ರಿಲೀಸ್‌ ದಿನ ಅಬ್ಬರಿಸಿದ್ದ ಕ್ರಾಂತಿ ನಂತರ 3 ದಿನಗಳಲ್ಲಿ ಗಳಿಸಿದೆಷ್ಟು ಗೊತ್ತಾ ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಕಳೆದ ಗುರುವಾರ ( ಜನವರಿ 26 ) ಗಣರಾಜ್ಯೋತ್ಸವದ ರಜಾ ದಿನದಂದು ಭರ್ಜರಿಯಾಗಿ ರಿಲೀಸ್‌ ಆಗಿದೆ. ಮಾಧ್ಯಮಗಳ ವಿರೋಧ ಕಟ್ಟಿಕೊಂಡು ಯಾವುದೇ ಪ್ರಚಾರವಿಲ್ಲದೇ ಬಿಡುಗಡೆಯಾದ ಕ್ರಾಂತಿ ಸಿನಿಮಾ ಅಬ್ಬರದ ಓಪನಿಂಗ್ ‌(Kranti Movie 4th day Collection) ಪಡೆದುಕೊಂಡು ವಿರೋಧಿಗಳ ಹುಬ್ಬೇರುವಂತೆ ಮಾಡಿತ್ತು. ಆದರೆ ಮೊದಲ ದಿನ ಆದ ಬುಕಿಂಗ್‌ಗೂ ನಂತರದ ದಿನಗಳಲ್ಲಿ ಆದ ಬುಕಿಂಗ್‌ಗೂ ತೀವ್ರ ವ್ಯತ್ಯಾಸವಿತ್ತು. ಹೌದು, ಮೊದಲ ದಿನ ಹೆಚ್ಚು ಹೌಸ್‌ಫುಲ್ ಪ್ರದರ್ಶನಗಳನ್ನು ಕಂಡ ಕ್ರಾಂತಿ ಸಿನಿಮಾ ನಂತರದ ದಿನಗಳಲ್ಲಿ ಬೆರಳೆಣಿಕೆಯಷ್ಟು ಪ್ರದರ್ಶನಗಳಲ್ಲಿ ಮಾತ್ರ ಹೌಸ್‌ಫುಲ್ ಆಗಿತ್ತು. ಸಿನಿ ರಸಿಕರು ತುಂಬಿರುವ ಬೆಂಗಳೂರಿನಂತಹ ಮಹಾನಗರದ ಮಲ್ಪಿಪ್ಲೆಕ್ಸ್‌ಗಳಲ್ಲಿ ಟಿಕೆಟ್‌ಗಳು ತೀರಾ ಕಡಿಮೆ ಮಟ್ಟದಲ್ಲಿ ಮಾರಾಟವಾಗಿದ್ದವು. ಅದರಲ್ಲಿಯೂ ಎರಡನೇ ದಿನ ಹತ್ತಕ್ಕಿಂತ ಹೆಚ್ಚು ಪ್ರದರ್ಶನಗಳು ಸೋಲ್ಡ್ ಔಟ್ ಕೂಡ ಆಗಿರಲಿಲ್ಲ.

ಹೀಗೆ ಎರಡನೇ ದಿನ ಆನ್‌ಲೈನ್‌ ಬುಕಿಂಗ್‌ನಲ್ಲಿ ಮಂಕಾದ ಕ್ರಾಂತಿ ಆಫ್‌ಲೈನ್‌ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಸದ್ದು ಮಾಡದಿದ್ದರೂ ಸಮಾಧಾನಕರ ಮಟ್ಟದಲ್ಲಿ ಟಿಕೆಟ್‌ಗಳು ಮಾರಾವಾಗಿದ್ದವು. ಇನ್ನು ಮೂರನೇ ದಿನ ಶನಿವಾರದಂದು ಹೆಚ್ಚೇನೂ ವ್ಯತ್ಯಾಸ ಕಾಣದ ಕ್ರಾಂತಿ ಸಿನಿಮಾದ ಬುಕಿಂಗ್‌ನಲ್ಲಿ ಭಾನುವಾರ ತುಸು ಸುಧಾರಣೆ ಕಂಡಿದೆ. ಭಾನುವಾರದಂದು ಬೆಂಗಳೂರಿನಲ್ಲಿ ಸಿನಿಮಾದ ಸುಮಾರು 30 ಪ್ರದರ್ಶನಗಳು ಸೋಲ್ಡ್ ಔಟ್ ಆಗಿದ್ದವು. ಇನ್ನು ರಾಜ್ಯದ ಉಳಿದೆಡೆ ಸಹ ಕ್ರಾಂತಿ ಸಿನಿಮಾ ಮೊದಲ ದಿನದ ಬಳಿಕ ಭಾನುವಾರ ತುಸು ಒಳ್ಳೆಯ ಬುಕಿಂಗ್ ಕಂಡಿತ್ತು.

ಇನ್ನು ಸಿನಿಮಾಕ್ಕೆ ವ್ಯಕ್ತವಾಗುತ್ತಿರುವ ಮಿಶ್ರ ಪ್ರತಿಕ್ರಿಯೆಯಿಂದ ಈ ಹಿಂದಿನ ನಟ ದರ್ಶನ್ ಸಿನಿಮಾಗಳು ಮಾಡುತ್ತಿದ್ದ ರೀತಿಯ ಕಲೆಕ್ಷನ್ ಆಗುತ್ತಿಲ್ಲ ಎಂದೇ ಹೇಳಬಹುದಾಗಿದ್ದು, ಸಿನಿಮಾ ಮೊದಲ 4 ದಿನಗಳಲ್ಲಿ ನಿರೀಕ್ಷೆ ಮಟ್ಟದಲ್ಲಿ ಗಳಿಕೆ ಕಂಡಿರುವುದಿಲ್ಲ. ಕ್ರಾಂತಿ ಸಿನಿಮಾ ಮೊದಲ ದಿನ 11.30 ಕೋಟಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿ ಅಬ್ಬರಿಸಿತ್ತು. ಹೀಗೆ ಮೊದಲ ದಿನ ಅಬ್ಬರದ ಓಪನಿಂಗ್ ಪಡೆದುಕೊಂಡಿದ್ದ ಕ್ರಾಂತಿ ಎರಡನೇ ದಿನ 4.7 ಕೋಟಿ ಹಾಗೂ ಮೂರನೇ ದಿನ 5.4 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇನ್ನು ನಾಲ್ಕನೇ ದಿನವಾದ ಜನವರಿ 29ರ ಭಾನುವಾರದಂದು ಕ್ರಾಂತಿ ಸಿನಿಮಾ 6.1 ಕೋಟಿ ಗಳಿಕೆ ಮಾಡಿದೆ ಎಂದು ಬಾಕ್ಸ್ ಆಫೀಸ್ ಪಂಡಿತರು ತಿಳಿಸಿದ್ದಾರೆ. ಈ ಮೂಲಕ ಕ್ರಾಂತಿ ಮೊದಲ ವಾರಾಂತ್ಯಕ್ಕೆ 27.5 ಕೋಟಿ ಗಳಿಸಿದೆ ಎಂಬ ಮಾಹಿತಿ ಇದೆ.

ಇನ್ನು ಕ್ರಾಂತಿ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದನ್ನು ಬಾಕ್ಸ್ ಆಫೀಸ್ ಪಂಡಿತರು ಊಹಿಸಿ ತಿಳಿಸುತ್ತಿದ್ದಾರೆಯೇ ಹೊರತು ಸಿನಿತಂಡ ಅಧಿಕೃತವಾಗಿ ಯಾವ ಮಾಹಿತಿಯನ್ನೂ ಸಹ ಹಂಚಿಕೊಂಡಿಲ್ಲ. ಸಿನಿಮಾ ಬಿಡುಗಡೆಯಾಗುವುದಕ್ಕೂ ಮುನ್ನ ಸಾಲು ಸಾಲು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದ ಸಿನಿತಂಡ ಎಷ್ಟು ಬುಕಿಂಗ್ ಆಗಿದೆ. ಅಡ್ವಾನ್ಸ್ ಬುಕಿಂಗ್‌ನಿಂದ ಎಷ್ಟು ಕಲೆಕ್ಷನ್ ಆಗಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿತ್ತು. ಆದರೆ ಬಿಡುಗಡೆಯಾದ ನಂತರ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಎಂದು ಪೋಸ್ಟ್ ಮಾಡಿದ್ದು, ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರವಾಗಿ ಮಾತ್ರ ಪೋಸ್ಟ್ ಮಾಡಿದೆ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತಿದೆ.

ಇದನ್ನೂ ಓದಿ : AI ಪೋಟೋಸ್ ಗೆ ಮನಸೋತ ಸ್ಯಾಂಡಲ್ ವುಡ್: ನಟಿಮಣಿಯರ ಪೋಟೋಸ್ ವೈರಲ್

ಇದನ್ನೂ ಓದಿ : Saanya Iyer : ಸೆಲ್ಫಿ ನೆಪದಲ್ಲಿ ಸಾನಿಯಾ ಅಯ್ಯರ್ ಕೈ ಎಳೆದ ಅಭಿಮಾನಿ! ಸಾರ್ವಜನಿಕರಿಂದ ಧರ್ಮದೇಟು

ಇದನ್ನೂ ಓದಿ : Jailer Movie : ಕಡಲನಗರಿಗೆ ಬಂದಿಳಿದ ತಲೈವಾ ರಜನಿಕಾಂತ್‌ : ಮಂಗಳೂರಿನಲ್ಲಿ “ಜೈಲರ್‌” ಚಿತ್ರೀಕರಣ

ಈ ರೀತಿ ಅಧಿಕೃತ ಮಾಹಿತಿ ಇಲ್ಲದ ಕಾರಣ ಸಿನಿಮಾ ಎಷ್ಟು ಗಳಿಸಿದೆ ಎಂಬ ಗೊಂದಲ ಸಿನಿ ರಸಿಕರಲ್ಲಿ ಹಾಗೂ ಅಭಿಮಾನಿಗಳಲ್ಲಿ ಉಂಟಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಿನಿ ರಸಿಕರ ದಿಕ್ಕು ತಪ್ಪಿಸಲು ಎರಡೇ ದಿನಕ್ಕೆ ಸಿನಿಮಾ ಐವತ್ತು ಕೋಟಿ ದಾಟಿದೆ ಎಂಬ ನಕಲಿ ರಿಪೋರ್ಟ್‌ಗಳೂ ಸಹ ಹರಿದಾಡುತ್ತಿವೆ. ಇನ್ನು ಬಾಕ್ಸ್ ಆಫೀಸ್ ಪಂಡಿತರು ಸಿನಿಮಾ ಮೊದಲ 4 ದಿನಗಳಲ್ಲಿ ಚಿತ್ರ 27 ಕೋಟಿ ಗಳಿಸಿದೆ ಎಂದು ಹೇಳುತ್ತಿದ್ದಾರೆ. ಈ ಗೊಂದಲಗಳೆಲ್ಲಾ ಸರಿ ಹೋಗಬೇಕೆಂದರೆ ಸಿನಿತಂಡ ಅಧಿಕೃತವಾಗಿ ಕಲೆಕ್ಷನ್ ರಿಪೋರ್ಟ್ ಅನ್ನು ಹಂಚಿಕೊಳ್ಳಬೇಕಿದೆ ಅಷ್ಟೇ.

Kranti Movie 4th day Collection : Do you know how much it earned in 3 days after the revolution that was created on the day of release?

Comments are closed.