health problem : ರಾಹುಲ್ ದ್ರಾವಿಡ್’ಗೆ BP ಪ್ರಾಬ್ಲಮ್, ಟೀಮ್ ಇಂಡಿಯಾ ಕ್ಯಾಂಪ್ ತೊರೆದು ಬೆಂಗಳೂರಿಗೆ ಬಂದ ಕೋಚ್

ಬೆಂಗಳೂರು: ಟೀಮ್ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ (Rahul Dravid) ಆರೋಗ್ಯ ಸಮಸ್ಯೆಯ ಕಾರಣ ಟೀಮ್ ಇಂಡಿಯಾ ಕ್ಯಾಂಪ್ ತೊರೆದು ಬೆಂಗಳೂರಿಗೆ (Rahul Dravid health problem) ಮರಳಿದ್ದಾರೆ.ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಗುರುವಾರ ನಡೆದ ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದ ವೇಳೆ ದ್ರಾವಿಡ್ ರಕ್ತದೊತ್ತಡ ಸಮಸ್ಯೆಯಿಂದ ಬಳಲಿದ್ದರು. ಹೀಗಾಗಿ ಬಂಗಾಳ ಕ್ರಿಕೆಟ್ ಸಂಸ್ಥೆಯ ವೈದ್ಯರು ದ್ರಾವಿಡ್ ಅವರ ಆರೋಗ್ಯ ತಪಾಸಣೆ ನಡೆಸಿದ್ದರು.

ನಂತರ ದ್ರಾವಿಡ್ ಟೀಮ್ ಇಂಡಿಯಾ ಕ್ಯಾಂಪ್’ನಲ್ಲಿ ಕಾಣಿಸಿಕೊಂಡಿದ್ದರು. 2ನೇ ಏಕದಿನ ಪಂದ್ಯದಲ್ಲಿ 4 ವಿಕೆಟ್’ಗಳ ಗೆಲುವು ಸಾಧಿಸಿದ್ದ ಟೀಮ್ ಇಂಡಿಯಾ, 2 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಯೊಂದಿಗೆ ಸರಣಿ ಕೈವಶ ಮಾಡಿಕೊಂಡಿತ್ತು.ಶುಕ್ರವಾರ ಟೀಮ್ ಇಂಡಿಯಾ ಸದಸ್ಯರು 3ನೇ ಏಕದಿನ ಪಂದ್ಯಕ್ಕಾಗಿ ಕೋಲ್ಕತಾದಿಂದ ಕೇರಳದ ತಿರುವನಂತಪುರಂಗೆ ಪ್ರಯಾಣ ಬೆಳೆಸಿದ್ರೆ, ರಾಹುಲ್ ದ್ರಾವಿಡ್ ತವರು ನೆಲ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ. ಬೆಳ್ಳಂ ಬೆಳಗ್ಗೆ ಕೋಲ್ಕತಾದಿಂದ ದ್ರಾವಿಡ್ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯ 3ನೇ ಹಾಗೂ ಅಂತಿಮ ಪಂದ್ಯ ಭಾನುವಾರ ತಿರುವನಂತಪುರಂ ಗ್ರೀನ್ ಫೀಲ್ಡ್ ಮೈದಾನದಲ್ಲಿ ನಡೆಯಲಿದೆ. ಆರೋಗ್ಯ ಸಮಸ್ಯೆಯಿಂದ ಬೆಂಗಳೂರಿಗೆ ವಾಪಸ್ಸಾಗಿರುವ ದ್ರಾವಿಡ್, ಬೆಂಗಳೂರಿನಲ್ಲಿ ಹೆಲ್ತ್ ಚೆಕಪ್ ನಡೆಸಿದ ನಂತರ ಶನಿವಾರ ತಿರುವನಂತಪುರಂನಲ್ಲಿ ಟೀಮ್ ಇಂಡಿಯಾ ಕ್ಯಾಂಪ್ ಸೇರಿಕೊಳ್ಳುವ ಸಾಧ್ಯತೆಯಿದೆ.ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ 216 ರನ್’ಗಳ ಟಾರ್ಗೆಟ್ ಬೆನ್ನಟ್ಟಿದ್ದ ಭಾರತ ಒಂದು ಹಂತದಲ್ಲಿ 86 ರನ್ನಿಗೆ 4 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಪೆವಿಲಿಯನ್ ಸೇರಿಕೊಂಡಿದ್ದರು.

ಇದನ್ನೂ ಓದಿ : Veda Krishnamurthy marriage : ತಾಯಿಯ ಜನ್ಮದಿನದಂದೇ ಪ್ರೀತಿಸಿದ ಹುಡುಗನ ರಿಜಿಸ್ಟರ್ ಮದುವೆಯಾದ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ

ಇದನ್ನೂ ಓದಿ : ನಾಳೆಯಿಂದ ಮಹಿಳಾ U19 ವಿಶ್ವಕಪ್; ಶೆಫಾಲಿ ವರ್ಮಾ ಸಾರಥ್ಯದ ಭಾರತಕ್ಕೆ ದಕ್ಷಿಣ ಆಫ್ರಿಕಾ ಮೊದಲ ಎದುರಾಳಿ

ಇದನ್ನೂ ಓದಿ : KL Rahul 50 ODI matches : 24 ವರ್ಷಗಳ ನಂತರ ಭಾರತ ಪರ 50 ಏಕದಿನ ಪಂದ್ಯಗಳನ್ನಾಡಿದ ಮೊದಲ ಕನ್ನಡಿಗ

ಭಾರತ 62 ರನ್ನಿಗೆ 3 ವಿಕೆಟ್ ಕಳೆದುಕೊಂಡಿದ್ದಾಗ 5ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದಿದ್ದ ಕನ್ನಡಿ ಕೆ.ಎಲ್ ರಾಹುಲ್ ಕೊನೆಯವರೆಗೂ ಅಜೇಯವಾಗಿ ನಿಂತು 103 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ ಅಜೇಯ 64 ರನ್ ಗಳಿಸಿ ಭಾರತವನ್ನು ಗೆಲುವಿನ ದಡ ಸೇರಿಸಿದ್ದರು. ರಾಹುಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಭಾರತ 43.2 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿ 4 ವಿಕೆಟ್’ಗಳ ಗೆಲುವಿನೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಸರಣಿ ಕೈವಶ ಮಾಡಿಕೊಂಡಿತ್ತು.

Rahul Dravid health problem : BP problem for Rahul Dravid, Coach left Team India camp and came to Bangalore

Comments are closed.