ಗುರುವಾರ, ಮೇ 1, 2025
HomebusinessSharechat layoff: ಶೇರ್‌ ಚಾಟ್‌ ನಲ್ಲೂ ಉದ್ಯೋಗ ಕಡಿತ: ಶೇ. 20 ರಷ್ಟು ಉದ್ಯೋಗಿಗಳ ವಜಾ

Sharechat layoff: ಶೇರ್‌ ಚಾಟ್‌ ನಲ್ಲೂ ಉದ್ಯೋಗ ಕಡಿತ: ಶೇ. 20 ರಷ್ಟು ಉದ್ಯೋಗಿಗಳ ವಜಾ

- Advertisement -

ನವದೆಹಲಿ: (Sharechat layoff) ಮೆಟಾ, ಟ್ವಿಟ್ಟರ್‌, ಅಮೆಜಾನ್‌ ಸೇರಿದಂತೆ ಹಲವು ಕಂಪನಿಗಳು ಈಗಾಗಲೇ ಉದ್ಯೋಗಿಗಳ ವಜಾಮಾಡುವ ಮೂಲಕ ಉದ್ಯೋಗಿಗಳಿಗೆ ಶಾಕ್‌ ನೀಡಿತ್ತು. ಅದರ ಜೊತೆ ಜೊತೆಗೆ ದೇಶೀಯ ಸಾಮಾಜಿಕ ಮಾಧ್ಯಮವಾದ ಶೇರ್‌ ಚಾಟ್‌ ಮತ್ತು ಶಾರ್ಟ್‌ ವಿಡಿಯೋ ಫ್ಲಾಟ್‌ ಫಾರ್ಮ್ನ ಮುಖ್ಯ ಸಂಸ್ಥೆ ತನ್ನ ಶೇಕಡಾ 20 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ.

ಮೆಟಾ, ಟ್ವಿಟ್ಟರ್‌, ಅಮೆಜಾನ್‌ ಸೇರಿದಂತೆ ಹಲವು ಕಂಪನಿಗಳು ಈಗಾಗಲೇ ಉದ್ಯೋಗಿಗಳ ವಜಾಮಾಡುವ ಮೂಲಕ ಉದ್ಯೋಗಿಗಳಿಗೆ ಶಾಕ್‌ ನೀಡಿತ್ತು. ವಜಾಗೊಳಿಸುವಿಕೆಯ ಬಿಸಿ ಈಗ ಶೇರ್ದೇ‌ ಚಾಟ್‌ ಗೂ ತಟ್ಟಿದೆ. ದೇಶೀಯ ಸಾಮಾಜಿಕ ಮಾಧ್ಯಮವಾದ ಶೇರ್‌ ಚಾಟ್‌ ಮತ್ತು ಶಾರ್ಟ್‌ ವಿಡಿಯೋ ಫ್ಲಾಟ್‌ ಫಾರ್ಮ್ನ ಮುಖ್ಯ ಮೊಹಲ್ಲಾ ಟೆಕ್ ತನ್ನ ಶೇಕಡಾ 20 ರಷ್ಟು ಉದ್ಯೋಗಿಗಳನ್ನು ವಜಾ(Sharechat layoff)ಗೊಳಿಸಿದೆ. ವರದಿಗಳ ಪ್ರಕಾರ, ಬೆಂಗಳೂರು ಮೂಲದ ಸಂಸ್ಥೆಯಲ್ಲಿ ಸುಮಾರು 500 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಅಲ್ಲದೆ ಕಳೆದ ವರ್ಷದ ಡಿಸೆಂಬರ್‌ ತಿಂಗಳಿನಲ್ಲಿ ಕಂಪನಿಯು ಕನಿಷ್ಠ ನೂರು ಮಂದಿ ಉದ್ಯೋಗಿಗಳನ್ನು ಕಡಿತಗೊಳಿಸಿತ್ತು.

ಈಗಿನ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಉದ್ಯೋಗಿಗಳ ವಜಾಗೊಳಿಸುವಿಕೆ ಅಗತ್ಯವಾಗಿತ್ತು. ಈ ಕಾರಣದಿಂದ ಶೇಕಡಾ 20 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಈಗಾಗಲೇ ಉದ್ಯೋಗಿಗಳಿಗೆ ಇಮೇಲ್‌ ಪ್ರವೇಶವನ್ನು ನಿಷ್ಕ್ರೀಯಗೊಳಿಸಲಾಗಿದೆ ಎಂದು ಸಚ್ದೇವ್‌ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ದಿಢೀರ್‌ ವಜಾ ಗೊಳಿಸುವ ಬಗ್ಗೆ ಸಾಕಷ್ಟು ಚರ್ಚಿಸಿದ್ದು, ಇದು ಪ್ರಾಯೋಗಿಕವಾಗಿ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸುವ ಏಕೈಕ ಪರಿಹಾರವಾಗಿದೆ. ನೀವೆಲ್ಲರೂ ಶೇರ್‌ ಚಾಟ್‌ ನ ಉತ್ತಮ ಹಿತಾಸಕ್ತಿಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೀರಿ ಎಂದು ನಾವು ನಂಬುತ್ತೇವೆ. ಆದರೆ ಸೂಕ್ಷ್ಮ ಕಂಪನಿಯ ಮಾಹಿತಿ ಮತ್ತು ನಮ್ಮ ಗ್ರಾಹಕರ ವೈಯಕ್ತಿಕ ಡೇಟಾದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮವನ್ನು ತೆಗೆದುಕೊಳ್ಳಬೇಕಾಗಿತ್ತು ಎಂದು ಶೇರ್‌ ಚಾಟ್‌ ನ ಸಿಇಒ ಸಚ್ದೇವ್‌ ಹೇಳಿದ್ದಾರೆ.

ಇದನ್ನೂ ಓದಿ : Gurugram road accident: ರಾಂಗ್‌ ಸೈಡಿನಲ್ಲಿ ಬಂದ ಪೊಲೀಸ್‌ ವಾಹನ ಕಾರಿಗೆ ಢಿಕ್ಕಿ: 6ತಿಂಗಳ ಮಗು ಸಾವು, 4 ಮಂದಿಗೆ ಗಾಯ

ಏರುತ್ತಿರುವ ಹಣದುಬ್ಬರ ಮತ್ತು ಕ್ಷೀಣಿಸುತ್ತಿರುವ ಆರ್ಥಿಕತೆಯ ಮಧ್ಯೆ ವೆಚ್ಚವನ್ನು ಕಡಿತಗೊಳಿಸಲು ಕಂಪನಿಗಳು ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ದುರ್ಬಲಗೊಳ್ಳುತ್ತಿರುವ ಆರ್ಥಿಕತೆಯನ್ನು ನಿಭಾಯಿಸಲು ಹೆಣಗಾಡುತ್ತಿದೆ.ಇನ್ನೂ ಕೆಲವು ಕಂಪನಿಗಳು ಇನ್ನು ಕೂಡ ಉದ್ಯೋಗಿಗಳ ವಜಾಗೊಳಿಸುವಿಕೆ ಮುಂದುವರಿಸಲಿದ್ದು, ಇನ್ನಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಬ್ಲೂಮ್‌ ಬರ್ಗ್‌ ವರದಿಯ ಪ್ರಕಾರ, 2024 ರ ಅಂತ್ಯದ ವೇಳೆಗೆ ಗಣನೀಯವಾಗಿ ಉದ್ಯೋಗಿಗಳ ಪುನರ್‌ ರಚನೆಯ ಗುರಿಯನ್ನು ಕಂಪನಿಗಳು ಹೊಂದಿದ್ದು, ಇನ್ನೂ ಕೆಲವು ಉದ್ಯೋಗಿಗಳ ವಜಾಗೊಳಿಸುವಿಕೆ ಸನ್ನಿಹಿತವಾಗಿದೆ.

ಇದನ್ನೂ ಓದಿ : 9 year girl raped: 9 ವರ್ಷದ ಬಾಲಕಿಯ ಮೇಲೆ ಇಬ್ಬರು ಅಪ್ರಾಪ್ತರಿಂದ ಅತ್ಯಾಚಾರ: ದೂರು ದಾಖಲು

ಇದನ್ನೂ ಓದಿ : Arecanut Price Decrease : ಅಡಿಕೆ ಬೆಲೆ ಕುಸಿತ, ಅತಂಕದಲ್ಲಿ ಬೆಳೆಗಾರರು

Sharechat layoff: Job cut in Sharechat too: Sh. 20% lay off of employees

RELATED ARTICLES

Most Popular