ಮಂಗಳವಾರ, ಏಪ್ರಿಲ್ 29, 2025
HomeCrimeHasan crime news: ಹಣಕಾಸು ವಿಷಯಕ್ಕೆ ಯುವಕನ ಅಪರಹಣ: ನಾಲ್ಕು ದಿನದ ನಂತರ ಪತ್ತೆಯಾಯ್ತು ಶವ

Hasan crime news: ಹಣಕಾಸು ವಿಷಯಕ್ಕೆ ಯುವಕನ ಅಪರಹಣ: ನಾಲ್ಕು ದಿನದ ನಂತರ ಪತ್ತೆಯಾಯ್ತು ಶವ

- Advertisement -

ಹಾಸನ: (Hasan crime news) ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಯುವಕನೋರ್ವ ಕಿಡ್ನ್ಯಾಪ್‌ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದ್ದು, ನಾಲ್ಕು ದಿನದ ನಂತರ ಯುವಕನ ಶವ ಪತ್ತೆಯಾದ ಘಟನೆ ಹಾಸನ ತಾಲೂಕಿನ ಯೋಗಿಹಳ್ಳಿ ಫಾರೆಸ್ಟ್‌ ನಲ್ಲಿ ನಡೆದಿದೆ. ಲಿಖಿತ್‌ ಗೌಡ( 26 ವರ್ಷ) ಕೊಲೆಯಾದ ಯುವಕ.

ಮೃತ ಯುವಕ ಲಿಖಿಯತ್‌ ಗೌಡ ಕಳೆದ ಎಂಟು ತಿಂಗಳ ಹಿಂದೆ ವೈವಾಹಿಕ ಜೀವನಕ್ಕ ಕಾಲಿಟ್ಟಿದ್ದು, ಸರ್ವಿಸ್‌ ಸ್ಟೇಷನ್‌ ಒಂದನ್ನು ನಡೆಸುತ್ತಿದ್ದ. ಸರ್ವಿಸ್‌ ಸ್ಟೇಷನ್‌ ನಡೆಸುತ್ತಿದ್ದ ಲಿಖಿತ್‌ ಗೌಡನಿಂದ ನವೀನ್‌ ಎನ್ನುವಾತ ತಲಾ ೨.೫ ಲಕ್ಷ ರೂ ಸಾಲವನ್ನು ಪಡೆದುಕೊಂಡಿದ್ದ. ಇದಾದ ಬಳಿಕ ಆತ ಸಾಲ ಹಿಂದಕ್ಕೆ ತಿರುಗಿಸಿರಲಿಲ್ಲ. ಇದೇ ಕಾರಣಕ್ಕೆ ಲಿಖಿತ್‌ ಗೌಡ ಹಾಗೂ ನವೀನ್‌ ನಡೆಉವೆ ಜಗಳ ನಡೆದಿತ್ತು. ಇದರಿಂದಾಗಿ ಕೋಪಗೊಂಡಿದ್ದ ಲಿಖಿತ್‌ ಗೌಡ ನವೀನ್‌ ವಿರುದ್ದ ಹತ್ತು ಲಕ್ಷದ ಚೆಕ್‌ ಬೌನ್ಸ್‌ ಕೇಸ್‌ ಹಾಕಿ ಆಕ್ಟಿವ್‌ ಹೋಂಡಾ ಬೈಕ್‌ ಅನ್ನು ಸೀಜ್‌ ಮಾಡಿಕೊಂಡು ಬಂದಿದ್ದಾನೆ.

ಇದೇ ಜಗಳ ವಿಕೋಪಕ್ಕೆ ತಿರುಗಿ ನವೀನ್‌ ಲಿಖಿತ್‌ ಜೊತೆ ಪುನಃ ಜಗಳ ನಡೆಸಿದ್ದ. ಇದಾದ ಬಳಿಕ ನವೀನ್‌ ಲಿಖಿತ್‌ ಗೆ ಸಂಚು ರೂಪಿಸಿದ್ದು, ನವೀನ್‌ ತನ್ನ ಸ್ನೇಹಿತ ಸಾಗರ್‌ ಜೊತೆ ಫೆ.೫ ರಂದು ಸಂಜೆ ೬:೩೦ ರ ಹೊತ್ತಿಗೆ ಹಣ ಕೊಡುವುದಾಗಿ ಓಮಿನಿ ಕಾರಿನಲ್ಲಿ ಕರೆದುಕೊಂಡು ಹೋಗಿ ಕೊಲೆ ಮಾಡಿ ನಂತರ ಅಲ್ಲಿಂದ ಪರಾರಿಯಾಗಿದ್ದಾರೆ.

ಲಿಖಿತ್‌ ಗೌಡ ಮನೆಗೆ ಬಾರದಿದ್ದನ್ನು ಕಂಡ ಕುಟುಂಬಸ್ಥರು ಕೆ.ಆರ್.‌ ಪುರಂ ಪೊಲೀಸ್‌ ಠಾಣೆಯಲ್ಲಿ ಮಿಸ್ಸಿಂಗ್‌ ಕೇಸ್‌ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನೋರಕ್ಕೂ ಹೆಚ್ಚು ಪೊಲೀಸರು ತಂಡವನ್ನು ರಚಿಸಿ ತೀವ್ರ ಶೋಧಕಾರ್ಯ ನಡೆಸಿದ್ದರು. ಅಲ್ಲದೇ ಮೃತ ಲಿಖಿತ್‌, ಆರೋಪಿಗಳಾದ ನವೀನ್‌ ಹಾಗೂ ಸಾಗರ್‌ ಮೂವರ ಫೋನ್‌ ಗಳಿಗೂ ಕರೆ ಮಾಡಿದ್ದು, ಮೂರು ನಂಬರ್‌ ಗಳು ಸ್ವಿಚ್‌ ಆಫ್‌ ಆಗಿದ್ದವು. ಶೋಧಕಾರ್ಯ ಮುಂದುವರೆಸಿದ ಪೊಲೀಸರು ಕಾಡಿನಲ್ಲಿ ಪರಿಶೀಲನೆ ನಡೆಸಿದ್ದು, ಹಾಸನ ತಾಲೂಕಿನ ಯೋಗಿಹಳ್ಳಿ ಫಾರೆಸ್ಟ್‌ನಲ್ಲಿ ಲಿಖಿತ್‌ ಗೌಡ ಅವರ ಶವ ಪತ್ತೆಯಾಗಿದೆ.

ಇದನ್ನೂ ಓದಿ : College lecturer committed suicide: ಮಂಗಳೂರು : ಕಾಲೇಜು ಉಪನ್ಯಾಸಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಇದನ್ನೂ ಓದಿ : Sexual assault-couple arrested : ಮಗುವಿನ ಆರೈಕೆಗೆ ಇದ್ದ ಬಾಲಕಿಗೆ ಚಿತ್ರಹಿಂಸೆ, ಲೈಂಗಿಕ ದೌರ್ಜನ್ಯ: ದಂಪತಿ ಅರೆಸ್ಟ್‌

ಶವ ಪತ್ತೆಯಾದ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಂ ಶಂಕರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಹುಡುಕಾಟ ನಡೆಸುತ್ತಿದ್ದಾರೆ.

Hasan crime news: Youth’s crime for financial matters: Dead body found after four days

RELATED ARTICLES

Most Popular