ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈಗ ಪುಷ್ಪಗಳದ್ದೇ (Lalbagh Flower Show 2023) ವೈಭವ. ಸುಂದರವಾದ ವಿವಿಧ ಬಗೆಯ ಹೂವುಗಳ ಸುವಾಸನೆಯು ಎಲ್ಲಡೆ ಹರಡಿ ಲಾಲ್‌ಬಾಗ್‌ನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ. ಬೆಂಗಳೂರಿನ ಪ್ರಸಿದ್ಧ ಲಾಲ್‌ಬಾಗ್ ವಾರ್ಷಿಕ ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನವು ಇತಿಹಾಸವನ್ನು ಮರುಸೃಷ್ಟಿಸಿದೆ. ಪ್ರತಿ ವರ್ಷದಂತೆ ಐತಿಹಾಸಿಕ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಬೆಂಗಳೂರಿನಲ್ಲಿ ಪ್ರಾರಂಭವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಲಾಲ್‌ಬಾಗ್‌ನಲ್ಲಿ 213ನೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದರು. ಈ ವರ್ಣಮಯ ಸುಂದರ ಪುಷ್ಪಗಳ ಲೋಕಕ್ಕೆ ಭೇಟಿ ಕೊಡಲು ಸಾವಿರಾರು ಜನರು ಕಾಯುತ್ತಿದ್ದಾರೆ.
ಮುಖ್ಯಮಂತ್ರಿ @BSBommai ಅವರು ಇಂದು ತೋಟಗಾರಿಕೆ ಇಲಾಖೆ & ಮೈಸೂರು ಉದ್ಯಾನಕಲಾ ಸಂಘದ ವತಿಯಿಂದ ಲಾಲ್‌ಬಾಗ್ ಗಾಜಿನ ಮನೆಯಲ್ಲಿ ಆಯೋಜಿಸಿರುವ ಬೆಂಗಳೂರು ನಗರದ ಇತಿಹಾಸ ವಿಷಯಾಧಾರಿತದ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ-2023 ಉದ್ಘಾಟಿಸಿದರು.
— CM of Karnataka (@CMofKarnataka) January 20, 2023
ತೋಟಗಾರಿಕಾ ಸಚಿವ @MunirathnaMLA,ವಿಧಾನ ಪರಿಷತ್ ಸದಸ್ಯ ಟಿ. ಎ.ಶರವಣ ಇತರರು ಉಪಸ್ಥಿತರಿದ್ದರು pic.twitter.com/TrnncWim6M
ಈ ವರ್ಷದ ಥೀಮ್?
ಪ್ರತಿವರ್ಷ ಯಾವುದಾದರೂ ಒಂದು ವಿಷಯದ ಮೇಲೆ ಫಲಪುಷ್ಪ ಪ್ರದರ್ಶವನ್ನು ಏರ್ಪಡಿಸಲಾಗುತ್ತದೆ. ಅದರಂತೆಯೇ ಈ ವರ್ಷ ಬೆಂಗಳೂರಿನ 1500 ವರ್ಷಗಳ ಇತಿಹಾಸವನ್ನು ಹೇಳುವ ವಿಷಯ ಆಧರಿಸಿ ಫಲಪುಷ್ಪ ಪ್ರದರ್ಶನ ನಡೆಸಲಾಗುತ್ತಿದೆ. ಇದರಲ್ಲಿ ಬೆಂಗಳೂರಿನ ಇತಿಹಾಸ, ಬೆಳೆದು ಬಂದ ರೀತಿ ಎಲ್ಲವೂ ಪುಷ್ಪಗಳಲ್ಲಿ ಅರಳಲಿದೆ. ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನಕಲಾ ಸಂಘದ ವತಿಯಿಂದ ಆಯೋಜಿಸಲ್ಪಟ್ಟಿರುವ ಲಾಲ್‌ಬಾಗ್‌ನ ಫಲಪುಷ್ಪ ಪ್ರದರ್ಶನದಲ್ಲಿ ಮಣ್ಣಿನ ಕೋಟೆ, ಕೆಂಪೇಗೌಡ ಗೋಪುರಗಳು, ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ, ಹೈಕೋರ್ಟ್ ಕಟ್ಟಡ, ವೃಷಭಾವತಿ, ಬೇಗೂರು ಶಾಸನ, ವಿಧಾನ ಸೌಧ, ಬುಲ್ ಟೆಂಪಲ್ ಮತ್ತು ಬೆಂಗಳೂರು ಅರಮನೆಯ ಪ್ರತಿಕೃತಿಗಳನ್ನು ವೀಕ್ಷಿಸಬಹುದಾಗಿದೆ.
ಏನೇನು ವಿಶೇಷ ಇರಲಿದೆ?
2.5 ಲಕ್ಷ ಕ್ರಿಸಂಥಮಮ್ ಅನ್ನು ಬಳಸಿಕೊಂಡು ವಿವಿಧ ರೀತಿಯ ಬೃಹತ್ ಹೂವಿನ ಜಲಪಾತಗಳನ್ನು ನೋಡಬಹುದಾಗಿದೆ. ಇದಲ್ಲದೇ ಲಾಲ್‌ಬಾಗ್‌ನಲ್ಲಿ ಭಾರತದಾದ್ಯಂತ ಸಿಗುವ ಹೂವುಗಳನ್ನು, ಡಾರ್ಜಿಲಿಂಗ್‌ನ ಪ್ರಸಿದ್ಧ ಸಿಂಬಿಡಿಯಮ್ ಆರ್ಕಿಡ್‌ಗಳನ್ನು ವೀಕ್ಷಿಸಬಹುದಾಗಿದೆ.
ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ಕೊಡಲು ಬಯಸುವವರು ಈ ವಿಷಯವನ್ನು ಗಮನದಲ್ಲಿಟ್ಟುಕೊಳ್ಳಿ:
- ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನವು ಜನವರಿ 20 ರಿಂದ ಜನವರಿ 29 ರ ವರೆಗೆ ನಡೆಯಲಿದೆ.
- ಸಮಯ: ಬೆಳಿಗ್ಗೆ 9 ಗಂಟೆಯಿಂದ ಪ್ರಾರಂಭ.
- ಟಿಕೆಟ್ ದರ : ಸಾಮಾನ್ಯ ದಿನಗಳಲ್ಲಿ 70 ರೂಪಾಯಿ, ವೀಕೆಂಡ್‌ನಲ್ಲಿ 75 ರೂಪಾಯಿ ಮತ್ತು 12 ವರ್ಷದ ಒಳಗಿನ ಮಕ್ಕಳಿಗೆ ಎಲ್ಲಾ ದಿನಗಳಲ್ಲಿ 30 ರೂಪಾಯಿ ಆಗಿದೆ.
ಇದನ್ನೂ ಓದಿ : Kisan Credit Card : ಕೇಂದ್ರ ಬಜೆಟ್‌ಗೂ ಮೊದಲು ಸರಕಾರದಿಂದ ರೈತರಿಗೆ ಭರ್ಜರಿ ಗಿಫ್ಟ್
ಇದನ್ನೂ ಓದಿ : Best Superfoods : ಯಾವಾಗಲೂ ಫಿಟ್ ಆಗಿರಲು ಈ ಸೂಪರ್‌ಫುಡ್‌ಗಳು ನಿಮಗೆ ಸಹಾಯ ಮಾಡುತ್ತವೆ; ತಪ್ಪದೇ ಇವುಗಳನ್ನು ಸೇವಿಸಿ
(Lalbagh Flower Show 2023 began today. Chief Minister inaugurated a flower show)