ಬೆಳಗಾವಿ: (Ramesh jarakiholi press meet) ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಂದು ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದು, ಈ ವೇಳ ತಮ್ಮ ವಿರುದ್ದ ಸಿಡಿ ಷಡ್ಯಂತ್ರದ ಹಿಂದಿದ್ದ ಮಹಾನಾಯಕನ ಆಡಿಯೋ ರಿಲೀಸ್ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಇವರ ಇಂದಿನ ಸುದ್ದಿಗೋಷ್ಠಿ ಬಹಳ ಕುತೂಹೊಲ ಮೂಡಿಸಿದೆ.
ಇತ್ತೀಚೆಗಷ್ಟೇ ಸುದ್ದಿಗೋಷ್ಟಿ ನಡೆಸಿದ್ದ ರಮೇಶ್ ಜಾರಕಿಹೊಳಿ ಅವರು ಸಿಡಿ ಷಡ್ಯಂತರದ ಹಿಂದೆ ನಾಯಕರೊಬ್ಬರ ಕೈವಾಡವಿರುವುದರ ಬಗ್ಗೆ ಹೇಳಿದ್ದು, ತನ್ನ ಆಪ್ತ ಸ್ನೇಹಿತ ಅಂತ ಹೇಳುವುದರ ಮೂಲಕ ಷಡ್ಯಂತರ ಮಾಡಿರುವ ಬಗ್ಗೆ ಮಾತನಾಡಿದ್ದಾರೆ ಎಂದು ತಿಳಿಸಿದ್ದರು. ಸದ್ಯ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ತಮ್ಮ ವಿರುದ್ದ ಪ್ರಯೋಗಿಸಲಾದ ಸಿಡಿ ಷಡ್ಯಂತ್ರವನ್ನು ವಿರೋಧಿಗಳಿಗೆ ತಿರುಗು ಬಾಣವಾಗಿ ಬಳಕೆ ಮಾಡಲು ರಮೇಶ್ ಜಾರಕಿಹೊಳಿ ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.
ಸಿಡಿ ಪ್ರಕರಣದ ಸಂಬಂಧ ಯಾವುದೇ ದಾಖಲೆ ಬಿಡುಗಡೆ ಮಾಡಲ್ಲ
ಬೆಳಗಾವಿಯಲ್ಲಿ ಮಾಜಿ ಸಚಿವ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದ್ದು, ಇಲ್ಲಿ ಸಿಡಿ ಷಡ್ಯಂತ್ರದ ಹಿಂದಿರುವ ನಾಯಕನ ಯಾರೆಂಬುವ ಅಸಲಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಡಿಕೆಶಿ ವಿರುದ್ದ ರಮೇಶ್ ಜಾರಕಿಹೊಳಿ ಸಿಡಿದೆದ್ದಿದ್ದು, “ಕಳೆದ ಒಂದೂವರೆ ವರ್ಷದಿಂದ ನಾನು ಕಾಯುತ್ತಿದ್ದೇನೆ. ರಾಜಕಾರಣ ಮಾಡಲು ಡಿಕೆ ಶಿವಕುಮಾರ್ ನಾಲಾಯಕ್ಕು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಬಳಿ ನೂರ ಇಪ್ಪತ್ತೆಂಟು ಸಾಕ್ಷಿಗಳಿಗೆ, ಆದರೆ ಯಾವುದನ್ನು ಬಿಡುಗಡೆ ಮಾಡುವುದಿಲ್ಲ. ಎಲ್ಲವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೇಳುತ್ತೇನೆ.” ಎಂದು ಡಿಕೆಶಿ ವಿರುದ್ದ ಸಾಹುಕಾರ ಕಿಡಿ ಕಾರಿದ್ದಾರೆ.
ಅಲ್ಲದೇ ಸಿಡಿ ಷಡ್ಯಂತ್ರದ ಬಗ್ಗೆ ಮೌನ ಮುರಿದ ಜಾರಕಿಹೊಳಿ,” ಸಿಡಿ ಬಿಡುಗಡೆ ಮಾಡಿ ನನ್ನ ವೈಯಕ್ತಿಕ ಜೀವನವನ್ನು ಡಿಕೆಶಿ ಹಾಳು ಮಾಡಿದ್ದಾನೆ. ಒಬ್ಬ ಮಹಿಳೆ ಮೂಲಕ ತನ್ನನ್ನು ತೇಜೋವದೆ ಮಾಡಿದ್ದಾನೆ. ಮಾರ್ಚ್ ೨೧ ರಂದು ಸಿಡಿ ಬಿಡುಗಡೆ ಮಾಡಿ ನನ್ನ ಹೆಸರನ್ನು ಕೆಡಿಸಲು ಮುಂದಾದ,. ನಾನು ಯಾವುದೇ ತಪ್ಪು ಮಾಡದೇ ಇದ್ದರೂ ಇದನ್ನು ಒಪ್ಪಿಕೊಳ್ಳಬೇಕಾಯಿತು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ಬಿಡುಗಡೆ ಮಾಡಲ್ಲ.” ಎಂದಿದ್ದಾರೆ
ಡಿಕೆಶಿ, ರಮೇಶ್ ಜಾರಕಿಹೊಳಿ ನಡುವೆ ವೈಯಕ್ತಿಕ ಜಿದ್ದು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ ತಮ್ಮ ಹಾಗೂ ಡಿಕೆಶಿ ಮಧ್ಯೆ ಇರುವ ವೈಯಕ್ತಿಕ ಜಿದ್ದಿನ ಬಗ್ಗೆ ಕೂಡ ಮಾಹಿತಿ ಬಿಚ್ಚಿಟ್ಟಿದ್ದು, ” ನಾನು ಡಿಕೆಶಿ ಅಣ್ಣ ತಮ್ಮಂದಿರಂತಿದ್ದೆವು. ಬೆಳಗಾವಿಯ ಗ್ರಾಮಂತರ ಶಾಸಕಿಯಿಂದ ನಮ್ಮ ಸಂಬಂಧ ಹಾಳಾಯ್ತು” ಎಂಧು ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಹೇಳದೇ ಸಾಹುಕಾರ್ ಆರೋಪ ಮಾಡಿದ್ದಾರೆ. ಇನ್ನೂ ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ಯುವತಿ, ನರೇಶ್ ಸೇರಿದಂತೆ ಆರು ಮಂದಿಯನ್ನು ಬಂಧಿಸಿ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಸರಕಾರಕ್ಕೆ ಒತ್ತಾಯಿಸುವೆ. ನನ್ನಲ್ಲಿರುವ ಎಲ್ಲಾ ದಾಖಲೆಗಳನ್ನು ಸಿಬಿಐಗೆ ನೀಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ : ಪಿಎಂ ಮೋದಿ ಕುರಿತಾದ ಸಾಕ್ಷ್ಯಚಿತ್ರದ ಬಗ್ಗೆ ಸತ್ಯ ಬಿಚ್ಚಿಟ್ಟ ಸಿಎಂ ಬೊಮ್ಮಾಯಿ
ಒಂದೇ ಸಮಯದಲ್ಲಿ ರಾಜಕೀಯಕ್ಕೆ ಇರಳಿದ ಡಿಕೆಶಿ ಹಾಗೂ ಜಾರಕಿಹೊಳಿ
೧೯೮೫ ರಲ್ಲಿ ಜಾರಕಿಹೊಳಿ ಹಾಗೂ ಡಿಕೆಶಿ ಇಬ್ಬರು ರಾಜಕೀಯಕ್ಕೆ ಎಂಟ್ರಿ ನೀಡಿದ್ದರು. ನಾನು ಉದ್ಯಮ ನಡೆಸಿ ಈ ಹಂತಕ್ಕೆ ಬಂದಿದ್ದೇನೆ. ಆದರೆ ಡಿಕೆಶಿ ಕೋಟ್ಯಾಂತರ ಹಣ ಲೂಟಿ ಮಾಡಿ ಕೋಟ್ಯಾಂತರ ಹಣ ಮಾಡಿದ್ದಾನೆ. ಇಲ್ಲಿಂದಲೇ ನಮ್ಮ ಮಧ್ಯೆ ಜಿದ್ದು ಪ್ರಾರಂಭವಾಯ್ತು. ಇದೇ ಕಾರಣದಿಂದ ನಾನು ಕಾಂಗ್ರೆಸ್ ಬಿಡಲು ನಿರ್ಧರಿಸಿದೆ” ಎಂದಿದ್ದಾರೆ. ಅಲ್ಲದೇ ಪಕ್ಷ ಬಿಡುವ ವೇಳೆಯಲ್ಲಿ ಡಿಕೆಶಿ ದಂಪತಿ ತನ್ನ ಮನವೊಲಿಸಿದ್ದು, ಯಾವುದೇ ಕಾರಣಕ್ಕೂ ಪಕ್ಷ ಬಿಡದಂತೆ ಮನವೊಲಿಸಿದ್ದರು. ಇದಕ್ಕಾಗಿ ನಿನ್ನ ಪತಿ ಸರಿಯಿಲ್ಲ, ಹಾಗಾಗಿ ತಾನು ಪಕ್ಷ ತೊರೆಯುವುದಾಗಿ ಹೇಳಿದು, ಡಿಕೆಶಿ ಪತ್ನಿಗೆ ಹೇಳಿ ತಾನು ಕಾಂಗ್ರೆಸ್ ಪಕ್ಷವನ್ನು ತೊರೆದಿರುವುದಾಗಿ ಹೇಳಿದ್ದಾರೆ.
Ramesh jarakiholi press meet: Ramesh jarakiholi important press meet: the revelation of the spiced leader