ಸಂಕ್ರಾಂತಿಯಂದು ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ಕೊಟ್ಟ ರಶ್ಮಿಕಾ ಮಂದಣ್ಣ

ಭಾರತ ವಿವಿಧ ಸಿನಿರಂಗಗಳಲ್ಲಿ ನಟಿ ರಶ್ಮಿಕಾ ಮಂದಣ್ಣ ನ್ಯಾಷನಲ್‌ ಕ್ರಶ್‌ (Makar Sankranti 2023) ಎಂದು ಗುರುತಿಸಿಕೊಂಡಿದ್ದಾರೆ. ಆದರೆ ಸ್ಯಾಂಡಲ್‌ವುಡ್‌ ಸಿನಿಪ್ರೇಕ್ಷಕರು ಮಾತ್ರ ಅದನ್ನು ಇಂದಿಗೂ ಒಪ್ಪಿಕೊಂಡಿಲ್ಲ. ರಶ್ಮಿಕಾ ಮಂದಣ್ಣ ತೆಲುಗು ಸಿನಿರಂಗ ಪ್ರವೇಶಿಸಿದ ಸ್ವಲ್ಪ ದಿನಗಳಲ್ಲೇ ನನಗೆ ಕನ್ನಡ ಬರುವುದಿಲ್ಲ ಎಂದು ನೀಡಿದ ಹೇಳಿಕೆ ರಶ್ಮಿಕಾ ಮೇಲೆ ಕನ್ನಡಿಗರಿಗೆ ಸಾಕಷ್ಟು ಆಕ್ರೋಶವನ್ನು ಹುಟ್ಟು ಹಾಕುವಂತೆ ಮಾಡಿದೆ. ಆದರೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಎಲ್ಲಾ ಭಾಷೆಗಳಲ್ಲಿ ಶುಭಾಶಯವನ್ನು ಹಂಚಿಕೊಂಡಿದ್ದು, ಅದರಲ್ಲಿ ಕನ್ನಡಕ್ಕೆ ಮೊದಲ ಪ್ರಾಶಸ್ತ್ಯವನ್ನು ಕೊಟ್ಟಿದ್ದಾರೆ. ಆದರೆ ನಟಿ ರಶ್ಮಿಕಾ ಮಂ ಟ್ರೋಲ್‌ ಆಗುವುದು ತಪ್ಪಿಲ್ಲ.

ಹೌದು, ಕರ್ನಾಟಕದಲ್ಲಿ ನಟಿ ರಶ್ಮಿಕಾ ಮಂದಣ್ಣಗೆ ದೊಡ್ಡ ಮಟ್ಟದ ವಿರೋಧ ಹುಟ್ಟುವಂತೆ ಮಾಡಿದ್ದು ಸ್ವತಃ ಆಕೆ ನೀಡಿದ ಹೇಳಿಕೆಗಳು. ತಮಿಳು ಸಿನಿಮಾವೊಂದರ ಪ್ರಮೋಷನ್ ವೇಳೆ ಕನ್ನಡ ಕೂಡ ಸರಿಯಾಗಿ ಬರುವುದಿಲ್ಲ ಎಂದು ಅರ್ಧಂಬರ್ಧ ತಮಿಳಿನಲ್ಲಿ ಹೇಳಿದ್ದ ನಟಿ ರಶ್ಮಿಕಾ ಮಂದಣ್ಣ ಸಾಲು ಮರದ ತಿಮ್ಮಕ್ಕ ಅವರಿಗೆ ಸನ್ಮಾನ ಮಾಡುತ್ತಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ನಿಮ್ಮದೇ ನಾಡಿನವರಾದ ಸಾಧಕಿ ಸಾಲುಮರದ ತಿಮ್ಮಕ್ಕನ ಬಗ್ಗೆ ಮಾತನಾಡಿ ಎಂದಾಗ ಮಾತನಾಡದೇ ನಿಂತಿದ್ದು, ಕನ್ನಡಿಗರಿಗೆ ಬೇಸರವನ್ನು ಮೂಡಿಸಿದ್ದರು.

ಅಷ್ಟೇ ಅಲ್ಲದೇ ಇನ್ಸ್ಟಾಗ್ರಾಮ್ ಲೈವ್ ಒಂದರಲ್ಲಿ ಕನ್ನಡ ಮಾತನಾಡಿ ಎಂದಾಗ ಕನ್ನಡ ಮಾತನಾಡ್ತೀನಿ, ಆದರೆ ಈಗ ಇಂಗ್ಲಿಷ್ ಸಾಕು ಎಂದೂ ಸಹ ರಶ್ಮಿಕಾ ಹೇಳಿಕೆ ನೀಡಿದ್ದರು. ಹೀಗೆ ರಾಜ್ಯ ಹಾಗೂ ಕನ್ನಡ ಭಾಷೆಗೆ ಸಂಬಂಧಿಸಿದಂತೆ ಹೇಳಿಕೆಗಳನ್ನು ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ರಶ್ಮಿಕಾ ಮಂದಣ್ಣ ತನಗೆ ಅವಕಾಶ ನೀಡಿದ ಕನ್ನಡದ ನಿರ್ಮಾಣ ಸಂಸ್ಥೆಯ ಹೆಸರನ್ನೂ ಸಹ ಹೇಳದೇ ಮತ್ತಷ್ಟು ಟ್ರೋಲ್ ಆಗಿದ್ದರು. ಹೀಗೆ ಕನ್ನಡವನ್ನು ತಿಳಿದೋ ಅಥವಾ ತಿಳಿಯದೆಯೋ ದೂರ ಇಟ್ಟಿದ್ದ ರಶ್ಮಿಕಾ ಮಂದಣ್ಣ ಇದೀಗ ಸಂಕ್ರಾಂತಿ ಪ್ರಯುಕ್ತ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಕನ್ನಡ ಬಳಸಿದ್ದಾರೆ.

ಇದನ್ನೂ ಓದಿ : ಸಂಕ್ರಾಂತಿ ಹಬ್ಬದಂದು ಕಿಚ್ಚ ಸುದೀಪ್‌ನಿಗೆ ವಿಶೇಷ ಉಡುಗೊರೆ ಕೊಟ್ಟ ಅರ್ಜುನ್‌ ಜನ್ಯ

ಇದನ್ನೂ ಓದಿ : “ಗೋಲ್ಡನ್‌ ಗ್ಲೋಬ್‌” ಬಳಿಕ ‘ಅತ್ಯುತ್ತಮ ವಿದೇಶಿ ಚಿತ್ರ’ ಪ್ರಶಸ್ತಿ ಬಾಚಿಕೊಂಡ ಆರ್‌ಆರ್‌ಆರ್

ಇದನ್ನೂ ಓದಿ : ವಿರಾಟ್ ಕೊಹ್ಲಿ ಸಂಚುರಿ ದಾಖಲೆ : ಸಂತಸ ವ್ಯಕ್ತಪಡಿಸಿದ ಪತ್ನಿ ಅನುಷ್ಕಾ ಶರ್ಮಾ

ಇದನ್ನೂ ಓದಿ : ಮಂಗಳೂರು ಕಡಲ ಕಿನಾರೆಯಲ್ಲಿ ಅರಳಿದ ಕಾಂತಾರ ಮರಳು ಶಿಲ್ಪ

ಇಷ್ಟು ದಿನಗಳ ಕಾಲ ಶುಭ ಕೋರುವಾಗ ಕನ್ನಡ ಬಳಸುವುದಿಲ್ಲ ಎಂಬ ಕಾರಣಕ್ಕೆ ಟ್ರೋಲ್ ಆಗುತ್ತಿದ್ದ ನಟಿ ರಶ್ಮಿಕಾ ಮಂದಣ್ಣ ಈ ಬಾರಿಯ ಸಂಕ್ರಾಂತಿ ಪ್ರಯುಕ್ತ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಎಲ್ಲಾ ಭಾಷೆಗಳಿಗಿಂತ ಮೊದಲು ಕನ್ನಡವನ್ನೇ ಮೊದಲು ಬಳಸಿದ್ದಾರೆ. ಸಂಕ್ರಾಂತಿಯ ಶುಭಾಶಯಗಳು ಎಂದು ಬರೆದುಕೊಂಡಿರುವ ರಶ್ಮಿಕಾ ಮಂದಣ್ಣ ಕನ್ನಡದ ಬಳಿಕ ತಮಿಳು, ತೆಲುಗು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲೂ ಸಹ ಶುಭ ಕೋರಿದ್ದಾರೆ.

Makar Sankranti 2023 : Rashmika Mandanna gives first preference to Kannada on Sankranti

Comments are closed.